Bharat Rice: ಭಾರತ್ ರೈಸ್ ಮಾರಾಟ ತಾತ್ಕಾಲಿಕವಾಗಿ ಸ್ಥಗಿತ: ಗ್ರಾಹಕರು ತತ್ತರ!
ದೆಹಲಿ ಜುಲೈ 4: ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಮತದಾರರನ್ನು ಸೆಳೆಯುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಭಾರತ್ ರೈಸ್ ಯೋಜನೆಯನ್ನು ಕೇಂದ್ರ ಸರ್ಕಾರ ಜುಲೈನಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಹೌದು... ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ದಿನಸಿ ವಿತರಣೆಯ ಉದ್ದೇಶದಿಂದ ಎಲ್ಲಾ ಜನರಿಗೆ ಕಡಿಮೆ ಬೆಲೆಯಲ್ಲಿ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಭಾರತ್ ರೈಸ್ ಅನ್ನು ಬಿಡುಗಡೆ ಮಾಡಿತ್ತು.

ದೂರದ ಪ್ರದೇಶಗಳಿಗೆ ದಿನಸಿಗಳನ್ನು ತಲುಪಿಸುವ ಉದ್ದೇಶದಿಂದ ಆನ್‌ಲೈನ್ ಆರ್ಡರ್ ವ್ಯವಸ್ಥೆ ಕೂಡ ಮಾಡಿತ್ತು. ಆದರೀಗ 5 ಕೆಜಿ ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ದೊರೆಯುತ್ತಿದ್ದ ಸಬ್ಸಿಡಿ ಅಕ್ಕಿ ಆನ್‌ಲೈನ್‌ನಲ್ಲಿಯೂ ಲಭ್ಯವಿಲ್ಲ.
ಫೆಬ್ರವರಿಯಲ್ಲಿ ಸರ್ಕಾರ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳನ್ನು ಬೆಂಬಲಿಸಲು ಭಾರತ್ ರೈಸ್ ಅನ್ನು ಪರಿಚಯಿಸಿತು. ಇದರ ಬೆಲೆ ಒಂದು ಕಿಲೋಗ್ರಾಂಗೆ ಕೇವಲ 29 ರೂಪಾಯಿ ಮಾತ್ರ. ಈ ಯೋಜನೆ ಬಡ ಕುಟುಂಬಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿತ್ತು.
ಆದರೀಗ ಭಾರತ್ ರೈಸ್ ಮಾರಾಟವನ್ನು ಜುಲೈ ತಿಂಗಳಿಂದ ಸ್ಥಗಿತ ಮಾಡಲಾಗಿದೆ. ಸರ್ಕಾರದ ಅಚ್ಚರಿಯ ಈ ಕ್ರಮ ಗ್ರಾಹಕರನ್ನು ತತ್ತರಿಸುವಂತೆ ಮಾಡಿದೆ. ನ್ಯಾಷನಲ್ ಅಗ್ರಿಕಲ್ಚರ್ ಕೋ ಆಪರೇಟಿವ್ ಮಾರ್ಕೆಟಿಂಗ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಮಾರಾಟದ ಜವಬ್ದಾರಿಯನ್ನು ವಹಿಸಿತ್ತು.
ಸಬ್ಸಿಡಿ ಭಾರತ್ ರೈಸ್ ಅನ್ನು NAFED, NCCF ಮತ್ತು ಕೇಂದ್ರೀಯ ಭಂಡಾರ್‌ನಿಂದ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಜನ ದಿನಸಿಯನ್ನು ಖರೀದಿ ಮಾಡುತ್ತಿದ್ದರು. ಹೆಚ್ಚುವರಿಯಾಗಿ ಫ್ಲಿಪ್‌ಕಾರ್ಟ್ ಮತ್ತು ಬಿಗ್ ಬಾಸ್ಕೆಟ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರತ್ ರೈಸ್ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಯೋಜಿಸಿತ್ತು. ಆದರೀಗ ಈ ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು ಇದನ್ನು ನಂಬಿಕೊಂಡಿದ್ದ ಜನರು ಕಂಗಾಲಾಗಿದ್ದಾರೆ.

ವಿಶೇಷವಾಗಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಕಡಿಮೆ ದರದಲ್ಲಿ ಗುಣಮಟ್ಟದ ಅಕ್ಕಿ ವಿತರಿಸಲು ಆರಂಭಿಸಿದ್ದ ಈ ಯೋಜನೆಯು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿ ಕೂಡ ಆಗಿತ್ತು.
ಈ ಯೋಜನೆಯ ಅಡಿ 29 ರೂಪಾಯಿಗೆ 1 ಕೆಜಿ ಅಕ್ಕಿ, 27.50 ರೂಪಾಯಿಗೆ 1 ಕೆಜಿ ಗೋಧಿ ಹಿಟ್ಟು, 60 ರೂಪಾಯಿಗೆ 1 ಕೆಜಿ ಕಡಲೆ ಬೆಳೆ ಮಾರಾಟ ಮಾಡಲಾಗುತ್ತಿತ್ತು. ಜನ ಸಂದರ್ಣಿಹೆಚ್ಚಿನ ಜಾಗಗಳಲ್ಲಿ ಮೊಬೈಲ್ ವ್ಯಾನ್ ಮೂಲಕ ಅಕ್ಕಿ, ಬೆಳೆಗಳನ್ನು ಗ್ರಾಹಕರಿಗೆ ನೀಡಲಾಗುತ್ತಿತ್ತು. ಜೂನ್ 10 ರವರೆಗೆ ಕೇಮದ್ರ ಸರ್ಕಾರ ಆದೇಶದ ಅನ್ವಯ ದಾಸ್ತಾನುಗಳು ಮಾರಾಟವಾದ ನಂತರ ಪೂರೈಕೆಯನ್ನು ಸ್ಥಗಿತ ಮಾಡಲಾಗಿದೆ. ಇದಕ್ಕೆ ಕಾರಣ ಸಹ ತಿಳಿದು ಬಂದಿಲ್ಲ.
ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಸುಮಾರು 5 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಅಕ್ಕಿಯನ್ನು ಸಹಕಾರಿ ಸಂಘಗಳಾದ NAFED, NCCF ಮತ್ತು ಕೇಂದ್ರೀಯ ಭಂಡಾರ್‌ಗಳಿಗೆ ವಿತರಣೆಗಾಗಿ ಸರಬರಾಜು ಮಾಡಿದೆ. ಭಾರತ್ ರೈಸ್ 5 ಕೆಜಿ ಮತ್ತು 10 ಕೆಜಿ ಪ್ಯಾಕೇಜ್‌ಗಳಲ್ಲಿ ಲಭ್ಯವಿತ್ತು. ಆದರೀಗ ಏಕಾಏಕಿ ಕಡಿಮೆ ಬೆಲೆಯಲ್ಲಿ ಅಕ್ಕಿ ಸೇರಿದಂತೆ ಇತರೆ ದಿನಸಿ ವಿತರಿಸುವುದನ್ನು ತಿನ್ನಿಸಿರುವುದು ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರಿದೆ.












Click it and Unblock the Notifications