Bank Holidays: ಜೂನ್‌ನಲ್ಲಿ ಬ್ಯಾಂಕ್‌ಗಳಿಗೆ 12 ದಿನ ರಜೆ; ಮಾಹಿತಿ, ವಿವರ ಇಲ್ಲಿದೆ
Bank Holidays: ಈ ವರ್ಷದ ಆರಂಭದಿಂದಲೂ ಇಲ್ಲಿಯವರೆಗೂ ಶಾಲಾ-ಕಾಲೇಜುಗಳು ಸೇರಿದಂತೆ ಬ್ಯಾಂಕ್‌ಗಳಿಗೆ ಹಲವೆಡೆ ಸಾಲು ರಜೆಗಳೇ ಸಿಕ್ಕಿವೆ. ಇದೀಗ ಪ್ರತಿ ತಿಂಗಳಿನಂತೆ ಜೂನ್ ತಿಂಗಳ ಬ್ಯಾಂಕ್ ರಜೆಗಳನ್ನು ಬಿಡುಗಡೆ ಮಾಡಲಾಗಿದೆ. ಹಾಗಾದ್ರೆ ಎಲ್ಲೆಲ್ಲಿ? ಯಾವ ಕಾರಣಕ್ಕೆ ಹಾಗೂ ಎಷ್ಟು ದಿನ ರಜೆಗಳು ಇರಲಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ದಿನಾಂಕಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇನ್ನೂ ಕೆಲವೇ ದಿನಗಳಲ್ಲಿ ಜೂನ್ ತಿಂಗಳು ಆರಂಭ ಆಗಲಿದ್ದು, ಈ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 12 ದಿನ ರಜೆಗಳು ಸಿಗಲಿವೆ. ಆರ್‌ಬಿಐ ರಜೆ ಕ್ಯಾಲೆಂಡರ್ ಪ್ರಕಾರ, ಜೂನ್‌ನಲ್ಲಿ ಬ್ಯಾಂಕುಗಳು ಯಾವಾಗ ಮತ್ತು ಎಲ್ಲಿ ಮುಚ್ಚಲ್ಪಡುತ್ತವೆ ಎನ್ನುವ ಮಾಹಿತಿಯನ್ನು ಇಲ್ಲಿ ಕಣ್ಣಾಡಿಸಿ.

ಜೂನ್ 2025ರ ಬ್ಯಾಂಕ್ ರಜೆಗಳು
* ಜೂನ್ 6, 2025 ರಂದು ಬಕ್ರೀದ್ ಇರುವುದರಿಂದ ಈ ದಿನ ದೇಶದ ಬಹುತೇಕ ರಾಜ್ಯಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
* ಬಕ್ರಿದ್ 7ರಂದು ಬಕ್ರೀದ್ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಸಹ ಅಗರ್ತಲಾ, ಐಜ್ವಾಲ್, ಬೇಲಾಪುರ್, ಬೆಂಗಳೂರು, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗುವಾಹಟಿ, ಹೈದರಾಬಾದ್, ಆಂಧ್ರಪ್ರದೇಶ, ತೆಲಂಗಾಣ, ಇಂಫಾಲ್, ಜೈಪುರ, ಜಮ್ಮು, ಕಾನ್ಪುರ್, ನವದೆಹಲಿ, ಕೋಹಿನ್‌ಪುರ್, ಪಣಜಿ, ಪಾಟ್ನಾ, ರಾಯಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ ಭಾಗಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
* ಜೂನ್ 11ರಂದು ಸಂತ ಗುರು ಕಬೀರ್ ಜಯಂತಿ ಹಿನ್ನೆಲೆ ಗ್ಯಾಂಗ್ಟಾಕ್ ಮತ್ತು ಶಿಮ್ಲಾದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
* ಜೂನ್ 27 ರಂದು ರಥಯಾತ್ರೆ /ಕಾಂಗ್ ಹಿನ್ನೆಲೆ ಭುವನೇಶ್ವರ ಮತ್ತು ಇಂಫಾಲ್‌ನಲ್ಲಿ ಬ್ಯಾಕ್‌ಗಳಿಗೆ ರಜೆ ಇರುತ್ತದೆ.
