ಭಾರತ್ ಜೋಡೋ ಯಾತ್ರೆ ರಾಜಕೀಯ ಗಿಮಿಕ್: ಆರ್‌ಎಸ್‌ಎಸ್
ಛತ್ತಿಸ್‌ಗಡ, ಸೆಪ್ಟೆಂಬರ್ 13: ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಾಂಗ್ರೆಸ್‌ನ ಈ ಯಾತ್ರೆಯು ರಾಜಕೀಯ ಗಿಮಿಕ್ ಆಗಿದೆ ಎಂದು ವ್ಯಂಗ್ಯವಾಡಿದೆ. 1990ರಲ್ಲಿ ತಾವು ನಡೆಸಿದ ರಥಯಾತ್ರೆಯಂತೆ ಈಗ ಕಾಂಗ್ರೆಸ್ ಕೂಡ ಯಾತ್ರೆ ಹಮ್ಮಿಕೊಂಡಿರುವುದು ಆರ್‌ಎಸ್‌ಎಸ್‌ನಲ್ಲಿ ಅಳುಕು ಉಂಟು ಮಾಡಿದೆ ಎಂದು ಕಾಂಗ್ರೆಸ್ ಹೇಳಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಡಾ.ಮನಮೋಹನ್ ವೈದ್ಯ ಅವರು ಭಾರತ್ ಜೋಡೋ ಯಾತ್ರೆ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಯಾತ್ರೆಯ ಮೂಲಕ ಪಕ್ಷವು ರಾಜಕೀಯ ಗಿಮಿಕ್ ಮಾಡುತ್ತಿದೆ. ಜನಸಾಮಾನ್ಯರನ್ನು ಒಗ್ಗೂಡಿಸುವ ಉದ್ದೇಶವನ್ನು ಮಾಡದೆ ದ್ವೇಷ ಮತ್ತು ರಾಜಕೀಯ ತಂತ್ರದ ಮೂಲಕ ಜನರನ್ನು ಸಂಪರ್ಕಿಸಲು ಕಾಂಗ್ರೆಸ್ ಬಯಸುತ್ತದೆ ಎಂದು ಆರೋಪಿಸಿದ್ದಾರೆ. ರಾಯಪುರದಲ್ಲಿ ಸೋಮವಾರ ನಡೆದ ಅಖಿಲ ಭಾರತೀಯ ಸಮನ್ವಯ ಬೈಠಕ್‌ನ ಮೂರು ದಿನಗಳ ಸಭೆಯ ನಂತರ ಅವರು ಮಾತನಾಡಿದರು.
ಆರೆಸ್ಸೆಸ್ ಬಗ್ಗೆ ಕಾಂಗ್ರೆಸ್ ದ್ವೇಷವನ್ನು ಹೊಂದಿದೆ. ಭಾರತದ ಜನರನ್ನು ಸಂಪರ್ಕಿಸುವ ಕೆಲಸವನ್ನು ಯಾರಾದರೂ ಮಾಡಿದರೆ ಅದು ಒಳ್ಳೆಯದು. ಆದರೆ ನೀವು ದ್ವೇಷ ಅಥವಾ ಪ್ರೀತಿಯ ಮೂಲಕ ಹೇಗೆ ಸಂಪರ್ಕಿಸುತ್ತೀರಿ? ಭಾರತದ ಆಧ್ಯಾತ್ಮಿಕ ಗುರುತನ್ನು ಜಗತ್ತಿನಲ್ಲಿ ಹಿಂದುತ್ವ ಎಂದು ಕರೆಯಲಾಗುತ್ತದೆ. ಹಿಂದುತ್ವವು ಕೇವಲ ಧರ್ಮವಲ್ಲ. ಯಾರಾದರೂ ಒಗ್ಗೂಡಿಸಲು ಪ್ರಯತ್ನಿಸಿದರೆ ನಿಜವಾದ ಅರ್ಥದಲ್ಲಿ ಜನರನ್ನು ಸಂಯೋಜಿಸುವ ಅಂಶವನ್ನು ಗುರುತಿಸುವ ಮೂಲಕ ದೇಶವು ಅವನನ್ನು ಅಥವಾ ಅವಳನ್ನು ಸ್ವಾಗತಿಸುತ್ತದೆ ಎಂದು ಅವರು ಹೇಳಿದರು.
ಆರ್‌ಎಸ್‌ಎಸ್ ಸಭೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಾ ಮನಮೋಹನ್ ವೈದ್ಯ, ಮಾನವ ಕೇಂದ್ರಿತ, ಕಾರ್ಮಿಕ ಪರವಾದ ಮತ್ತು ಪರಿಸರ ಸ್ನೇಹಿಯಾದ ಭಾರತೀಯ (ಭಾರತೀಯ) ಆರ್ಥಿಕ ಮಾದರಿಯೊಂದಿಗೆ ಸ್ವಾವಲಂಬಿ ಭಾರತವನ್ನು ಕಟ್ಟಲು ಸಂಘವು ಬದ್ಧವಾಗಿದೆ. ನಮ್ಮ ಸಭೆಯು ವಿಕೇಂದ್ರೀಕರಣ, ಸಂಪತ್ತಿನ ಸಮಾನ ವಿತರಣೆ, ಗ್ರಾಮ ಆರ್ಥಿಕತೆ, ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಕೃಷಿ ಆಧಾರಿತ ಕೈಗಾರಿಕೆಗಳು ಮತ್ತು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿವುದು ಎಂದು ಅವರು ಹೇಳಿದರು.

240ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಜರು
ಸೋಮವಾರ ನಡೆದ ಈ ಸಭೆಯಲ್ಲಿ ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸಹ ಕಾರ್ಯನಿರ್ವಹಕ ದತ್ತಾತ್ರೇಯ ಹೊಸಬಾಳೆ, ಐವರು ಸಹ ಸಹ ಕಾರ್ಯನಿರ್ವಹಕ ಡಾ.ಕೃಷ್ಣಗೋಪಾಲ್, ಡಾ.ಮನಮೋಹನ್ ವೈದ್ಯ, ಅರುಣ್ ಕುಮಾರ್, ಮುಕುಂದ ಮತ್ತು ರಾಮದತ್ತ ಚಕ್ರಧರ್ ಉಪಸ್ಥಿತರಿದ್ದರು. ಇದಲ್ಲದೆ, 36 ಸಂಘಟನೆಗಳು ಮತ್ತು ಆರ್‌ಎಸ್‌ಎಸ್ ಬೆಂಬಲಿತ ಸಂಘಟನೆಗಳ 240ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸರಕುಗಳನ್ನು ಉತ್ತೇಜಿಸಲು ನಿರ್ಧಾರ
ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಎಲ್ಲಾ ಆರ್‌ಎಸ್‌ಎಸ್ ಬೆಂಬಲಿತರು ಸ್ವಾವಲಂಬನೆಗಾಗಿ ಕೆಲಸವನ್ನು ವಿಸ್ತರಿಸಲು ಚರ್ಚಿಸಿದವು. ಗ್ರಾಹಕ್ ಪಂಚಾಯತ್ ಸ್ಥಳೀಯ ಸರಕುಗಳನ್ನು ಉತ್ತೇಜಿಸಲು ನಿರ್ಧರಿಸಿದರೆ, ಸ್ವದೇಶಿ ಜಾಗರಣ ಮಂಚ್ ಭಾರತೀಯ ಆರ್ಥಿಕತೆಯನ್ನು ಅಳೆಯಲು ಹೊಸ ಮಾಪನ ವ್ಯವಸ್ಥೆಯನ್ನು ರಚಿಸುವತ್ತ ಗಮನಹರಿಸಿತು. ಜಿಡಿಪಿಯನ್ನು ಮಾನದಂಡವಾಗಿ ತೆಗೆದುಕೊಳ್ಳುವುದಷ್ಟೇ ಅಲ್ಲ ಎಂದು ಡಾ ವೈದ್ಯ ಹೇಳಿದರು.

ವೈದ್ಯಕೀಯ ವ್ಯವಸ್ಥೆಯ ಪರಿಷ್ಕೃರಣೆ
ಸಾವಯವ ಕೃಷಿಯನ್ನು ಉತ್ತೇಜಿಸುವ ಭಾರತೀಯ ಕಿಸಾನ್ ಸಂಘವು ಇದು ದೇಹದ ರೋಗಗಳಿಗೆ ಚಿಕಿತ್ಸೆ ನೀಡುವ ವಿಷಯವಲ್ಲ. ಆದರೆ ಭಾರತೀಯ ವೈದ್ಯಕೀಯ ವ್ಯವಸ್ಥೆಯ ಪರಿಷ್ಕೃರಣೆ ಮತ್ತು ಮುಂದುವರಿಕೆಯಾಗಿದೆ ಎಂದರು. ಸಂಘದ ವಿಸ್ತರಣೆಯ ಕುರಿತು ಮಾತನಾಡಿದ ಅವರು, ಈ ಕಾರ್ಯವು ವಿಶ್ವಾದ್ಯಂತ ಹರಡುತ್ತಿದೆ. ಶಾಖೆಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ ಎಂದು ಹೇಳಿದರು.

90,000 ಯುವಕರಿಂದ ಅರ್ಜಿ
"ಬಹಳಷ್ಟು ಯುವಕರು ವೆಬ್‌ಸೈಟ್ ಮೂಲಕ ಆರ್‌ಎಸ್‌ಎಸ್‌ಗೆ ಸೇರಲು ತಮ್ಮ ಆಸಕ್ತಿಯನ್ನು ತೋರಿಸಿದ್ದಾರೆ. 2017 ಮತ್ತು 2021 ರ ನಡುವೆ, 1.25 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದರೆ, ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ಸುಮಾರು 90,000 ಯುವಕರು ಆರ್‌ಎಸ್‌ಎಸ್‌ಗೆ ಸೇರಲು ಬಯಸಿದ್ದಾರೆ ಎಂದು ಅವರು ಹೇಳಿದರು.












Click it and Unblock the Notifications