Bank Holidays in March 2025: ಮಾರ್ಚ್‌ನಲ್ಲಿ ಒಟ್ಟು 13 ದಿನ ಬ್ಯಾಂಕ್‌ಗಳಿಗೆ ರಜೆ, ಯಾವಾಗ ನೋಡಿ!
Bank Holiday 2025: ಹೊಸ ಆರ್ಥಿಕ ವರ್ಷ ಪ್ರಾರಂಭವಾಗುತ್ತಿದೆ. ಇದೀಗ ಮಾರ್ಚ್ ತಿಂಗಳಿನಲ್ಲಿ ಯಾವೆಲ್ಲ ದಿನ ಬ್ಯಾಂಕ್ ರಜೆ ಇರಲಿದೆ ಎನ್ನುವ ಅಪ್ಡೇಟ್ ಇಲ್ಲಿದೆ. ಬ್ಯಾಂಕ್ ಕೆಲಸಗಳನ್ನು ಮಾಡಿಕೊಳ್ಳಬೇಕು ಎನ್ನುವವರಿಗೆ ಆಯಾ ತಿಂಗಳಿನಲ್ಲಿ ಯಾವ ದಿನ ಬ್ಯಾಂಕ್ ರಜೆ ಇರಲಿದೆ ಎನ್ನುವ ವಿಷಯವು ಸಾಕಷ್ಟು ಸಹಾಯ ಮಾಡುತ್ತದೆ. ಮಾರ್ಚ್‌ನಲ್ಲಿ ಯಾವೆಲ್ಲ ದಿನ ಬ್ಯಾಂಕ್‌ಗಳಿಗೆ ಹಾಲಿಡೇ ಇರಲಿದೆ ಎನ್ನುವ ವಿವರ ಇಲ್ಲಿದೆ. ಇನ್ನು ಮಾರ್ಚ್ ತಿಂಗಳಿನಲ್ಲಿ ಬರೋಬ್ಬರಿ 13 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಮಾರ್ಚ್‌ನಲ್ಲಿ ಯಾವೆಲ್ಲ ದಿನ ಬ್ಯಾಂಕ್‌ಗಳಿಗೆ ಹಾಲಿಡೇ ಇರಲಿದೆ ಎನ್ನುವ ಲಿಸ್ಟ್ ಅನ್ನು ಆರ್‌ಬಿಐ ಬಿಡುಗಡೆ ಮಾಡಿದೆ. ಇದರ ವಿವರ ನೋಡೋಣ.
ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್‌ನಲ್ಲಿ ಯಾವೆಲ್ಲ ದಿನ ಬ್ಯಾಂಕ್‌ಗಳಿಗೆ ಹಾಲಿಡೇ ಕೊಟ್ಟಿದೆ ಎನ್ನುವ ಅಪ್ಡೇಟ್ಸ್ ಇಲ್ಲಿದೆ. ಇನ್ನು ಮಾರ್ಚ್ ತಿಂಗಳಿನಲ್ಲಿ ಸಾಲು ಸಾಲು ರಜೆಗಳಿವೆ. ಮಾರ್ಚ್‌ನಲ್ಲಿ ಭಾರತದಾದ್ಯಂತ ಜೋರಾಗಿ ಆಚರಿಸುವ ಹಾಗೂ ವಿಶೇಷ ಹಬ್ಬ ಹೋಳಿ ಇದೆ. ಬಿಹಾರ ದಿನ, ಶಬ್-ಎ-ಖಾದರ್ ಹಾಗೂ ಜಮಾತ್ ಉಲ್ ವಿದಾ ಸೇರಿದಂತೆ ಹಲವು ವಿಶೇಷಗಳು ಇವೆ. ಆಯಾ ರಾಜ್ಯದಲ್ಲಿನ ಹಬ್ಬಗಳು ಹಾಗೂ ಆಚರಣೆಗಳಿಗೆ ಅನುಗುಣವಾಗಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಕರ್ನಾಟಕದಲ್ಲಿ ಯಾವೆಲ್ಲ ದಿನ ಬ್ಯಾಂಕ್‌ಗಳಿಗೆ ರಜೆ ಅನ್ವಯವಾಗಲಿದೆ ಎನ್ನುವ ವಿವರ ಇಲ್ಲಿದೆ.

ಸಾಮಾನ್ಯವಾಗಿ ಬ್ಯಾಂಕುಗಳಿಗೆ ಎರಡನೇ ಮತ್ತು ನಾಲ್ಕನೇ ಶನಿವಾರದಂದು ರಜೆ ಇರುತ್ತವೆ. ಅಲ್ಲದೆ ಮಾರ್ಚ್‌ನಲ್ಲಿ ಒಟ್ಟು 5 ಭಾನುವಾರಗಳು ಇರುವುದರಿಂದ ಈ ದಿನ ಸಹ ಸಹಜವಾಗಿಯೇ ರಜೆ ಇರಲಿದೆ.