* ಜೂನ್ 30 ರಂದು ರೆಮ್ನಾ ಹಬ್ಬ ಹಿನ್ನೆಲೆ ಐಜ್ವಾಲ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
* ಜೊತೆಗೆ ಜೂನ್ 14 ಮತ್ತು 28ರಂದು ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇರುತ್ತದೆ.
* 5 ಭಾನುವಾರಗಳು ಬುರುವುದರಿಂದ ಈ 5 ಭಾನುವಾರಗಳಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಮೇಲೆ ತಿಳಿಸಲಾಗಿರುವ ರಜಾ ದಿನಗಳು ರಾಜ್ಯಗಳಿಗೆ ಅನುಗುಣವಾಗಿ ಇರುತ್ತವೆ.
ಎರಡು, ನಾಲ್ಕನೇ ಶನಿವಾರ, ಭಾನುವಾರ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕುಗಳ ರಜಾ ದಿನಗಳ ಪಟ್ಟಿ ಒಂದೇ ಆಗಿರುವುದಿಲ್ಲ. ಆರ್‌ಬಿಐ ಪ್ರಕಾರ, ಎಲ್ಲಾ ರಾಜ್ಯಗಳಿಗೆ ರಜಾ ದಿನಗಳ ಪಟ್ಟಿ ವಿಭಿನ್ನ ಆಗಿರುತ್ತದೆ. ಆಯಾ ರಾಜ್ಯಗಳಿಗೆ ಅನುಗುಣವಾಗಿ ವಿವಿಧ ಸ್ಥಳೀಯ ಹಬ್ಬಗಳಿಗೆ ತಕ್ಕಂತೆ ರಜೆಗಳನ್ನು ನೀಡಲಾಗುತ್ತದೆ.
ಬ್ಯಾಂಕುಗಳು ಮುಚ್ಚಲ್ಪಟ್ಟಿದ್ದರೂ, ಗ್ರಾಹಕರು ಚಿಂತೆ ಪಡಬೇಕಿಲ್ಲ. ಆನ್‌ಲೈನ್ ಬ್ಯಾಂಕಿಂಗ್ ಸಹಾಯದಿಂದ ತಮ್ಮ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಬಹುದು. ಬ್ಯಾಂಕ್ ಸೇವೆಗಳನ್ನು ಆನ್‌ಲೈನ್‌ನಲ್ಲಿ ಲಭ್ಯ ಇರುತ್ತದೆ. ಆದ್ದರಿಂದ, ಜನರು ತಲೆ ಬಿಸಿ ಮಾಡಿಕೊಳ್ಳುವ ಅವಶ್ಯಕತೆ ಎದುರಾಗುವುದಿಲ್ಲ.
ಒಂದು ವೇಳೆ ಅಂತಹ ಸಮಸ್ಯೆ ಇದ್ದರೆ, ಗ್ರಾಹಕರು ರಜೆ ದಿನಕ್ಕೂ ಒಂದು ದಿನ ಮುಂಚಿತವಾಗಿ ಬ್ಯಾಂಕ್‌ಗೆ ಭೇಟಿ ನೀಡಿ ಪರಿಹಾರ ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಬ್ಯಾಂಕ್‌ಗಳಿಗೆ ರಜೆ ಸಿಕ್ಕರೆ, ಉದ್ಯೋಗಿಗಳಿಗೆ ಸಂತೋಷ ಆಗಬಹುದು. ಮತ್ತೊಂದೆಡೆ ಗ್ರಾಹಕರು ತೊಂದರೆಗೆ ಒಳಗಾಗುತ್ತಾರೆ. ಇಂತಹ ಘಟನೆಗಳು ಈಗಾಗಲೇ ನಡೆದಿರುವ ಉದಾಹರಣೆಗಳಿವೆ.












Click it and Unblock the Notifications