ಮಂಡ್ಯದಲ್ಲಿ ಭಾರತ್ ಜೋಡೋ ಯಾತ್ರೆ: ಸೋನಿಯಾ ಗಾಂಧಿ ಶೂ ಸರಿಪಡಿಸಿದ ರಾಹುಲ್ ಗಾಂಧಿ

ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿಂದು (ಅಕ್ಟೋಬರ್ 6) ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರ ರಾಹುಲ್ ಗಾಂಧಿ ಅವರೊಂದಿಗೆ ಪಾಲ್ಗೊಂಡರು. ಪಾದಯಾತ್ರೆ ವೇಳೆ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಶೂಗಳನ್ನು ಸರಿಪಡಿಸಿದರು.

ಜಕನಹಳ್ಳಿ ತಲುಪಿ ಪಾಂಡವಪುರ ತಾಲೂಕಿನಿಂದ ಬೆಳಗ್ಗೆ 6.30ಕ್ಕೆ ಪುನರಾರಂಭಗೊಂಡ ಪಾದಯಾತ್ರೆ ಸಂಜೆ 7ಕ್ಕೆ ನಾಗಮಂಗಲ ತಾಲೂಕಿನಲ್ಲಿ ಕೊನೆಗೊಳ್ಳಲಿದೆ. ಈ ವೇಳೆ ಸೋನಿಯಾ ಗಾಂಧಿ ಅವರೊಂದಿಗೆ ಸ್ಥಳೀಯ ಮಹಿಳಾ ಶಾಸಕರಾದ ಅಂಜಲಿ ನಿಂಬಾಳ್ಕರ್, ರೂಪಕಲಾ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಪಾಲ್ಗೊಂಡಿದ್ದರು.

ಪಾದಯಾತ್ರೆ ಬಳಿಕ ಬ್ರಹ್ಮದೇವರಹಳ್ಳಿ ಗ್ರಾಮದಲ್ಲಿ ಸಭೆ ನಡೆಯಲಿದೆ. ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಕಳೆದ ಶುಕ್ರವಾರ ಪಕ್ಷದ ನಾಯಕ ರಾಹುಲ್ ಗಾಂಧಿ ಕೇರಳದ ಗಡಿಯಲ್ಲಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲಕ ಕರ್ನಾಟಕಕ್ಕೆ ಪ್ರವೇಶಿಸಿದರು.

ಕರ್ನಾಟಕದಲ್ಲಿ 21 ದಿನಗಳ ಕಾಲ 511 ಕಿ.ಮೀ. ಯಾತ್ರೆ

ಮಂಡ್ಯ ಜಿಲ್ಲೆಯಲ್ಲಿ ನಡೆದ ಪಾದಯಾತ್ರೆಯ ವಿವರಗಳನ್ನು ಹಂಚಿಕೊಂಡ ಕಾಂಗ್ರೆಸ್, "ಭರವಸೆ, ಪ್ರೀತಿ ಮತ್ತು ವಿಜಯದ ಪಯಣ, ಇದು ಭಾರತಜೋಡೊ ಯಾತ್ರೆಯ ಸ್ಫೂರ್ತಿಯಾಗಿದೆ, ಇದು ಪಾಂಡವಪುರ ತಾಲೂಕಿನಿಂದ ಪುನರಾರಂಭಗೊಂಡು ಇಂದು ನಾಗಮಂಗಲ ತಾಲೂಕಿನಲ್ಲಿ ಕೊನೆಗೊಳ್ಳಲಿದೆ" ಎಂದು ಬರೆದುಕೊಂಡಿದೆ.

ಯಾತ್ರೆಯು ಕರ್ನಾಟಕದಲ್ಲಿ 21 ದಿನಗಳ ಕಾಲ 511 ಕಿ.ಮೀ. ನಡೆಯಲಿದೆ. ಈ ಯಾತ್ರೆ ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿರುತ್ತದೆ.