ಮಾರ್ಚ್ ತಿಂಗಳಲ್ಲಿ ಯಾವೆಲ್ಲ ದಿನ ಬ್ಯಾಂಕ್‌ಗಳಿಗೆ ರಜೆ ?
ಮಾರ್ಚ್ 2: ಭಾನುವಾರ ಆಗಿದ್ದು ಈ ದಿನ ದೇಶದಾದ್ಯಂತ ಎಲ್ಲಾ ಬ್ಯಾಂಕುಗಳಿಗೂ ರಜೆ ಇರಲಿದೆ.
ಮಾರ್ಚ್ 7: ಶುಕ್ರವಾರ ಚಾಪ್ಚರ್ ಕುಟ್ ಹಬ್ಬ ಇರುವ ಹಿನ್ನೆಲೆಯಲ್ಲಿ ಮಿಜೋರಂನ ಐಜ್ವಾಲ್‌ನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಮಾರ್ಚ್ 9: ಎರಡನೇ ಶನಿವಾರ ಇರುವ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಬ್ಯಾಂಕ್‌ಗಳು ಸಹ ಈ ದಿನ ರಜೆ ಇರಲಿದೆ.
ಮಾರ್ಚ್ 13: ಗುರುವಾರ ಹೋಳಿಕಾ ದಹನ್ ಎನ್ನುವ ಆಚರಣೆ ಇರುವ ಹಿನ್ನೆಲೆಯಲ್ಲಿ ಡೆಹ್ರಾಡೂನ್, ಕಾನ್ಪುರ, ಲಕ್ನೋ, ರಾಂಚಿ ಹಾಗೂ ತಿರುವಂತಪುರಂನಲ್ಲಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಮಾರ್ಚ್ 14: ಶುಕ್ರವಾರ ಹೋಳಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಮಾರ್ಚ್ 15: ಶನಿವಾರದಂದು ಯಾವೋಸಿಂಗ್ ದಿನ ಆಚರಣೆಯ ಹಿನ್ನೆಲೆಯಲ್ಲಿ ಭುವನೇಶ್ವರ, ಇಂಫಾಲ್ ಹಾಗೂ ಪಾಟ್ನಾ ಸೇರಿದಂತೆ ವಿವಿಧ ಭಾಗದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಮಾರ್ಚ್ 16: ಭಾನುವಾರವಾಗಿರುವುದರಂದ ದೇಶದ ಎಲ್ಲಾ ಬ್ಯಾಂಕುಗಳು ಈ ದಿನ ಮುಚ್ಚಿರುತ್ತವೆ.
ಮಾರ್ಚ್ 22: ಇನ್ನು ಈ ದಿನ ನಾಲ್ಕನೇ ಶನಿವಾರ ಇರುವ ಹಿನ್ನೆಲೆಯಲ್ಲಿ ಬ್ಯಾಂಕ್ ತೆರೆಯುವುದಿಲ್ಲ.
ಮಾರ್ಚ್ 23: ಭಾನುವಾರ ರಜೆ ದಿನವಾಗಿದ್ದು. ದೇಶದ ಎಲ್ಲಾ ಬ್ಯಾಂಕ್‌ಗಳು ಸಹ ಮುಚ್ಚಿರುತ್ತವೆ.
ಮಾರ್ಚ್ 27: ಶಬ್-ಎ-ಖಾದ್ರ್ ಎನ್ನುವ ಆಚರಣೆ ಹಿನ್ನೆಲೆಯಲ್ಲಿ ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.
ಮಾರ್ಚ್ 28: ಶುಕ್ರವಾರ ಜಮಾತ್-ಉಲ್-ವಿದಾ ಆಚರಣೆ ಹಿನ್ನೆಲೆಯಲ್ಲಿ ಜಮ್ಮು ಮತ್ತು ಶ್ರೀನಗರದ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಮಾರ್ಚ್ 30: ಭಾನುವಾರ ರಜೆದಿನ ಆಗಿದ್ದು. ದೇಶದ ಎಲ್ಲಾ ಬ್ಯಾಂಕ್‌ಗಳಿಗೆ ಈ ದಿನ ರಜೆ ಇರಲಿದೆ.
ಮಾರ್ಚ್ 31: ಆರ್‌ಬಿಐ ಮೊದಲು ಮಾರ್ಚ್ 31ಕ್ಕೂ ರಜೆ ಘೋಷಿಸಿತ್ತು. ಇದೀಗ ರಜೆಯನ್ನು ರದ್ದು ಮಾಡಲಾಗಿದೆ.












Click it and Unblock the Notifications