ಬೆಂಗಳೂರು vs ಗುರುಗ್ರಾಮ್: 2026ರಲ್ಲಿ ಯಾವ ನಗರದಲ್ಲಿ ಹೆಚ್ಚು ದುಡ್ಡು ಉಳಿಸಬಹುದು?

ಉದ್ಯೋಗ ಅಥವಾ ಉತ್ತಮ ಜೀವನಮಟ್ಟಕ್ಕಾಗಿ ಹೊಸ ನಗರಕ್ಕೆ ಸ್ಥಳಾಂತರಗೊಳ್ಳುವ ಯೋಚನೆಯಲ್ಲಿದ್ದರೆ, ಅಲ್ಲಿನ ಜೀವನಕ್ಕೆ ಬೇಕಾದ ಖರ್ಚು ವೆಚ್ಚ ಎಷ್ಟಿದೆ ಎಂಬುದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಭಾರತದ ಪ್ರಮುಖ ಉದ್ಯೋಗ ಕೇಂದ್ರಗಳಾದ ಬೆಂಗಳೂರು ಮತ್ತು ಗುರುಗ್ರಾಮ್ (ಹಳೆಯ ಗುರುಗಾಂವ್) ನಡುವಿನ ಜೀವನ ವೆಚ್ಚವನ್ನು ಹೋಲಿಸಿದರೆ, 2026ರಲ್ಲಿ ಬೆಂಗಳೂರೇ ಹೆಚ್ಚು ಕೈಗೆಟಕುವ ನಗರವಾಗಿದೆ ಎಂದು ಇತ್ತೀಚಿನ ಅಂಕಿ-ಅಂಶಗಳು ಸೂಚಿಸಿವೆ.

ಜಾಗತಿಕ ಜೀವನ ವೆಚ್ಚ ಮಾಹಿತಿ ನೀಡುವ ನಂಬಿಯೋ (Numbeo) ಸಂಸ್ಥೆಯ ವರದಿ ಪ್ರಕಾರ, ಮನೆ ಬಾಡಿಗೆಯನ್ನು ಹೊರತುಪಡಿಸಿ ಬೆಂಗಳೂರಿನ ಜೀವನ ವೆಚ್ಚವು ಗುರುಗ್ರಾಮ್‌ಗಿಂತ ಸುಮಾರು 12.8% ರಷ್ಟು ಕಡಿಮೆ ಇದೆ. ಬಾಡಿಗೆಯನ್ನೂ ಸೇರಿಸಿದರೂ ಬೆಂಗಳೂರಿನಲ್ಲಿ ಒಟ್ಟಾರೆ ವೆಚ್ಚ ಸುಮಾರು 10.3% ರಷ್ಟು ಕಡಿಮೆ ಆಗುತ್ತದೆ.

Bengaluru vs Gurugram

ಬಾಡಿಗೆ ದರದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ

ನಗರದ ಮಧ್ಯಭಾಗದಲ್ಲಿ ಒಂದು ಬೆಡ್‌ರೂಮ್‌ ಅಪಾರ್ಟ್‌ಮೆಂಟ್‌ಗೆ ಎರಡೂ ನಗರಗಳಲ್ಲಿ ಸುಮಾರು 30,000ಕ್ಕೂ ಹೆಚ್ಚು ಬಾಡಿಗೆ ಕೊಡಬೇಕಾಗುತ್ತದೆ. ಆದರೆ ನಗರದ ಹೊರವಲಯದಲ್ಲಿ ದೊಡ್ಡ ಕುಟುಂಬಗಳಿಗೆ ಬೇಕಾದ ಮನೆಗಳ ಬಾಡಿಗೆ ಬೆಂಗಳೂರಿನಲ್ಲಿ ಸ್ವಲ್ಪ ಕಡಿಮೆ ಇರುವುದರಿಂದ ಕುಟುಂಬಗಳಿಗೆ ಅನುಕೂಲಕರವಾಗಿದೆ.

