Bank Holidays in March 2023 : ಮಾರ್ಚ್‌ನಲ್ಲಿ 12 ದಿನ ಬ್ಯಾಂಕ್ ರಜೆ, ಸಂಪೂರ್ಣ ಪಟ್ಟಿ ಇಲ್ಲಿ ಪರಿಶೀಲಿಸಿ
ಮಾರ್ಚ್ 2023 ರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರಗಳು ಸೇರಿದಂತೆ 12 ದಿನಗಳವರೆಗೆ ಬ್ಯಾಂಕ್ ಮುಚ್ಚಿರುತ್ತದೆ.
ನವದೆಹಲಿ, ಮಾರ್ಚ್. 01 : ಬ್ಯಾಂಕ್ ಕೆಲಸಗಳನ್ನು ಮಾಡಿಸಬೇಕಿದ್ದರೇ ಅಥವಾ ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಲು ಪ್ಲ್ಯಾನ್ ಮಾಡಿದ್ದರೆ ಮೊದಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕ್ ರಜೆ ಪಟ್ಟಿಯನ್ನು ಪರಿಶೀಲಿಸಬೇಕು. ಈ ತಿಂಗಳಲ್ಲಿ ಬ್ಯಾಂಕುಗಳು ಸುಮಾರು 12 ದಿನಗಳು ನಿಮ್ಮ ಸೇವೆಗೆ ಸಿಗುವುದಿಲ್ಲ. ಅಂದರೆ, ಬ್ಯಾಂಕ್ ರಜೆಯಿರುತ್ತದೆ.
ಮಾರ್ಚ್ 2023 ರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರಗಳು ಸೇರಿದಂತೆ 12 ದಿನಗಳವರೆಗೆ ಬ್ಯಾಂಕ್ ಮುಚ್ಚಿರುತ್ತದೆ. ಕೆಲವು ರಜಾದಿನಗಳು ರಾಜ್ಯಕ್ಕೆ ಸೀಮಿತವಾಗಿದ್ದರೇ ಮತ್ತಷ್ಟು ರಾಷ್ಟ್ರೀಯ ರಜಾದಿನಗಳಲ್ಲಿ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಮಾರ್ಚ್ 2023 ರಲ್ಲಿ ಹೋಳಿ, ಚೈತ್ರ ನವರಾತ್ರಿ, ರಾಮ ನವಮಿ ಸೇರಿದಂತೆ ಅನೇಕ ಹಬ್ಬಗಳಿವೆ.

ಕೇಂದ್ರೀಯ ಬ್ಯಾಂಕುಗಳು ರಜಾದಿನಗಳನ್ನು ರಾಷ್ಟ್ರೀಯ ಮತ್ತು ಪ್ರಾದೇಶಿಕ ಎಂದು ವರ್ಗೀಕರಿಸುತ್ತವೆ. ಮೊದಲ ವರ್ಗದಲ್ಲಿ ಭಾರತದಾದ್ಯಂತ ಬ್ಯಾಂಕ್‌ಗಳಲ್ಲಿ ರಕೆ ನೀಡಲಾಗುತ್ತದೆ. ಆದರೆ ಪ್ರಾದೇಶಿಕ ರಜಾದಿನಗಳಲ್ಲಿ ಕೆಲವು ರಾಜ್ಯಗಳಲ್ಲಿ ಶಾಖೆಗಳನ್ನು ಮುಚ್ಚಲು ಕಾರಣವಾಗುತ್ತವೆ. ಆದರೆ, ಈ ದಿನಗಳಲ್ಲಿ, ಆನ್‌ಲೈನ್ ಮತ್ತು ನೆಟ್ ಬ್ಯಾಂಕಿಂಗ್ ಸೇವೆಗಳು ಕಾರ್ಯನಿರ್ವಹಿಸುತ್ತವೆ.
ಮಾರ್ಚ್‌ನಲ್ಲಿ ಬ್ಯಾಂಕ್ ರಜೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
ಮಾರ್ಚ್ 03: ಚಾಪ್ಚಾರ್ ಕೂಟ್ (ಐಜ್ವಾಲ್, ಮಿಜೋರಾಂ)
ಮಾರ್ಚ್ 05: ಭಾನುವಾರ ಬ್ಯಾಂಕ್‌ಗಳು ಮುಚ್ಚಿರುತ್ತವೆ
ಮಾರ್ಚ್ 07: ಹೋಳಿ (ಎರಡನೇ ದಿನ)/ಹೋಲಿಕಾ ದಹನ್/ಧುಲಾಂಡಿ/ಡೋಲ್ ಜಾತ್ರೆ (ಬೇಲಾಪುರ್, ಡೆಹ್ರಾಡೂನ್, ಗುವಾಹಟಿ, ಹೈದರಾಬಾದ್, ತೆಲಂಗಾಣ, ಜೈಪುರ, ಜಮ್ಮು, ಕಾನ್ಪುರ್, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ಪಣಜಿ, ರಾಂಚಿ ಮತ್ತು ಶ್ರೀನಗರ ಪ್ರದೇಶಗಳಲ್ಲಿ ಬ್ಯಾಂಕ್ ರಜೆಯಿರುತ್ತದೆ.

