Banyan tree Age : 700 ವರ್ಷಗಳಷ್ಟು ಹಳೆಯ ಆಲದ ಮರ! ವೈಜ್ಞಾನಿಕ ಪರೀಕ್ಷೆಯಲ್ಲೇ ದೃಢಪಟ್ಟಿತು ಶತಮಾನಗಳ ಇತಿಹಾಸ
Banyan tree Age : ಬಿಹಾರದ ಮುಂಗೇರ್ನಲ್ಲಿರುವ ಒಂದು ಆಲದ ಮರ ಎಷ್ಟು ವರ್ಷ ಹಳೆಯದ್ದು ಎನ್ನುವ ನಿಖರ ಮಾಹಿತಿ ಇದೀಗ ಹೊರ ಬಿದ್ದಿದೆ. ಇದು ಹಳೆಯ ಮರ ಎನ್ನುವುದನ್ನು ಹಿಂದಿನಿಂದಲೂ ಹೇಳಿಕೊಂಡು ಬರಲಾಗಿದೆ. ಜಾನಪದಗಳಲ್ಲೂ ಇದರ ಉಲ್ಲೇಖವಿದೆ. ಆದರೆ ಇದು ಎಷ್ಟು ಹಳೆಯದ್ದು ಎನ್ನುವುದಕ್ಕೆ ಸ್ಪಷ್ಟ ಉತ್ತರ ಇಲ್ಲಿಯವರೆಗೆ ಯಾರ ಬಳಿಯೂ ಇರಲಿಲ್ಲ.ಇದೀಗ ಪ್ರಕಟವಾದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಅಧ್ಯಯನವು ಈ ಆಲದ ಮರ ಕನಿಷ್ಠ 700 ವರ್ಷಗಳಷ್ಟು ಹಳೆಯದ್ದು ಎನ್ನುವುದನ್ನು ನಿಖರವಾಗಿ ಹೇಳಿದೆ. ಇದಕ್ಕಾಗಿ ಮರದ ಕೊಂಬೆಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಮರದ ನಿಜವಾದ ವಯಸ್ಸು ಕಂಡು ಹಿಡಿದ ಸಂಶೋಧಕರು
ಸುಧಾರಿತ ರೇಡಿಯೊಕಾರ್ಬನ್ ಡೇಟಿಂಗ್ ಬಳಸಿ, ಸಂಶೋಧಕರು ಈ ಮರದ ನಿಜವಾದ ವಯಸ್ಸನ್ನು ಕಂಡು ಹಿಡಿದಿದ್ದಾರೆ. ಇದಕ್ಕಾಗಿ ಮರದ ದ್ವಿತೀಯ ಕಾಂಡ ಮತ್ತು ಮುಖ್ಯ ಕೊಂಬೆಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಮೂಲಕ ಮರದ ನಿಖರವಾದ ವಯಸ್ಸು ಎಷ್ಟು ಎನ್ನುವುದನ್ನು ಪತ್ತೆ ಹಚ್ಚುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ. ಜುಲೈ 3, 2026 ರಂದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರೇಡಿಯೊಕಾರ್ಬನ್ ವಿಧಾನಗಳನ್ನು ಬಳಸಿಕೊಂಡು ಈ ಆಲದ ಮರ ಎಷ್ಟು ಹಳೆಯದು ಎನ್ನುವುದನ್ನು ವೈಜ್ಞಾನಿಕವಾಗಿಯೇ ದೃಢಪಡಿಸಿದೆ. ಇದನ್ನು ವಿಶ್ವದ ಅತ್ಯಂತ ಹಳೆಯ ಆಲದ ಮರ ಎಂದು ಕರೆದಿದೆ.

