Holiday: ಮುಂದಿನ ವಾರ 3 ದಿನ ರಜೆ
Bank Holiday: ಈ ವರ್ಷದ ಆರಂಭದಿಂದಲೂ ಇಲ್ಲಿವರೆಗೂ ಆಯಾ ಸ್ಥಳೀಯ ಹಬ್ಬಗಳ ಅನುಗುಣವಾಗಿ ಹಲವೆಡೆ ಬ್ಯಾಂಕ್‌ಗಳಿಗೆ ಸಾಲು ರಜೆಗಳೇ ಸಿಕ್ಕಿವೆ. ಹಾಗೆಯೇ ಇದೀಗ ಮುಂದಿನ ವಾರ ಮೂರು ದಿನ ರಜೆ ಸಿಗಲಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಭ ಮಾಹಿತಿಯನ್ನು ದಿನಾಂಕಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕರ್ನಾಕದಲ್ಲಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಶಾಲಾ-ಕಾಲೇಜುಗಳಿಗೆ ಈ ವರ್ಷದ ಆರಂಭದಿಂದಲೂ ಪ್ರತಿಭಟನೆ, ವಿಶೇಷ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ಇನ್ನೂ ಈಗಾಗಲೇ ರಾಜ್ಯದಲ್ಲಿ ಬೇಸಿಗೆ ರಜೆ ಮುಕ್ತಾಯವಾಗಿ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಈ ನಡುವೆಯೇ ಈ ತಿಂಗಳಲ್ಲಿಯೂ ಮೇ 7ರಂದು ಬಕ್ರೀದ್ ಹಬ್ಬ ಹಿನ್ನೆಲೆ ರಜೆ ಸಿಕ್ಕಿದೆ. ಮತ್ತೊಂದೆಡೆ ಮುಂದಿನ ವಾರ ಬ್ಯಾಂಕ್‌ಗಳಿಗೆ ರಜೆ ಸಿಗಲಿದೆ.

ಮೂರು ದಿನ ರಜೆ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರಜಾ ದಿನಗಳ ಕ್ಯಾಲೆಂಡರ್ ಪ್ರಕಾರ, ಸಂತ ಗುರು ಕಬೀರ್ ಜಯಂತಿ ಮತ್ತು ವಾರಾಂತ್ಯದ ಹಿನ್ನೆಲೆ ಭಾರತದ ಕೆಲವು ಭಾಗಗಳಲ್ಲಿ ಮುಂದಿನ ವಾರ ಮೂರು ದಿನಗಳ ಕಾಲ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಹಾಗಾದ್ರೆ ಯಾವ್ಯಾವ ದಿನ ಎಂದು ಇಲ್ಲಿ ಗಮನಿಸಿ.
ಜೂನ್ 11 ರಂದು ಬ್ಯಾಂಕ್ ರಜೆ: ಸಂತ ಗುರು ಕಬೀರ್ ಜಯಂತಿಯ ಹಿನ್ನೆಲೆ ಜೂನ್ 11ರಂದು ಶಿಮ್ಲಾ ಮತ್ತು ಗ್ಯಾಂಗ್ಟಾಕ್‌ನಲ್ಲಿರುವ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಈ ಹಬ್ಬವು ಹಿಂದೂ ಕ್ಯಾಲೆಂಡರ್ ಪ್ರಕಾರ ಜೇಷ್ಠ ಮಾಸದ ಹುಣ್ಣಿಮೆಯ ದಿನದಂದು ನಡೆಯುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಮೇ ಅಥವಾ ಜೂನ್‌ನೊಂದಿಗೆ ಹೊಂದಿಕೆ ಆಗುತ್ತದೆ. ಕಬೀರ್ ದಾಸ್ ಅವರ ಜೀವನ ಮತ್ತು ಬೋಧನೆಗಳನ್ನು ಗೌರವಿಸಲು ಇದನ್ನು ಆಚರಿಸಲಾಗುತ್ತದೆ.
ಜೂನ್ 14 ರಂದು ಬ್ಯಾಂಕ್ ರಜೆ: ಆರ್‌ಬಿಐ ಕ್ಯಾಲೆಂಡರ್ ಪ್ರಕಾರ, ಬ್ಯಾಂಕುಗಳು ಸಾಮಾನ್ಯವಾಗಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಮುಚ್ಚಲ್ಪಡುತ್ತವೆ. ಹಾಗೆಯೇ ಜೂನ್ 14, 2025ರಂದು ತಿಂಗಳ ಎರಡನೇ ಶನಿವಾರ ಆದ್ದರಿಂದ ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜೂನ್ 15 ರಂದು ಬ್ಯಾಂಕ್ ರಜೆ: ಆರ್‌ಬಿಐ ಪ್ರಕಾರ , ದೇಶದ ಎಲ್ಲಾ ಬ್ಯಾಂಕುಗಳು ಭಾನುವಾರ ಮುಚ್ಚಲ್ಪಟ್ಟಿರುತ್ತವೆ. ಹಾಗೆಯೇ ಜೂನ್ 15ರ ಭಾನುವಾರ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ವಾರಾಂತ್ಯದ ರಜಾ ದಿನಗಳನ್ನು ಸೇರಿದಂತೆ ಮುಂಬರುವ ವಾರದಲ್ಲಿ ಶಿಮ್ಲಾ ಮತ್ತು ಗ್ಯಾಂಗ್ಟಾಕ್‌ನಲ್ಲಿ ಬ್ಯಾಂಕುಗಳು ಮೂರು ದಿನಗಳವರೆಗೆ ಮುಚ್ಚಲ್ಪಡುತ್ತವೆ.
ವಾರಾಂತ್ಯಗಳನ್ನು ಹೊರತುಪಡಿಸಿ, ಭಾರತದಲ್ಲಿ ಬ್ಯಾಂಕ್ ರಜಾ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ ಮತ್ತು ರಾಷ್ಟ್ರೀಯ, ಪ್ರಾದೇಶಿಕ ಮತ್ತು ಧಾರ್ಮಿಕ ಆಚರಣೆಗಳ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಇನ್ನು
ಬ್ಯಾಂಕ್ ರಜಾ ದಿನಗಳಲ್ಲಿ ದೇಶಾದ್ಯಂತ ಆನ್‌ಲೈನ್ ಬ್ಯಾಂಕಿಂಗ್ ಲಭ್ಯ ಇದ್ದು, ಇದರಲ್ಲಿ ಗ್ರಾಹಕರು ಹಣಕಾಸಿನ ವಹಿವಾಟುಗಳನ್ನು ನಡೆಸಬಹುದು. ಒಟ್ಟಿನಲ್ಲಿ ಬ್ಯಾಂಕ್‌ಗಳಿಗೆ ಎರಡನೇ ಹಾಗೂ ನಾಲ್ಕನೇ ಶನಿವಾರ ಹಾಗೂ ಭಾನುವಾರ ರಜೆ ಹೊರತುಪಡಿಸಿ ಇನ್ನುಳಿದ ರಜೆಗಳು ರಾಜ್ಯದಿಂದ ರಜ್ಯಕ್ಕೆ ಬದಲಾಗುತ್ತವೆ. ಸ್ಥಳೀಯ ಹಬ್ಬಗಳ ಅನುಗುಣಕ್ಕೆ ತಂಕ್ಕಂತೆ ಬದಲಾಗುತ್ತಿರುತ್ತವೆ.












Click it and Unblock the Notifications