ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡೋ ಮುನ್ನ ನಕಲಿ ಖಾತೆ ಬಗ್ಗೆ ಎಚ್ಚರವಿರಲಿ!
ಮುಂಬೈ, ಜುಲೈ 12: ಇದು ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವ ಸಮಯ. ಈ ಸಮಯದಲ್ಲಿ ಐಟಿ ಇಲಾಖೆಯ ರೀತಿಯಲ್ಲೇ ಹಲವು ನಕಲಿ ಖಾತೆಗಳಿಂದ ನಿಮಗೆ ಇ ಮೇಲ್ ಬರಬಹುದು.
ಇದು ಥೇಟ್ ಸರ್ಕಾರದ ಐಟಿ ಇಲಾಖೆಯಿಂದ ಬರುವ ಮೇಲ್ ನಂತೆಯೇ ಇರುತ್ತದೆ. ಅಕಸ್ಮಾತ್ ಈ ಇಮೇಲ್ ಅನ್ನು ಸರಿಯಾಗಿ ಪರಿಶೀಲಿಸದೆ, ಅಗತ್ಯ ವಿವರಗಳನ್ನು ಸಲ್ಲಿಸಿದ್ದೇ ಆದರೆ ಸಂಕಷ್ಟ ಕಟ್ಟಿಟ್ಟಬುತ್ತಿ!
[email protected] ಎಂಬ ಐಡಿಯಿಂದ ನಿಮಗೆ ಇಮೇಲ್ ಬಂದಿದ್ದರೆ ಅದರ ಸ್ಪೆಲಿಂಗ್ ಗಳನ್ನು ಸರಿಯಾಗಿ ಗಮನಿಸಿ. ಆದಾಯ ಇಲಾಖೆಯ ಐಡಿಯಿಂದ ಬಂದಿದ್ದಾದರೆ, [email protected] ಎಂಬ ಐಡಿಯಿಂದ ಮೇಲ್ ಬರುತ್ತದೆ. ಈ ಎರಡೂ ಮೇಲ್ ಗಳೂ ಒಂದೇ ರೀತಿ ಅನ್ನಿಸುತ್ತವಾದರೂ, ಸರಿಯಾಗಿ ಪರಿಶೀಲಿಸಿದರೆ ವ್ಯತ್ಯಾಸ ತಿಳಿಯುತ್ತದೆ.

ನಕಲಿ ಐಡಿ([email protected])ಯಲ್ಲಿ efiling ಬದಲು ಕೇವಲ filling ಎಂದಿದೆ. ಅಷ್ಟೇ ಅಲ್ಲ, filing ಬದಲು filling ಎಂದಿದೆ. ಇವನ್ನು ಪರಿಶೀಲಿಸಿದ ನಂತರವೇ ಮುಂದುವರಿಯಿರಿ.
ಈ ಕುರಿತು ಈಗಾಗಲೇ ಐಟಿ ಇಲಾಖೆ ಎಲ್ಲಾ ತೆರಿಗೆದಾರರಿಗೂ ತನ್ನ ವೆಬ್ ಸೈಟ್ ಮೂಲಕ, ಸಾಮಾಜಿಕ ಮಾಧ್ಯಮಗಳ ಮೂಲಕ, ಮೆಸೇಜ್ ಗಳ ಮೂಲಕ ಮಾಹಿತಿ ನೀಡಿದ್ದು, ಎಚ್ಚರಿಕೆ ವಹಿಸುವಂತೆ ಕೇಳಿಕೊಂಡಿದೆ.
ಚಾರ್ಟರ್ಡ್ ಅಕೌಂಟಂಟ್ ಗಳು ಈಗಾಗಲೇ ತಮ್ಮ ಗ್ರಾಹಕರಿಗೆ ವಾಟ್ಸಾಪ್ ಮೂಲಕ ಈ ಕುರಿತು ಮಾಹಿತಿ, ಮುನ್ನೆಚ್ಚರಿಕೆ ನೀಡಿದ್ದಾರೆ. "ಒಂದು ಪ್ರಮುಖ ಪ್ರಕಟಣೆ: ಈಗಾಗಲೇ ರಿಟರ್ನ್ಸ್ ಫೈಲ್ ಮಾಡಿರುವವರಿಗೆ ರೀಫಂಡ್ ಲೆಕ್ಕಾಚಾರದಲ್ಲಿ ಸ್ವಲ್ಪ ದೋಷವಾಗಿದೆ ಎಂಬ ಇಮೇಲ್ ಬಂದರೆ ಅದು ನಕಲಿ ಇ ಮೇಲ್. ಹ್ಯಾಕರ್ ಗಳು ಕಳಿಸಿದ್ದು. ಅಕಸ್ಮಾತ್ ಈ ಇಮೇಲ್ ನಲ್ಲಿರುವ ಲಿಂಕ್ ಅನ್ನೇನಾದರೂ ಕ್ಲಿಕ್ ಮಾಡಿದರೆ ನೆಟ್ ಬ್ಯಾಂಕಿಂಗ್ ಪೇಜ್ ಓಪನ್ ಆಗುತ್ತೆ. ಇಲ್ಲಿ ನಿಮ್ಮ ನೆಟ್ ಬ್ಯಾಂಕಿಂಗ್ ಡಿಟೇಲ್ಸ್ ನೀಡಿದರೆ, ನಿಮ್ಮ ಬ್ಯಾಂಕ್ ಖಾತೆಯನ್ನೇ ಹ್ಯಾಕ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಆದ್ದರಿಂದ ಇಂಥ ಈ ಮೇಲ್ ಬಗ್ಗೆ ಹುಷಾರಾಗಿರಿ. ಐಟಿ ಇಲಾಖೆಯಿಂದ ಇಂಥ ಯಾವುದೇ ಇಮೇಲ್ ಬಂದಿಲ್ಲ" ಎಂದು ಈ ಪ್ರಕಟಣೆಯಲ್ಲಿ ಹೇಳಲಾಗಿದೆ.
ಆದ್ದರಿಂದ ಐಟಿ ರಿಟರ್ನ್ಸ್ ಫೈಲ್ ಮಾಡುವವರು ಹುಷಾರಾಗಿರಿ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications