92.7 ಬಿಗ್ ಎಫ್‌ಎಂನಲ್ಲಿ ಸದ್ಗುರು ಅವರ 'ಯೋಚನೆ ಯಾಕೆ ಚೇಂಜ್ ಓಕೆ' ಕಾರ್ಯಕ್ರಮ
ಬೆಂಗಳೂರು,ಫೆಬ್ರವರಿ 11: ಖ್ಯಾತ ಆಧ್ಯಾತ್ಮಿಕ ಗುರು ಸದ್ಗುರು ಅವರ 'ಧುನ್ ಬದಲ್‌ಕೆ ತೋ ದೇಖೋ 2 ಕಾರ್ಯಕ್ರಮ ಬಿಗ್ ಎಫ್‌ಎಂನಲ್ಲಿ ಆರಂಭವಾಗಿದೆ.
ಪ್ರಥಮ ಸರಣಿಯ ಯಶಸ್ಸಿನ ಬಳಿಕ ಇಶಾ ಫೌಂಡೇಷನ್ ಹಾಗೂ 92.7 ಬಿಗ್ ಎಫ್‌ಎಂ ಈ ಕಾರ್ಯಕ್ರಮವನ್ನು ಮತ್ತೆ ಆರಂಭಿಸಿದೆ. ಪ್ರತಿ ದಿನ ಬೆಳಗ್ಗೆ 8 ರಿಂದ 9ರವರೆಗೆ ಹಾಗೂ ಸಂಜೆ 4 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ಬಿಗ್‌ಎಫ್‌ಎಂನ ಎಲ್ಲಾ 58 ಕೇಂದ್ರಗಳಲ್ಲಿ ಪ್ರಸಾರವಾಗಲಿದೆ.
ಆರೋಗ್ಯ,ವಿಜ್ಞಾನ, ಯುವಜನತೆ,ಆಧ್ಯಾತ್ಮ,ಧರ್ಮ,ಕಾರ್ಯ,ಸಮಾಜ ಯಶಸ್ಸು ಸೇರಿದಂತೆ ಇತರೆ ಗುಣಾತ್ಮಕ ವಿಚಾರಗಳ ಬಗ್ಗೆ ಸದ್ಗುರು ಮಾತನಾಡಲಿದ್ದಾರೆ. ಹಾಗೂ ಶ್ರೋತೃಗಳೊಂದಿಗೆ ಸಂವಾದವನ್ನು ನಡೆಸಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸದ್ಗುರು ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಯುವ ಜನತೆಗೆ ಅಗತ್ಯವಿರುವ ಸಂಬಂಧಗಳು, ಪ್ರೀತಿ,ಆರೋಗ್ಯ,ಫಿಟ್‌ನೆಸ್ ಸೇರಿ ಕೆಲ ವಿಚಾರಗಳ ಬಗ್ಗೆ ಗಮನವಹಿಸಲಿದ್ದೇವೆ.
ಹಾಗೆಯೇ ಈ ಹಿಂದಿನ ಯುವಜನತೆ ಆಧ್ಯಾತ್ಮದ ಹೊಸ ಆಯಾಮದ ಬಗ್ಗೆ ತಿಳಿದುಕೊಳ್ಳುವ ಇರಾದೆ ಹೊಂದಿದ್ದಾರೆ.ಈ ಕಾರ್ಯಕ್ರಮದ ಅವಧಿಯಲ್ಲಿ ಯುವಜನತೆಯ ಎಲ್ಲಾ ನಿರೀಕ್ಷೆಗಳಿಗೆ ತಕ್ಕಂತೆ ಮಾತನಾಡಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಬಿಗ್ ಎಫ್‌ಎಂನ ಮಾರ್ಕೆಟಿಂಗ್ ಮುಖ್ಯಸ್ಥ ಸುನಿಲ್ ಮಾತನಾಡಿ, ಯಶಸ್ವಿಯಾಗಿ ಧನ್ ಬದಲ್‌ಕೆ ದೇಖೋ, ಈ ಬಾರಿ ಇನ್ನಷ್ಟು ಹೊಸತನದೊಂದಿಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ಕೇಳುಗರಲ್ಲಿ ಧನಾತ್ಮಕ ವಿಚಾರವನ್ನು ತುಂಬುವ ಕಾರ್ಯಕ್ರಮ ಇದಾಗಿದೆ.
ಈ ಬಾರಿ ಬಿಗ್ ಎಫ್‌ಎಂನ ಎಲ್ಲಾ ಕೇಂದ್ರಗಳಲ್ಲಿ ಈಕಾರ್ಯಕ್ರಮಗಳನ್ನು ಕೇಳುವುದರ ಜತೆಗೆ ಬಿಗ್ ರೇಡಿಯೋ ಆನ್‌ಲೈನ್ ಹಾಗೂ ಇತರೆ ಹತ್ತು ಆನ್‌ಲೈನ್ ಸ್ಟ್ರೀಮಿಂಗ್ ವೇದಿಕೆಗಳು ದೊರೆಯಲಿದೆ.