ಮುಂದುವರಿದ ಹಿಂಸೆ: ದಲಿತ ಸಂಘಟನೆಗಳ ಕಿಚ್ಚಿಗೆ ಉತ್ತರ ಭಾರತ ತತ್ತರ

ಮೀರತ್, ಏಪ್ರಿಲ್ 03: ವಿವಿಧ ದಲಿತ ಸಂಘಟನೆಗಳು ನಿನ್ನೆ(ಏ.2) ಕರೆನೀಡಿದ್ದ ಭಾರತ್ ಬಂದ್ ಗೆ ಉತ್ತರ ಭಾರತ ತತ್ತರಿಸಿದೆ. ಪರಿಶಿಷ್ಟ ಜಾತಿ/ಪಂಗಡ ಕಾಯ್ದೆಯಲ್ಲಿ ತಿದ್ದುಪಡಿ ತರುವ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ನಡೆಯುತ್ತಿರುವ ಬಂದ್ ಗೆ ಇದುವರೆಗೂ 9 ಜನ ಮೃತರಾಗಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಪ್ರತಿಭಟನಕಾರರು ಅಂಬುಲೆನ್ಸ್ ಗೂ ದಾರಿ ನೀಡದ ಕಾರಣ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ತೆರಳುತ್ತಿದ್ದ ಬಿಹಾರದ ಹಾಜಿಪುರದಲ್ಲಿ ಒಂದು ಮಗು ಮತ್ತು ಉತ್ತರ ಪ್ರದೇಶದ ಬಿಜ್ನೊರ್ ನ ಓರ್ವ ವೃದ್ಧ ಮೃತರಾದ ಘಟನೆ ನಡೆದಿದೆ. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಹಿಂಸೆಯನ್ನು ತಹಬಂದಿಗೆ ತರುವುದಕ್ಕಾಗಿ ಈಗಾಗಲೇ ಉತ್ತರ ಪ್ರದೇಶದ ಮೀರತ್ ಮುಂತಾದೆಡೆಗಳಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ.

Bharat Bandh: Many North Indian states suffering today also

ಪ್ರತಿಭಟನೆ ವಿಕೋಪಕ್ಕೆ ತೆರಳಿರುವ ಮಧ್ಯಪ್ರದೇಶವೊಂದರಲ್ಲೇ 6 ಜನ ಮೃತರಾಗಿದ್ದಾರೆ.

ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ಕಾಯ್ದೆಯನ್ವಯ ಎಸ್ಸಿ ಮತ್ತು ಎಸ್ಟಿ ಪಂಗಡಗಳ ಮೇಲೆ ಯಾವುದೇ ರೀತಿಯ ದೌರ್ಜನ್ಯದ ದೂರು ಬಂದರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಈ ಕಾಯ್ದೆ ದುರುಪಯೋಗವಾಗುತ್ತಿರುವುದನ್ನು ತಪ್ಪಿಸುವ ಸಲುವಾಗಿ ಸುಪ್ರೀಂ ಕೋರ್ಟ್, ಯಾವುದೇ ದೂರು ಬಂದರೂ ಪ್ರಾಥಮಿಕ ಡಿಎಸ್ ಪಿ ತನಿಖೆಯ ನಂತರವೇ ಕ್ರಮ ಕೈಗೊಳ್ಳುವಂತೆ ತೀರ್ಪು ನೀಡಿತ್ತು. ಮತ್ತು ಆರೋಪಿಗೆ ಜಾಮೀನು ಪಡೆಯುವುದಕ್ಕೂ ಅವಕಾಶ ನೀಡಿತ್ತು. ಈ ಕ್ರಮದಿಂದ ದಲಿತರ ಹಕ್ಕನ್ನು ಕಸಿದಂತಾಗುತ್ತದೆ ಎಂಬ ಕಾರಣಕ್ಕೆ ಪ್ರತಿಭಟನೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+