Banyan tree Age: ಸವಾಲಿನದ್ದಾಗಿತ್ತು ಸಂಶೋಧನೆ
ಆಲದ ಮರದ ನಿಜವಾದ ವಯಸ್ಸು ಕಂಡುಹಿಡಿಯುವುದು ಅಷ್ಟು ಸುಲಭವಾಗಿರಲಿಲ್ಲ. ಈ ಕಾರ್ಯ ಬಹಳ ಸವಾಲಿನದ್ದಾಗಿತ್ತು. ಉಷ್ಣವಲಯದ ಮರಗಳ ವಯಸ್ಸು ಕಂಡುಹಿಡಿಯುವುದು ಯಾವಾಗಲೂ ಕಷ್ಟಕರ. ಏಕೆಂದರೆ ಸಮಶೀತೋಷ್ಣ ಕಾಡುಗಳಲ್ಲಿ ಕಂಡುಬರುವ ಮರಗಳಲ್ಲಿ ವಾರ್ಷಿಕ ಬೆಳವಣಿಗೆಯ ಉಂಗುರ ಅಂದರೆ Annual growth rings ಕಂಡುಬರುತ್ತವೆ. ಆದರೆ ಉಷ್ಣವಲಯದ ಮರಗಳಲ್ಲಿ ಈ ಗುರುತು ಇರುವುದಿಲ್ಲ. ಬದಲಾಗಿ ಇವು ಮರ ತುಂಬಾ ಕಾಂಡಗಳನ್ನು ಹೊಂದಿರುತ್ತದೆ. ಅಲ್ಲದೆ ಈ ಮರ ನಿರಂತರವಾಗಿ ಬೆಳೆಯುತ್ತಾ ಹೋಗುವ ಕಾರಣ ಅದರ ಕಾಂಡಗಳು ಕೂಡಾ ಟೊಳ್ಳಾಗಿರುತ್ತದೆ. ಹಾಗಾಗಿ ಇಲ್ಲಿ ರೇಡಿಯೊಕಾರ್ಬನ್ ಡೇಟಿಂಗ್ ವಿಧಾನವನ್ನೇ ಬಳಸಬೇಕಾಗುತ್ತದೆ.
ಈ ಅಧ್ಯಯನವು ಪಾರಂಪರಿಕ ಮರಗಳನ್ನು ಹೇಗೆ ರಕ್ಷಿಸಲಾಗುತ್ತದೆ ಎಂಬುದನ್ನು ಮೂಲಭೂತವಾಗಿ ಬದಲಾಯಿಸಬಹುದು ಎಂದು ಪರಿಸರವಾದಿ ಜಸ್ಮೀತ್ ಸಿಂಗ್ ಅರೋರಾ ವಾದ. ಈ ಮರಗಳು ಎಷ್ಟು ಹಳೆಯದ್ದು ಎನ್ನುವುದನ್ನು ನಿಖರವಾಗಿ ಪತ್ತೆ ಹಚ್ಚುವುದು ಮತ್ತು ದೃಢೀಕರಿಸುವುದು ಬಹಳ ಅಗತ್ಯ. ಈ ಮೂಲಕ ಕಾನೂನು ಪರಂಪರೆಯ ಸ್ಥಾನಮಾನ ಮತ್ತು ದೀರ್ಘಕಾಲೀನ ಸಂರಕ್ಷಣಾ ಯೋಜನೆಗಳನ್ನು ಪಡೆಯಲು ಅವಕಾಶ ಸಿಗುತ್ತದೆ ಎನ್ನುತ್ತಾರೆ ಜಸ್ಮೀತ್ ಸಿಂಗ್ .
ಈ ಸಂಶೋಧನೆಯು ಮುಂಗರ್ ಪ್ರದೇಶದ ಪರಿಸರ ಇತಿಹಾಸವನ್ನು ಸಾರಿ ಹೇಳುತ್ತದೆ. ಮಾತ್ರವಲ್ಲ, ದಕ್ಷಿಣ ಏಷ್ಯಾ ಮತ್ತು ಜಾಗತಿಕವಾಗಿ ಸಾಂಸ್ಕೃತಿಕವಾಗಿ ಮಹತ್ವದ ಸಸ್ಯಶಾಸ್ತ್ರೀಯ ಪರಂಪರೆಯನ್ನು ರಕ್ಷಿಸುವಲ್ಲಿ ಪ್ರಮುಖ ಹೇಗೆ ಪಾತ್ರ ವಹಿಸಿದೆ ಎನ್ನುವುದನ್ನು ಸಾರುತ್ತದೆ.
