Bengaluru opposition meet: ವಿಪಕ್ಷಗಳ ನಾಯಕರಿಗೆ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಸಿದ್ದರಾಮಯ್ಯ ಔತಣಕೂಟ
ಬೆಂಗಳೂರು, ಜುಲೈ. 17: ಸೋಮವಾರ ಮತ್ತು ಮಂಗಳವಾರ ಎರಡು ದಿನಗಳು ಬೆಂಗಳೂರಿನ ತಾಜ್ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ನಡೆಯುತ್ತಿದ್ದ ವಿರೋಧ ಪಕ್ಷಗಳ ಮಹಾಮೈತ್ರಿಕೂಟದ ಸಭೆಯ ಔತಣಕೂಟ ಮುಕ್ತಾಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಏರ್ಪಡಿಸಿದ್ದ ಔತಣಕೂಟವನ್ನು ಮುಗಿಸಿ ವಿಪಕ್ಷಗಳ ನಾಯಕರು ಹೋಟೆಲ್‌ನಿಂದ ತೆರಳಿದ್ದಾರೆ.
ದೇಶದ ವಿಪಕ್ಷಗಳ ಮೊದಲನೆ ಸಮಾವೇಶ ಬಿಹಾರದ ಪಾಟ್ನಾದಲ್ಲಿ ನಡೆದಿತ್ತು. ಈ ಎರಡನೇ ಸಮಾವೇಶ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇದಕ್ಕೆ ಹಲವು ವಿರೋಧ ಪಕ್ಷಗಳು ಹಾಜರಾಗಲು ಬೆಂಗಳೂರಿಗೆ ಬಂದಿವೆ. ಸಭೆಗೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಆರ್‌ಜೆಡಿ, ಸಮಾಜವಾದಿ ಪಕ್ಷ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ವಿರೋಧ ಪಕ್ಷಗಳ ನಾಯಕರು ಹಾಜರಾಗಿದ್ದಾರೆ.

ಇವರೆಲ್ಲರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಔತಣಕೂಟ ಏರ್ಪಡಿಸಿದ್ದರು. ವಿಧಾನಸಭೆ ಅಧಿವೇಶನದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬರಮಾಡಿಕೊಂಡಿದ್ದರು, ಬಳಿಕ ಅವರ ಜೊತೆ ತಾಜ್ ವೆಸ್ಟೆಂಡ್ ಹೋಟೆಲ್ ಆಗಮಿಸಿ ಕೆಲಕಾಲ ಇದ್ದು ವಿಧಾನಸೌಧಕ್ಕೆ ತೆರಳಿದ್ದರು.
ಔತಣಕೂಟದಲ್ಲಿ ಭಾಗವಹಿಸಿದ್ದ ವಿಪಕ್ಷಗಳ ನಾಯಕ ಪಟ್ಟಿ ಇಲ್ಲಿದೆ:
1. ಕಾಂಗ್ರೆಸ್: ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್, ರಣದೀಪ್ ಸುರ್ಜೆವಾಲಾ, ಜೈರಾಮ್ ರಮೇಶ್
2. ಟಿಎಂಸಿ: ಮಮತಾ ಬ್ಯಾನರ್ಜಿ
3. ಸಿಪಿಐ: ಡಿ ರಾಜಾ
4. ಸಿಪಿಎಂ- ಸೀತಾರಾಮ್ ಯಚೂರಿ
5. ಜೆಡಿಯು- ನಿತಿಶ್ ಕುಮಾರ್
6. ಡಿಎಂಕೆ- ಎಂಕೆ ಸ್ಟಾಲಿನ್
7. ಎಎಪಿ- ಅರವಿಂದ ಕೇಜ್ರಿವಾಲ್, ಭಗವಂತ್ ಮಾನ್
8. ಜಿಎಂಎಂ- ಹೇಮಂತ್ ಸೊರೇನ್
9. ಶೀವಸೇನಾ (ಯುಬಿಟಿ)- ಉದ್ದವ್ ಠಾಕ್ರೆ, ಆದಿತ್ಯ ಠಾಕ್ರೆ
10. ಆರ್‌ಜೆಡಿ- ಲಾಲೂ ಪ್ರಸಾದ್ ಯಾದವ್, ತೇಜಸ್ವಿ ಯಾದವ್
11. ಸಮಾಜವಾದಿ ಪಕ್ಷ- ಅಖಿಲೇಶ್ ಯಾದವ್
12. ನ್ಯಾಷನಲ್ ಕಾನ್ಪರೆನ್ಸ್- ಒಮರ್ ಅಬ್ದುಲ್ಲಾ
13. ಪಿಡಿಪಿ- ಮೆಹಬೂಬಾ ಮುಫ್ತಿ
14. ಎಂಡಿಎಂಕೆ- ವೈಕೋ












Click it and Unblock the Notifications