2.2 ಲಕ್ಷ ಸಂಬಳ ಇದ್ದರೂ ಸಾಕಾಗುತ್ತಿಲ್ಲ ಎಂದ ಪುಣೆ ಮಹಿಳೆ: ನೆಟ್ಟಿಗರು ಹೇಳಿದ್ದೇನು
2.2 ಲಕ್ಷ ಸಂಬಳ ಇದ್ದರೂ ಸಾಕಾಗುತ್ತಿಲ್ಲ ಎಂದ ಪುಣೆ ಮಹಿಳೆ: ನೆಟ್ಟಿಗರು ಹೇಳಿದ್ದೇನು

ಮನೆ ಖರೀದಿಗೆ ಬೆಂಗಳೂರೇ ಬೆಸ್ಟ್‌

ಬಾಡಿಗೆಯಲ್ಲಿ ಹೆಚ್ಚು ವ್ಯತ್ಯಾಸ ಕಾಣಿಸದಿದ್ದರೂ, ಮನೆ ಖರೀದಿಸುವ ವಿಚಾರದಲ್ಲಿ ಬೆಂಗಳೂರು ಸ್ಪಷ್ಟವಾಗಿ ಮುನ್ನಡೆ ಸಾಧಿಸಿದೆ. ನಗರದ ಕೇಂದ್ರ ಭಾಗದಲ್ಲಿ ಪ್ರತಿ ಚದರ ಮೀಟರ್‌ಗೆ ಅಪಾರ್ಟ್‌ಮೆಂಟ್ ಬೆಲೆ ಗುರುಗ್ರಾಮ್‌ಗಿಂತ ಸುಮಾರು 35% ರಷ್ಟು ಕಡಿಮೆ ಇದೆ. ಹೊರವಲಯ ಪ್ರದೇಶಗಳಲ್ಲಿ ಈ ವ್ಯತ್ಯಾಸ 37% ರಷ್ಟುಕ್ಕಿಂತ ಹೆಚ್ಚು ಇದೆ. ಇದರಿಂದ ಸ್ವಂತ ಮನೆ ಖರೀದಿಸುವ ಕನಸು ಹೊಂದಿರುವವರಿಗೆ ಬೆಂಗಳೂರು ಹೆಚ್ಚು ಕೈಗೆಟಕುವ ಆಯ್ಕೆಯಾಗಿದೆ.

ವಿದ್ಯುತ್‌, ಶಿಕ್ಷಣ ವೆಚ್ಚವೂ ಕಡಿಮೆ

85 ಚದರ ಮೀಟರ್‌ ಗಾತ್ರದ ಮನೆಯ ಮಾಸಿಕ ವಿದ್ಯುತ್‌, ನೀರು ಮತ್ತು ಇತರೆ ಯುಟಿಲಿಟಿ ವೆಚ್ಚಗಳು ಬೆಂಗಳೂರಿನಲ್ಲಿ ಸುಮಾರು 31% ಕಡಿಮೆ ಇವೆ. ಮಕ್ಕಳ ಶಿಕ್ಷಣ ವೆಚ್ಚದಲ್ಲೂ ಬೆಂಗಳೂರು ಮುನ್ನಡೆಯಲ್ಲಿದೆ. ಪ್ರೀ-ಸ್ಕೂಲ್ ಶುಲ್ಕವು ಸುಮಾರು 29% ಕಡಿಮೆ ಇದ್ದರೆ, ಅಂತರರಾಷ್ಟ್ರೀಯ ಶಾಲೆಗಳ ವಾರ್ಷಿಕ ಶುಲ್ಕವೂ ಗುರುಗ್ರಾಮ್‌ಗಿಂತ ಸುಮಾರು 29% ರಷ್ಟು ಕಡಿಮೆ ಇದೆ.

ಮನರಂಜನೆ ಮತ್ತು ಫಿಟ್ನೆಸ್ ವೆಚ್ಚದಲ್ಲೂ ಉಳಿತಾಯ

ಜಿಮ್ ಅಥವಾ ಫಿಟ್ನೆಸ್ ಕ್ಲಬ್ ಸದಸ್ಯತ್ವ ಶುಲ್ಕ ಗುರುಗ್ರಾಮ್‌ಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಅರ್ಧಕ್ಕಿಂತಲೂ ಕಡಿಮೆ ಇದೆ. ಸಿನಿಮಾ ಟಿಕೆಟ್ ದರವೂ ಸುಮಾರು 20% ಕಡಿಮೆ ಇರುವುದರಿಂದ ಮನರಂಜನಾ ವೆಚ್ಚದಲ್ಲೂ ಉಳಿತಾಯ ಸಾಧ್ಯ.

