Bharat Taxi: ಚಾಲಕರಿಗೆ ಸಿಹಿ ಸುದ್ದಿ! ಭಾರತ್ ಟ್ಯಾಕ್ಸಿ ಯೋಜನೆಯಿಂದ ಮಾಲೀಕರಾಗುವ ಅವಕಾಶ
ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಸಹಕಾರ ತತ್ವದಡಿಯಲ್ಲಿ ಆರಂಭವಾಗಿರುವ ಭಾರತ್ ಟ್ಯಾಕ್ಸಿ ಕುರಿತು ಚಾಲಕರೊಂದಿಗೆ ಸಂವಾದ ನಡೆಸಿ ಈ ಹೊಸ ವ್ಯವಸ್ಥಯು ಟ್ಯಾಕ್ಸಿ ಚಾಲಕರ ಬದುಕಿನಾಲ್ಲಿ ದೊಡ್ಡ ಬದಲಾವಣೆ ತರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಮುಲ್ ಸಂಸ್ಥೆಯ ಮಾದರಿಯಲ್ಲೇ ಭಾರತ್ ಟ್ಯಾಕ್ಸಿಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಚಾಲಕರು ಕೇವಲ ಸೇವಕರಾಗಿ ಉಳಿಯದೆ ಉದ್ದಿಮೆಯ ಮಾಲೀಕರಾಗಿ ಬೆಳೆಯಬೇಕು ಎಂಬುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಇಲ್ಲಿವೆ ಅದರ ಪ್ರಮುಖ ಅಂಶಗಳು
1 ಚಾಲಕರೇ ಈ ಕಂಪನಿಯ ಮಾಲೀಕರು
ಖಾಸಗಿ ಕ್ಯಾಬ್ ಕಂಪನಿಗಳಲ್ಲಿ ಚಾಲಕರನ್ನು 'ಪಾಲುದಾರರು' ಎಂದು ಕರೆಯಲಾಗುತ್ತದೆಯಾದರೂ ಅವರಿಗೆ ಕಂಪನಿಯ ಷೇರುಗಳಾಗಲಿ ಅಥವಾ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇರುವುದಿಲ್ಲಾ. ಆದರೆ ಭಾರತ್ ಟ್ಯಾಕ್ಸಿಯಲ್ಲಿ ಕೇವಲ ರೊ500 ಮೊತ್ತದ ಷೇರು ಖರೀದಿಸುವ ಮೂಲಕ ಚಾಲಕರು ಈ ಸಂಸ್ಥೆಯ ಮಾಲೀಕರಾಗಬಹುದು.ಕಂಪನಿಯ ನಿರ್ದೇಶಕ ಮಂಡಳಿಯಲ್ಲಿ ಚಾಲಕರಿಗೂ ಮೀಸಲಾತಿ ಇರಲಿದ್ದು ಚಾಲಕರ ಪ್ರತಿನಿಧಿಗಳು ಅವರ ಹಿತಾಸಕ್ತಿಗಳನ್ನು ಕಾಪಾಡಲಿದ್ದಾರೆ.

2 80% ಲಾಭಾಂಶ ಚಾಲಕರಿಗೆ ವಾಪಸ್
ಖಾಸಗಿ ಕಂಪನಿಗಳು ಲಾಭಾವನ್ನು ಕಾಫೋರೇಟ್ ಉದ್ದೇಶಗಳಿಗೆ ಬಳಿಸಿದರೆ ಭಾರತ್ ಟ್ಯಾಕ್ಸಿ ಚಾಲಕರ ಪರವಾಗಿ ಕೆಲಸ ಮಾಡಲಿದೆ, ಕಂಪನಿಯ ಒಟ್ಟು ಲಾಭದಲ್ಲಿ ಶೇ.20ರಷ್ಟು ಮೊತ್ತವನ್ನು ಮೀಸಲು ನಿಧಿಯಾಗಿ ಇರಿಸಿಕೊಳ್ಳುತ್ತದೆ. ಉಳಿದ ಶೇ. 80ರಷ್ಟು ಲಾಭಾಂಶವನ್ನು ಪ್ರತಿ ಕಿಲೋ ಮೀಟರ್ ಸರಾಸರಿ ಆಧಾರದ ಮೇಲೆ ಚಾಲಕರಿಗೇ ಹಂಚಿಕೆ ಮಾಡಲಾಗುತ್ತದೆ.
3 ಮಹಿಳಾ ಸುರಕ್ಷತೆಗೆ 'ಸಾರಥಿ ದೀದಿ'
ಭಾರತ್ ಟ್ಯಾಕ್ಸಿ ಸೇವೆಯಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಆ ಎಂಬ ವಿಶೇಷ ವೈಶಿಷ್ಟ್ಯವನ್ನು ಅಳವಡಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಸಹಾಯ ಪಡೆಯಲು ಆನ್‌ಲೈನ್ ಮತ್ತು ಭೌತಿಕ ಸಹಾಯ ಕೇಂದ್ರಗಳ ಸೌಲಭ್ಯವಿರುತ್ತದೆ.
4 ಹೊಸ ವಾಹನ ಖರೀದಿಗೆ ಸಾಲದ ಸೌಲಭ್ಯ
ಈ ಯೋಜನೆಯಡಿ ನೋಂದಾಯಿತರಾದ ಚಾಲಕರಿಗೆ ಸಹಕಾರ ಬ್ಯಾಂಕ್‌ಗಳ ಮೂಲಕ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಹೊಸ ವಾಹನ ಖರೀದಿಸಲು ಸಾಲದ ಸೌಲಭ್ಯ ನೀಡಲಾಗುವುದು ಎಂದು ಅಮಿತ್ ಶಾ ಅವರು ಭರವಸೆ ನೀಡಿದ್ದಾರೆ.
5 ವಿಸ್ತರಣಾ ಯೋಜನೆ
ಮೊದಲ ಮೂರು ವರ್ಷಗಳ ಕಾಲ ಕಂಪನಿಯನ್ನು ವಿವಿಧ ನಗರಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ, ಇವಾಗ ದೆಹಲಿ, ಎನ್ಸಿರ್ ತರಲಾಗಿದೆ ಮುಂದಿನ ದಿನಗಳಲ್ಲಿ ದೇಶದ ಪ್ರತಿ ಪ್ರಮುಖ ನಗರಗಳಲ್ಲಿಯೂ ಭಾರತ್ ಟ್ಯಾಕ್ಸಿ ಸೇವೆ ಲಭ್ಯವಾಗಲಿದೆ. ಈ ಮೂಲಕ ಕೇಂದ್ರ ಸರ್ಕಾರ ದೇಶದ ಚಾಲಕರಿಗೆ ಸಿಹಿ ಸುದ್ದಿ ನೀಡಿದ್ದು, ಈ ಅವಕಾಶವನ್ನು ಬಳಸಿಕೊಳ್ಳುವಂತೆ ಕೋರಿದೆ.












Click it and Unblock the Notifications