ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ತಟ್ಟಲಿಲ್ಲ ಭಾರತ್ ಬಂದ್ ಬಿಸಿ!
Recommended Video

ನವದೆಹಲಿ, ಸೆಪ್ಟೆಂಬರ್ 10: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ದೇಶವ್ಯಾಪಿ ಬಂದ್‌ಗೆ ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷಗಳು ಕರೆ ನೀಡಿವೆ.
ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಾತ್ರ ತನಗೂ ಬಂದ್‌ಗೂ ಸಂಬಂಧವಿಲ್ಲ ಎಂಬಂತೆ ತನ್ನ 'ಏರುವಿಕೆ'ಯನ್ನು ಮುಂದುವರಿಸಿದೆ!
ಭಾರತ್ ಬಂದ್ ನಡುವೆಯೇ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸೋಮವಾರ ಮತ್ತೆ ಏರಿಕೆ ಕಂಡಿದೆ.
ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 23 ಮತ್ತು ಡೀಸೆಲ್ 22 ಪೈಸೆಯಷ್ಟು ಏರಿಕೆ ಕಂಡಿದೆ. ಪೆಟ್ರೋಲ್ ಲೀಟರ್‌ಗೆ 80.73 ರೂ. ಇದ್ದರೆ, ಡೀಸೆಲ್ ಬೆಲೆ 72.83 ರೂ.ಗೆ ತಲುಪಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ 88.12 ಮತ್ತು ಡೀಸೆಲ್ 77.32 ರೂ.ನಂತೆ ಮಾರಾಟವಾಗುತ್ತಿದೆ.
ಬೆಂಗಳೂರಿನಲ್ಲಿ ಭಾನುವಾರ ಪ್ರತಿ ಲೀಟರ್ ಪೆಟ್ರೋಲ್ 83.12 ರೂ ಹಾಗೂ ಡೀಸೆಲ್ 74.95 ರೂ. ಇತ್ತು. ಸೋಮವಾರ ಇದು ಕ್ರಮವಾಗಿ 83.46 ಮತ್ತು 75.26ಕ್ಕೆ ಏರಿದೆ.
ಚೆನ್ನೈನಲ್ಲಿ ಪೆಟ್ರೋಲ್ ದರ 84.00 ರೂ ಮತ್ತು ಡೀಸೆಲ್ 77.07 ರೂ. ಆಗಿದೆ.
ಕಾಂಗ್ರೆಸ್ ನೇತೃತ್ವದಲ್ಲಿ ಸುಮಾರು 21 ವಿರೋಧ ಪಕ್ಷಗಳು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.












Click it and Unblock the Notifications