ಕಿಂಗ್ ಕೋಬ್ರಾಗೂ ಶಾಂಪೂ ಸ್ನಾನ: ವಿಡಿಯೋ ನೋಡಿ ಜನ ಶಾಕ್

ಹಾವುಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಸದ್ಯ ವೈರಲ್ ಆಗಿರುವ ವಿಡಿಯೋವನ್ನು ನೀವು ಕನಸಿನಲ್ಲೂ ಕಂಡಿರಲು ಸಾಧ್ಯವಿಲ್ಲ. ಯಾಕೆಂದರೆ ಈ ವಿಡಿಯೋದಲ್ಲಿ ಹಾವಿನ ರಾಜ ನಾಗರಹಾವುಗೆ ಸ್ನಾನ ಮಾಡಿಸಲಾಗುತ್ತಿದೆ. ಕೇಳಲು ಆಶ್ಚರ್ಯ ಎನಿಸಿದರು ಇದು ಸತ್ಯ. ಬೃಹತ್ ಗಾತ್ರದ ನಾಗರ ಹಾವಿಗೆ ವ್ಯಕ್ತಿಯೊಬ್ಬ ಪುಟ್ಟ ಮಕ್ಕಳಿಗೆ ಸ್ನಾನ ಮಾಡಿಸುವಂತೆ ಶಾಂಪು ಹಚ್ಚಿ ಸ್ನಾನ ಮಾಡಿಸಿದ್ದಾನೆ. ಇದನ್ನು ಕಂಡ ಜನ ಬಾಯಿಗೆ ಬೆರಳು ಇಟ್ಟುಕೊಂಡಿದ್ದಾರೆ.

ಒಂದೊಮ್ಮೆ ಹಾವು ಈ ಹಾದಿಯಲ್ಲಿದೆ ಅಂದರೆ ಆ ಹಾದಿಯಲ್ಲಿ ಹೋಗುವುದಿರಲಿ ಮಾರ್ಗವನ್ನೇ ಬದಲಿಸುವ ಜನ ಇದ್ದಾರೆ. ಹೀಗಿರುವಾಗ ವಿಶ್ವದ ಅತ್ಯಂತ ವಿಷಕಾರಿ ಮತ್ತು ಅಪಾಯಕಾರಿ ದೈತ್ಯ ಕಿಂಗ್ ಕೋಬ್ರಾ ಬಳಿ ಸಂಬಂಧಿಯಂತೆ ಕುಳಿತು, ಅದರ ಮುಖ ಮೈ ಶಾಂಪು ಹಚ್ಚಿ ಉಜ್ಜಿ ಸ್ನಾನ ಮಾಡಿಸುವುದು ಅಂದರೆ ನಿಜಕ್ಕೂ ಇದು ಆಶ್ಚರ್ಯವೇ ಸರಿ.

Bathing King Cobra with shampoo: People are shocked to see the video

ಸಾಮಾಜಿಕ ಜಾಲತಾಣದಲ್ಲಿ ಹಾವಿನೊಂದಿಗೆ ಸ್ನೇಹದಿಂದ ವರ್ತಿಸುವ, ಅದನ್ನು ಹಿಡಿಯುವ, ಅದನ್ನು ಮುಟ್ಟುವ ಪ್ರಯತ್ನಗಳ ವಿಡಿಯೋಗಳನ್ನು ನಾವು ನೋಡಿದ್ದೇವೆ. ಅವೆಲ್ಲವೂ ಉರಗ ತಜ್ಞ ಅಥವಾ ಅನುಭವಿಗಳ ಎಚ್ಚರಿಕೆಯಿಂದಾಗುತ್ತವೆ. ಈ ವಿಚಾರದಲ್ಲಿ ಸ್ವಲ್ಪ ಯಾವಾರಿದರೂ ಪ್ರಾಣಕ್ಕೆ ಕುತ್ತು ಗ್ಯಾರೆಂಟಿ. ಅದರಲ್ಲೂ ವಿಷಕಾರಿ ಹಾವಿನೊಂದಿಗೆ ಎಷ್ಟು ಜಾಗರೂಕತೆಯಿಂದ ಇದ್ದರೂ ಕಡಿಮೆಯೇ. ಹೀಗಿರುವಾಗ ಈ ವಿಡಿಯೋದಲ್ಲಿ ಬೃಹತ್ ನಾಗರಹಾವು ಮನುಷ್ಯನಿಂದ ಸಲೀಸಾಗಿ ಸ್ನಾನ ಮಾಡಿಸಿಕೊಳ್ಳುತ್ತದೆ ಅಂದರೆ ಇದು ನಿಜಕ್ಕೂ ಅಚ್ಚರಿಯ ವಿಚಾರ.

@DPrasanthNair ಹೆಸರಿನ ಬಳಕೆದಾರರು ಅಂಗವರ್ ಶಹಾರೆ ಅವರ ಈ ರೋಮಾಂಚಕ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 45 ಸೆಕೆಂಡುಗಳ ಈ ವಿಡಿಯೋ ನೆಟ್ಟಿಗರು ಹುಬ್ಬೇರುವಂತೆ ಮಾಡಿದೆ. ಈ ವಿಡಿಯೊ ಇದುವರೆಗೆ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+