ಮಾರ್ಚ್ 8: ಹೋಳಿ ಹಬ್ಬ, (ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಡೆಹ್ರಾಡೂನ್ ಮತ್ತು ಗ್ಯಾಂಗ್ಟಾಕ್ ಸೇರಿದಂತೆ ಕೆಲವು ನಗರಗಳಲ್ಲಿ ಬ್ಯಾಂಕ್ ರಜೆ)
ಮಾರ್ಚ್ 09: ಹೋಳಿ (ಪಾಟ್ನಾದಲ್ಲಿ ಬ್ಯಾಂಕ್ ರಜೆ)
ಮಾರ್ಚ್ 11: ಎರಡನೇ ಶನಿವಾರ
ಮಾರ್ಚ್ 12: ಭಾನುವಾರ ಬ್ಯಾಂಕ್‌ಗಳು ಮುಚ್ಚಿರುತ್ತವೆ
ಮಾರ್ಚ್ 19: ಭಾನುವಾರದಂದು ಬ್ಯಾಂಕ್ ರಜೆ
ಮಾರ್ಚ್ 22: ಯುಗಾದಿ, ಗುಡಿ ಪದ್ವಾ, ಮೊದಲ ನವರಾತ್ರಿ ( ಬೇಲಾಪುರ್, ಬೆಂಗಳೂರು, ಕರ್ನಾಟಕ, ಚೆನ್ನೈ, ಹೈದರಾಬಾದ್, ಇಂಫಾಲ್, ಮುಂಬೈ, ನಾಗ್ಪುರ, ಪಣಜಿ ಮತ್ತು ಪಾಟ್ನಾ ಸೇರಿದಂತೆ ಕೆಲವು ನಗರಗಳಲ್ಲಿ ಬ್ಯಾಂಕ್ ರಜೆ)
ಮಾರ್ಚ್ 25: ನಾಲ್ಕನೇ ಶನಿವಾರ
ಮಾರ್ಚ್ 26: ಭಾನುವಾರ ಬ್ಯಾಂಕ್ ರಜೆ
ಮಾರ್ಚ್ 30: ರಾಮನವಮಿ (ಅಹಮದಾಬಾದ್, ಭೋಪಾಲ್, ಭುವನೇಶ್ವರ, ಚಂಡೀಗಢ, ಪಾಟ್ನಾ, ಲಕ್ನೋ, ಮುಂಬೈ ಮತ್ತು ನಾಗ್ಪುರ ಸೇರಿದಂತೆ ಕೆಲವು ನಗರಗಳಲ್ಲಿ ಬ್ಯಾಂಕ್ ರಜೆ)












Click it and Unblock the Notifications