ಬ್ಯಾರಿಯರ್‌ ರಹಿತ ಟೋಲ್‌ ವ್ಯವಸ್ಥೆಗೆ ಭರ್ಜರಿ ಪ್ರತಿಕ್ರಿಯೆ; 30 ಲಕ್ಷ ಬಾಕಿ ಟೋಲ್‌ ವಸೂಲಿ

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪರಿಚಯಿಸಿರುವ ಬ್ಯಾರಿಯರ್‌ ರಹಿತ ಟೋಲ್‌ ಸಂಗ್ರಹ ವ್ಯವಸ್ಥೆಗೆ ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಗುಜರಾತ್‌ನ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಜಾರಿಗೆ ತಂದಿರುವ ಮಲ್ಟಿ ಲೇನ್ ಫ್ರೀ ಫ್ಲೋ (MLFF) ಟೋಲಿಂಗ್ ವ್ಯವಸ್ಥೆಯ ಮೂಲಕ ಬಾಕಿ ಉಳಿದಿದ್ದ ಸುಮಾರು ₹30 ಲಕ್ಷ ಟೋಲ್‌ ಹಣವನ್ನು ವಸೂಲಿ ಮಾಡಲಾಗಿದೆ ಎಂದು ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ.

ಟೋಲ್‌ ಪಾವತಿಸದೆ ಸಂಚರಿಸಿದ್ದ ವಾಹನ ಮಾಲೀಕರಿಗೆ ಮೇ 1ರಿಂದ ಇ-ನೋಟಿಸ್‌ಗಳನ್ನು ಕಳುಹಿಸಲಾಗಿತ್ತು. ಈ ನೋಟಿಸ್‌ ಪಡೆದವರಲ್ಲಿ ಸುಮಾರು ಅರ್ಧದಷ್ಟು ಮಂದಿ ಬಾಕಿ ಮೊತ್ತ ಪಾವತಿಸಿರುವುದಾಗಿ ಎನ್‌ಎಚ್‌ಎಐ ಅಧ್ಯಕ್ಷ ಸಂತೋಷ್‌ ಯಾದವ್‌ ಹೇಳಿದ್ದಾರೆ. "ಜನರು ಸಾಮಾನ್ಯವಾಗಿ ನಿಯಮ ಪಾಲನೆಗೆ ಮಹತ್ವ ನೀಡುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ" ಎಂದು ಅವರು ತಿಳಿಸಿದ್ದಾರೆ.

Barrierless Toll System

ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಎರಡನೇ ಬ್ಯಾರಿಯರ್‌ರಹಿತ ಟೋಲ್‌ ವ್ಯವಸ್ಥೆಯನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದರು. ಈ ವ್ಯವಸ್ಥೆಯಿಂದ ಟೋಲ್‌ ಪ್ಲಾಜಾಗಳಲ್ಲಿ ವಾಹನಗಳು ನಿಲ್ಲುವ ಅವಶ್ಯಕತೆ ಇಲ್ಲದ ಕಾರಣ ಸಂಚಾರ ಮತ್ತಷ್ಟು ಸುಗಮವಾಗಲಿದೆ ಎಂದು ಅವರು ಹೇಳಿದರು.

ದೆಹಲಿಯಲ್ಲಿ ಆರಂಭವಾದ ಸ್ಮಾರ್ಟ್ ಟೋಲ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?
ದೆಹಲಿಯಲ್ಲಿ ಆರಂಭವಾದ ಸ್ಮಾರ್ಟ್ ಟೋಲ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?

ಬ್ಯಾರಿಯರ್‌ರಹಿತ ಟೋಲ್‌ ವ್ಯವಸ್ಥೆಯಿಂದ ಪ್ರಯಾಣ ಸಮಯ ಮತ್ತು ಇಂಧನ ಉಳಿತಾಯವಾಗುವುದಲ್ಲದೆ, ಟೋಲ್‌ ಸಂಗ್ರಹಣೆಯ ವೆಚ್ಚವೂ ಗಣನೀಯವಾಗಿ ಕಡಿಮೆಯಾಗಲಿದೆ. ಇದರಿಂದ ವರ್ಷಕ್ಕೆ ಸುಮಾರು 6,000 ರಿಂದ 7,000 ಕೋಟಿ ಉಳಿತಾಯ ಸಾಧ್ಯವೆಂದು ಗಡ್ಕರಿ ಮಾಹಿತಿ ನೀಡಿದರು.

ದೇಶದಾದ್ಯಂತ ಇರುವ ಸುಮಾರು 700 ಟೋಲ್‌ ಪ್ಲಾಜಾಗಳನ್ನು ಇದೇ ಮಾದರಿಯಲ್ಲಿ ಪರಿವರ್ತಿಸಿದರೆ ವರ್ಷಕ್ಕೆ ₹295 ಕೋಟಿ ಮೌಲ್ಯದ ಇಂಧನ ಉಳಿತಾಯವಾಗುವ ಜೊತೆಗೆ 81 ಸಾವಿರ ಟನ್‌ ಕಾರ್ಬನ್‌ ಡೈಆಕ್ಸೈಡ್‌ ಉತ್ಸರ್ಗವೂ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.

ಇನ್ನು ಟೋಲ್ ಬಳಿ ನಿಲ್ಲುವಂತಿಲ್ಲ: ನಿತಿನ್ ಗಡ್ಕರಿ ನೀಡಿದ ಭರ್ಜರಿ ಸಿಹಿ ಸುದ್ದಿ
ಇನ್ನು ಟೋಲ್ ಬಳಿ ನಿಲ್ಲುವಂತಿಲ್ಲ: ನಿತಿನ್ ಗಡ್ಕರಿ ನೀಡಿದ ಭರ್ಜರಿ ಸಿಹಿ ಸುದ್ದಿ

ಇದೇ ವೇಳೆ, ಟೋಲ್‌ ಸಂಗ್ರಹಣೆಯ ಕಾರ್ಯಾಚರಣಾ ವೆಚ್ಚವು ಈಗಿನ ಶೇ.12-15ರಿಂದ ಶೇ.3-4ಕ್ಕೆ ಇಳಿಯಲಿದ್ದು, ಉಳಿಯುವ ಮೊತ್ತವನ್ನು ಹೊಸ ರಸ್ತೆ ಮತ್ತು ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಹೆಚ್ಚಿನ ಸಾಮರ್ಥ್ಯದ ಕ್ಯಾಮೆರಾಗಳನ್ನು ಅಳವಡಿಸಿರುವುದರಿಂದ ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಯಲು ಸಹಾಯವಾಗಲಿದೆ. ಜೊತೆಗೆ ರಸ್ತೆ ತಿರುವುಗಳು, ಮಂಜು ಪ್ರದೇಶಗಳು, ಜಾನುವಾರುಗಳ ಸಂಚಾರ, ಭೂಕುಸಿತ ಪ್ರದೇಶಗಳು ಹಾಗೂ ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್‌ ಮಾಹಿತಿ ನೀಡುವ ಎಚ್ಚರಿಕೆ ವ್ಯವಸ್ಥೆಗಳನ್ನೂ ಶೀಘ್ರದಲ್ಲೇ ಜಾರಿಗೆ ತರಲಾಗುತ್ತದೆ ಎಂದು ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+