Banyan tree Age: ಅಸಂಖ್ಯಾತ ಜೀವರಾಶಿಗಳ ನೆಲೆ
ಅರೋರಾ ಅವರ ಪ್ರಕಾರ, ಪ್ರಾಚೀನ ಮರಗಳು ಐತಿಹಾಸಿಕ ಹೆಗ್ಗುರುತುಗಳು ಮಾತ್ರವಲ್ಲ, ಬದಲಿಗೆ ಅವು ಪರಿಸರ ಶಕ್ತಿ ಕೇಂದ್ರಗಳಾಗಿವೆ. ಅವುಗಳ ಬೃಹತ್ ಅಸಂಖ್ಯಾತ ಜೀವರಾಶಿಗಳಿಗೆ ಪಕ್ಷಿಗಳಿಗೆ ವಾಸ ಸ್ಥಾನವಾಗಿದೆ. ಅವುಗಳನ್ನು ಜೀವವೈವಿಧ್ಯದ ತಾಣಗಳನ್ನಾಗಿ ಮಾಡುತ್ತವೆ. ಇದು ಲೆಕ್ಕವಿಲ್ಲದಷ್ಟು ಜೀವ ಜಂತುಗಳಿಗೆ ವರ್ಷಪೂರ್ತಿ ಆಹಾರ ಮತ್ತು ಆಶ್ರಯವನ್ನು ಒದಗಿಸುತ್ತದೆ.
ಪರಿಸರಕ್ಕೆ ಸಹಕಾರಿ
ಕೇವಲ 3% ದೊಡ್ಡ ಮರಗಳು ಕಾಡಿನ 42% ವರೆಗೆ ಇಂಗಾಲವನ್ನು ಹೀರಿಕೊಳ್ಳಬಲ್ಲವು ಎಂದು ಅಧ್ಯಯನಗಳು ತೋರಿಸುತ್ತವೆ. ಅವುಗಳ ಆಳವಾದ ಬೇರುಗಳು ಮಣ್ಣನ್ನು ಸ್ಥಿರಗೊಳಿಸುತ್ತವೆ. ಅಂತರ್ಜಲವನ್ನು ಮರುಪೂರಣ ಮಾಡುತ್ತವೆ. ನಗರದಲ್ಲಿ ಹೆಚ್ಚುತ್ತಿರುವ ಶಾಖ, ತಾಪಮಾನವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತವೆ. ಗಾಳಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತವೆ.
ಪ್ರಾಚೀನ ಮರಗಳನ್ನು ರಕ್ಷಿಸುವುದು ಬಹಳ ಅಗತ್ಯ
ನಗರಗಳು ವಿಸ್ತರಿಸಿ ಹವಾಮಾನ ಬದಲಾವಣೆ ತೀವ್ರಗೊಳ್ಳುತ್ತಿದ್ದಂತೆ, ಪಾರಂಪರಿಕ ಮರಗಳು ಹೆಚ್ಚು ಹೆಚ್ಚು ಮೌಲ್ಯಯುತವಾಗುತ್ತಿವೆ ಎನ್ನುವುದು ಅರೋರಾ ಮಾತು. ಅವು ಶಕ್ತಿಶಾಲಿ ಕ್ಲೈಮೆಟ್ ಬಫರ್ ಮತ್ತು ಜೈವಿಕ ದಾಖಲೆಗಳಾಗಿ ಕಾರ್ಯನಿರ್ವಹಿಸುತ್ತವೆ. ಅವುಗಳನ್ನು ಕಡಿಯುವುದು ಅಥವಾ ಕಳೆದುಕೊಳ್ಳುವುದರಿಂದ ಭರಿಸಲಾಗದ ನಷ್ಟವನ್ನು ನಾವು ಅನುಭವಿಸಬೇಕಾಗುತ್ತದೆ. ಈ ಬೃಹತ್ ಮರಗಳನ್ನು ಕಡಿದು ಹಾಕಿದರೆ ಶತಮಾನಗಳಿಂದ ಈ ಮರಗಳಲ್ಲಿ ಸಂಗ್ರಹವಾಗಿರುವ ಇಂಗಾಲವು ತಕ್ಷಣವೇ ಪರಿಸರಕ್ಕೆ ಬಿಡುಗಡೆಯಾಗುತ್ತದೆ.ಇದರಿಂದ ಪರಿಸರ ಸಮತೋಲನ ಕಳೆದುಕೊಳ್ಳುವ ಅಪಾಯವೂ ಇದೆ.


Click it and Unblock the Notifications
