ಭಾರತ್ ಜೋಡೋ ಯಾತ್ರೆ: ಡೋಲು ಬಾರಿಸಿದ ರಾಹುಲ್ ಗಾಂಧಿ
ನಾರಾಯಣಪೇಟ್ (ತೆಲಂಗಾಣ) ಅಕ್ಟೋಬರ್ 27: ದೀಪಾವಳಿ ರಜೆಯ ನಂತರ ಮತ್ತೆ ಭಾರತ್ ಜೋಡೋ ಯಾತ್ರೆ ಪಯಣ ಆರಂಭವಾಗಿದೆ. ಇಂದು ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮಖ್ತಲ್ ನಿಂದ ಯಾತ್ರೆ ಆರಂಭಿಸಲಾಗಿದೆ. ಈ ವೇಳೆ ರಾಹುಲ್ ಗಾಂಧಿ ಸ್ಥಳೀಯ ಕಲಾವಿದರನ್ನು ಭೇಟಿ ಮಾಡಿದರು. ಈ ವೇಳೆ ಡೋಲು ಬಾರಿಸುವ ಮೂಲಕ ಕಾರ್ಯಕರ್ತರೂ ಕೂಡ ಸಂಭ್ರಮಿಸಿದರು.
3 ದಿನಗಳ ವಿರಾಮದ ನಂತರ ಇಂದು ಬೆಳಗ್ಗೆ 6 ಗಂಟೆಗೆ ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮಖ್ತಲ್‌ನಿಂದ ಭಾರತ್ ಜೋಡಿ ಯಾತ್ರೆಯನ್ನು ಆರಂಭಿಸಲಾಯಿತು. ಇಂದಿಗೆ ಭಾರತ್ ಜೋಡೋ ಯಾತ್ರೆ 50ನೇ ದಿನಕ್ಕೆ ಕಾಲಿಟ್ಟಿದೆ. ರಾಹುಲ್ ಗಾಂಧಿ ಇಂದು ಅಲ್ಲಿನ ರೈತರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ವಿಡಿಯೋದಲ್ಲಿ ರಾಹುಲ್ ಗಾಂಧಿ ಸ್ಥಳೀಯ ಕಲಾವಿದರೊಂದಿಗೆ ಡೋಲು ಬಾರಿಸುವ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ರಾಹುಲ್ ಗಾಂಧಿ ಅವರನ್ನು ಜನ ಸುತ್ತುವರಿದಿರುವುದು ಕಂಡುಬರುತ್ತದೆ. ರಾಹುಲ್ ಗಾಂಧಿ ಸ್ಥಳೀಯ ಡೋಲು ಕಲಾವಿದರ ಜತೆಗೆ ಡೋಲು ಬಾರಿಸುತ್ತಿದ್ದಾರೆ. ಇದರಿಂದ ಅಲ್ಲಿದ್ದ ಜನ ಸಂತೋಷ ಪಡುತ್ತಾರೆ.
Local artists के साथ ढोल बजाते, @RahulGandhi #BharatJodoYatra #Telangana pic.twitter.com/sKaqEInbky
— Supriya Bhardwaj (@Supriya23bh) October 27, 2022

ಎಷ್ಟು ದೂರ ಕ್ರಮಿಸಿದೆ?
ಭಾರತ್ ಜೋಡೋ ಯಾತ್ರೆ ಇದುವರೆಗೆ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದ ನಾಲ್ಕು ರಾಜ್ಯಗಳ 18 ಜಿಲ್ಲೆಗಳನ್ನು ಒಳಗೊಂಡು 1,230 ಕಿ.ಮೀ. ಕ್ರಮಿಸಿದೆ. ನಾಂದೇಡ್ ಮೂಲಕ ಮಹಾರಾಷ್ಟ್ರವನ್ನು ಪ್ರವೇಶಿಸುವ ಮೊದಲು 11 ದಿನಗಳಲ್ಲಿ ತೆಲಂಗಾಣದ ಎಂಟು ಜಿಲ್ಲೆಗಳನ್ನು ಪ್ರಯಾಣಿಸುತ್ತದೆ.
ಬಿಜೆಪಿಯು ಸಮಾಜವನ್ನು ವಿಭಜಿಸುತ್ತಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್, ದೇಶವನ್ನು ಒಂದುಗೂಡಿಸುವ ಉದ್ದೇಶದಿಂದ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದೆ. ಕಳೆದ ಸೆಪ್ಟೆಂಬರ್ 7ರಂದು ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಯು 3,570 ಕಿಮೀವರೆಗೂ ಸಂಚರಿಸಲಿದೆ. ಮುಂದಿನ ಐದು ತಿಂಗಳವರೆಗೂ ನಡೆಯಲಿರುವ ಯಾತ್ರೆಯು ಫೆಬ್ರವರಿ ಅಂತ್ಯದವರೆಗೆ ಮುಂದುವರಿಯುತ್ತದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು 12 ರಾಜ್ಯಗಳಲ್ಲಿ ಹಾದುಹೋಗುತ್ತದೆ.

ಕಾರ್ಯಕರ್ತರಿಗೆ ಬೆಳ್ಳಿ ನಾಣ್ಯ ನೀಡಿ ಶುಭ ಕೋರಿದ ರಾಜುಲ್ ಗಾಂಧಿ
''ನೀವು ಮಾತನಾಡಬೇಡಿ, ಕೆಲಸ ಮಾಡಿ. ಹೇಳಬೇಡಿ, ಮಾಡಿ ತೋರಿಸಿ, ಭರವಸೆ ನೀಡಬೇಡಿ, ಸಾಬೀತುಪಡಿಸಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನಾನು ದೀಪಾವಳಿಯ ಶುಭಾಶಯಗಳನ್ನು ಕೋರುತ್ತೇನೆ," ಎಂದು ರಾಹುಲ್ ಗಾಂಧಿಯವರು ಎಲ್ಲಾ ಯಾತ್ರಿಗಳು ಮತ್ತು ಭಾರತ್ ಜೋಡೋಗಾಗಿ ದುಡಿದ ಪ್ರತಿಯೊಬ್ಬರಿಗೂ ತಮ್ಮ ಪತ್ರದ ಮೂಲಕ ತಿಳಿಸಿದ್ದಾರೆ.
ಇನ್ನೂ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ ಕಾರ್ಯಕರ್ತರು, ಯಾತ್ರೆಯಲ್ಲಿನ ಚಾಲಕರು ಮತ್ತು ಕಾರ್ಮಿಕರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದು ಬೆಳ್ಳಿ ನಾಣ್ಯ ಮತ್ತು ಸಿಹಿತಿಂಡಿಗಳನ್ನು ನೀಡಿದ್ದಾರೆ.

ಭಾರತ್ ಜೋಡೋ ಯಾತ್ರೆ ಕರ್ನಾಟಕದ ಮೇಲೆ ಪ್ರಭಾವ
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಕರ್ನಾಟಕದ ಮೇಲೆ ಮಾಡಿದ ಪ್ರಭಾವವನ್ನು ಅಧ್ಯಯನ ಮಾಡಿ, ಕಾರ್ಯತಂತ್ರಗಳ ರೂಪಿಸಲು ಕಾಂಗ್ರೆಸ್ ಮುಂದಾಗಿದೆ. 2023 ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಮತ್ತು ಹಳೇ ಮೈಸೂರು ಮುಂತಾದ ಪ್ರದೇಶಗಳಲ್ಲಿ ಕಾರ್ಯತಂತ್ರಗಳ ರೂಪಿಸಲು ಕಾಂಗ್ರೆಸ್ ಈ ಅಧ್ಯಯನ ನಡೆಸಲಿದ್ದು, ಮುಂದಿನ ದಿನಗಳಲ್ಲಿ ರ್ಯಾಲಿಗಳನ್ನು ಆರಂಭಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಬೆಲೆ ಏರಿಕೆಯಿಂದ ಜನರಿಗೆ ಬೇಸರ ತಂದ ಬಿಜೆಪಿ
ಯಾತ್ರೆಗೆ ಜನರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತ್ ಜೋಡೋ ಯಾತ್ರೆಯು ರಾಜಕೀಯವಾಗಿ ಕಾಂಗ್ರೆಸ್‌ಗೆ ಪ್ರಯೋಜನವನ್ನು ನೀಡಿದೆ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಬಗ್ಗೆ ಜನರಲ್ಲಿ ಬೇಸರವಿರುವುದು ಕಾಂಗ್ರೆಸ್ ಗಮನಿಸಿದೆ. ಬೆಲೆ ಏರಿಕೆ, ಎಲ್‌ಪಿಜಿ ಬೆಲೆ, ನಿರುದ್ಯೋಗ, ದ್ವೇಷ, ಭ್ರಷ್ಟಾಚಾರ, ರಸಗೊಬ್ಬರದ ಬೆಲೆ ಮುಂತಾದ ಸಮಸ್ಯೆಗಳು ಜನರಿಗೆ ಬೇಸರ ತಂದಿವೆ. ಇದರಿಂದ ಮುಂದಿನ ಚುನಾವಣೆಗೆ ಕಾಂಗ್ರೆಸ್‌ನ ಈ ಯಾತ್ರೆ ಕೈ ಹಿಡಿಯುತ್ತಾ ಕಾದು ನೋಡಬೇಕಿದೆ.












Click it and Unblock the Notifications