• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರದ ಕರ್ಮಚಾರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

|
Google Oneindia Kannada News

ನವದೆಹಲಿ, ಜುಲೈ, 27: ಕರ್ನಾಟಕದ ಒಬ್ಬರು ಸೇರಿದಂತೆ ಭಾರತದ ಇಬ್ಬರು ಸಾಧಕರಿಗೆ 2016ನೇ ಸಾಲಿನ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ಸಂದಿದೆ. ಸಾಮಾಜಿಕ ಕಾರ್ಯಕರ್ತ ಕರ್ನಾಟಕದ ಬೇಜವಾಡಾ ವಿಲ್ಸನ್, ಸಂಗೀತ ಸಾಧಕ ಟಿ ಎಂ ಕೃಷ್ಣ ಗೌರವಕ್ಕೆ ಪಾತ್ರರಾಗಿದ್ದಾರೆ.

ಕರ್ನಾಟದಕದ ಕೋಲಾರದ ಸಾಧಕ:
ಬೇಜವಾಡಾ ವಿಲ್ಸನ್ ಕರ್ನಾಟಕದ ಕೋಲಾರದ ದಲಿತ ಕುಟುಂಬದಲ್ಲಿ 1966ರಲ್ಲಿ ಜನಿಸಿದವರು. ಸಫಾಯಿ ಕರ್ಮಚಾರಿಗಳ ಪರವಾಗಿ ಆಂದೋಲನದಲ್ಲಿ ತೊಡಗಿಕೊಂಡು ಅವರ ಹಕ್ಕುಗಳಿಗೆ ಹೋರಾಟ ಮಾಡುತ್ತ ಬಂದಿದ್ದಾರೆ. [ಕನ್ನಡಿಗ ಹರೀಶ್ ಹಂದೆಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ]

Bezwada Wilson from Karnataka win Ramon Magsaysay

ಆಂಧ್ರಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರ ಮಾಡುಕೊಂಡ ವಿಲ್ಸನ್ ಇಡೀ ದೇಶಾದ್ಯಂತ ಸಫಾಯಿ ಕರ್ಮಚಾರಿಗಳ ಪರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ.

ಟಿಎಂ ಕೃಷ್ಣ ಅವರು ಚೆನ್ನೈಅನ್ನು ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡವರು. ಕರ್ನಾಟಕ ಸಂಗೀತದಲ್ಲಿ ಸಾಧನೆ ಮಾಡಿರುವ ಕೃಷ್ಣ ಅವರಿಗೂ ಗೌರವ ಸಂದಿದೆ. ವಿವಿಧ ವಿಶ್ವವಿದ್ಯಾಲಯಗಳಿಗೆ ತೆರಳುವ ಕೃಷ್ಣ ಸಂಗೀತ ಸಾಧನೆ ಬಗ್ಗೆ ಉಪನ್ಯಾಸ ನೀಡುತ್ತಾರೆ. ಮದ್ರಾಸ್ ಮ್ಯೂಸಿಕ್ ಸ್ಕೂಲ್ ಮೂಲಕ ನೂರಾರು ಜನರಿಗೆ ಸಂಗೀತ ತರಬೇತಿ ಹೇಳಿಕೊಡುತ್ತಿದ್ದಾರೆ. [ಭಾರತದ ಇಬ್ಬರು ಸಾಧಕರಿಗೆ ಮ್ಯಾಗ್ಸೆಸ್ಸೆ ಪುರಸ್ಕಾರ]

tm krashna

ಮ್ಯಾಗ್ಸೆಸೆ ಪಡೆದ ಇತರ ಕನ್ನಡಿಗರು : ಕರ್ನಾಟಕದ ಹರೀಶ್ ಹಂದೆ (2011), ಆರ್ ಕೆ ಲಕ್ಷ್ಮಣ (1984), ಕೆ ವಿ ಸುಬ್ಬಣ್ಣ (1991) ಅವರಿಗೂ ಮ್ಯಾಗ್ಸೆಸೆ ಪ್ರಶಸ್ತಿ ಸಂದಿತ್ತು. ಇದೀಗ ಈ ಸಾಧಕರ ಸಾಲಿಗೆ ಬೇಜವಾಡಾ ವಿಲ್ಸನ್ ಸಹ ಸೇರಿಕೊಂಡಿದ್ದಾರೆ.

ಪ್ರಶಸ್ತಿಯ ಬಗ್ಗೆ
ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು 1957 ರಲ್ಲಿ ಸ್ಥಾಪನೆ ಮಾಡಲಾಯಿತು. ಫಿಲಿಪ್ಪೀನ್ಸ್ ಸರ್ಕಾರದ ಅನುಮತಿಯೊಂದಿಗೆ ಈ ಪ್ರಶಸ್ತಿಗೆ ರಾಮೋನ್ ಮ್ಯಾಗ್ಸೆಸ್ಸೆ ಇವರ ಹೆಸರನ್ನಿಡಲು ನಿರ್ಧರಿಸಲಾಯಿತು. ಫಿಲಿಪೈನ್ಸ್ ನ ಅಧ್ಯಕ್ಷರಾಗಿದ್ದ ರಾಮೋನ್ ಮ್ಯಾಗ್ಸೆಸೆ ಇವರ ಗಣತಂತ್ರ ವ್ಯವಸ್ಥೆಯಲ್ಲಿ ತಂದ ಬದಲಾವಣೆಗಳ ಆಧಾರವನ್ನಿಟ್ಟುಕೊಂಡು ಪ್ರಶಸ್ತಿಗೆ ಅವರ ಹೆಸರನ್ನು ಇಡಲಾಯಿತು. ಇದನ್ನು ಏಷ್ಯಾ ಖಂಡದ ನೊಬೆಲ್ ಪ್ರಶಸ್ತಿಯೆಂದು ಪರಿಗಣಿಸಲಾಗುತ್ತದೆ.

English summary
Two Indians, social activist Bezwada Wilson and musician TM Krishna, have won Ramon Magsaysay Award for 2016. Bezwada Wilson, born to a dalit family in Karnataka, has been praised for his efforts for "asserting the inalienable right to a life of human dignity."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X