ಮಡಿಕೇರಿಯಲ್ಲಿ ಎರಡು ದಿನ ತಂಗಿದ್ದ ಸೋನಿಯಾ

ಮಡಿಕೇರಿಯಲ್ಲಿ ಎರಡು ದಿನ ತಂಗಿದ್ದ ಸೋನಿಯಾ

ವೈದ್ಯಕೀಯ ತಪಾಸಣೆಗಾಗಿ ವಿದೇಶದಲ್ಲಿದ್ದ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಸೋಮವಾರ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಸೋನಿಯಾಗಾಂಧಿ ಅವರು ಮಡಿಕೇರಿಗೆ ತೆರಳಿ ಖಾಸಗಿ ರೆಸಾರ್ಟ್‌ನಲ್ಲಿ ತಂಗಿದ್ದರು. ಇದೇ ವೇಳೆ ಮೈಸೂರಿನಲ್ಲಿ ಪ್ರಚಾರ ಮುಗಿಸಿದ ರಾಹುಲ್ ಗಾಂಧಿ, ಮಡಿಕೇರಿಗೆ ತೆರಳಿ ತಾಯಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದರು. ಮಡಿಕೇರಿಯಲ್ಲಿ ಎರಡು ದಿನ ಕಳೆದರು.

ಕಬಿನಿ ಮೀಸಲು ಅರಣ್ಯ ಪ್ರದೇಶವಾದ ಕಡೆಗದ್ದೆಗೆ ಬುಧವಾರ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದರು. ಹಿನ್ನೀರಿನ ಅರಣ್ಯ ಸಫಾರಿಗೂ ಹೋಗಿದ್ದರು. ಸ್ಥಳೀಯ ಶಾಸಕ ಅನಿಲ್ ಚಿಕ್ಕಮಾದು ಜೊತೆಗಿದ್ದರು. ಗುರುವಾರ ಬೆಳಗ್ಗೆ ಕಬಿನಿ ಹಿನ್ನೀರಿನ ಬಳಿ ಪಾದಯಾತ್ರೆಗೆ ತೆರಳುವ ಮುನ್ನ ಪಕ್ಷದ ಮುಖ್ಯಸ್ಥರು ತೋಟವೊಂದರಲ್ಲಿ ಸಸಿ ನೆಟ್ಟರು.

ಮಳೆಯಲ್ಲಿ ನೆನೆದು ರಾಹುಲ್ ಭಾಷಣ

ಮಳೆಯಲ್ಲಿ ನೆನೆದು ರಾಹುಲ್ ಭಾಷಣ

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು ಸೋಮವಾರ, ಅಕ್ಟೋಬರ್ 3 ರಂದು ಬೆಳಗ್ಗೆ 6:30 ಕ್ಕೆ ಮೈಸೂರು ನಗರದಿಂದ ಪುನರಾರಂಭಗೊಂಡಿತು. ಭಾರಿ ಮಳೆಯ ನಡುವೆ ರಾಹುಲ್ ಗಾಂಧಿ ಭಾಷಣ ಮಾಡಿದ್ದು, ಮಳೆಯಲ್ಲಿ ನೆನೆದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವ ದೃಶ್ಯಗಳು ವೈರಲ್ ಆಗಿವೆ.

ವಯನಾಡ್ ಸಂಸದರು ಈ ವಿಡಿಯೋವನ್ನು ಶೇರ್ ಮಾಡಿದ್ದು, "ಭಾರತವನ್ನು ಒಗ್ಗೂಡಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಭಾರತದ ಧ್ವನಿ ಎತ್ತುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ" ಎಂದಿದ್ದರು.

ಪೊಲೀಸ್‌ ಬಿಗಿ ಭದ್ರತೆ

ಪೊಲೀಸ್‌ ಬಿಗಿ ಭದ್ರತೆ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ರಣದೀಪ್‌ ಸಿಂಗ್‌ ಸುರ್ಜೇವಾಲ, ವೇಣುಗೋಪಾಲ್‌ ಕೂಡ ಐಕ್ಯತಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪೊಲೀಸ್‌ ಭದ್ರತೆ ಬಿಗಿಗೊಳಿಸಲಾಗಿದೆ. ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ 150 ದಿನಗಳಲ್ಲಿ 3,570 ಕಿ.ಮೀ ಕ್ರಮಿಸಲಿದೆ. ಇದು ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+