ರಜೆಯ ಇಮೇಲ್‌ಗೆ ಉತ್ತರಿಸದ ಬಾಸ್!‌ನೆಟ್‌ಫ್ಲಿಕ್ಸ್ ಸರಣಿಯಂತಹ ಟ್ರೇಲರ್ ಮೂಲಕ 10 ದಿನಗಳ ಲೀವ್‌ಗೆ ಅರ್ಜಿ ಹಾಕಿದ ಮಹಿಳೆ!
ರಜೆಯ ಇಮೇಲ್‌ಗೆ ಉತ್ತರಿಸದ ಬಾಸ್!‌ನೆಟ್‌ಫ್ಲಿಕ್ಸ್ ಸರಣಿಯಂತಹ ಟ್ರೇಲರ್ ಮೂಲಕ 10 ದಿನಗಳ ಲೀವ್‌ಗೆ ಅರ್ಜಿ ಹಾಕಿದ ಮಹಿಳೆ!

ಬೆಂಗಳೂರಿನಲ್ಲಿ ಸಂಬಳವೂ ಹೆಚ್ಚು

ಈ ವರದಿಯ ಮತ್ತೊಂದು ವಿಶೇಷ ಅಂಶವೆಂದರೆ ಬೆಂಗಳೂರಿನಲ್ಲಿ ಸರಾಸರಿ ಆದಾಯವೂ ಹೆಚ್ಚು ಎಂಬುದು. ತೆರಿಗೆ ಕಡಿತದ ನಂತರ ಬೆಂಗಳೂರಿನಲ್ಲಿ ಸರಾಸರಿ ಮಾಸಿಕ ವೇತನ ಸುಮಾರು 86,580 ಇದ್ದರೆ, ಗುರುಗ್ರಾಮ್‌ನಲ್ಲಿ ಅದು 74,738 ಇದೆ. ಇದರಿಂದ ಬೆಂಗಳೂರಿನ ನಿವಾಸಿಗಳ ಖರೀದಿ ಸಾಮರ್ಥ್ಯ (Purchasing Power) ಸುಮಾರು 29.1% ರಷ್ಟು ಹೆಚ್ಚು ಇದೆ. ಅಂದರೆ, ಬೆಂಗಳೂರಿನ ಜನರು ತಮ್ಮ ಆದಾಯಕ್ಕೆ ಅನುಗುಣವಾಗಿ ಹೆಚ್ಚು ವಸ್ತುಗಳು ಮತ್ತು ಸೇವೆಗಳನ್ನು ಖರೀದಿಸಬಹುದು.

ಅಂತಿಮವಾಗಿ ಯಾವ ನಗರ ಉತ್ತಮ?

ಗುರುಗ್ರಾಮ್ ಮತ್ತು ಬೆಂಗಳೂರು ಎರಡೂ ಉತ್ತಮ ಉದ್ಯೋಗಾವಕಾಶಗಳನ್ನು ನೀಡುವ ನಗರಗಳಾಗಿವೆ. ಗುರುಗ್ರಾಮ್ ಕಾರ್ಪೊರೇಟ್‌, ಹಣಕಾಸು ಮತ್ತು ಕನ್ಸಲ್ಟಿಂಗ್ ಕ್ಷೇತ್ರಗಳ ಕೇಂದ್ರವಾಗಿದ್ದರೆ, ಬೆಂಗಳೂರು ದೇಶದ ಪ್ರಮುಖ ಐಟಿ ಮತ್ತು ಸ್ಟಾರ್ಟ್‌ಅಪ್ ಹಬ್ ಆಗಿದೆ. ಆದರೆ ಜೀವನ ವೆಚ್ಚ, ಮನೆ ಬೆಲೆ, ಶಿಕ್ಷಣ ವೆಚ್ಚ, ಯುಟಿಲಿಟಿ ಬಿಲ್‌ಗಳು ಮತ್ತು ಖರೀದಿ ಸಾಮರ್ಥ್ಯವನ್ನು ಪರಿಗಣಿಸಿದರೆ, 2026ರಲ್ಲಿ ಬೆಂಗಳೂರೇ ಹೆಚ್ಚು ಆರ್ಥಿಕವಾಗಿ ಅನುಕೂಲಕರ ನಗರ ಎಂದು ಈ ವರದಿ ಸೂಚಿಸುತ್ತದೆ. ಉದ್ಯೋಗದ ಜೊತೆಗೆ ಉಳಿತಾಯಕ್ಕೂ ಆದ್ಯತೆ ನೀಡುವವರಿಗೆ ಬೆಂಗಳೂರು ಉತ್ತಮ ಆಯ್ಕೆಯಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+