• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂದಿನ ವಾರ 5 ದಿನ ಬ್ಯಾಂಕ್‌ಗಳಿಗೆ ರಜೆ; ದಿನಾಂಕ ಇಲ್ಲಿದೆ

|
Google Oneindia Kannada News

ನವೆದೆಹಲಿ, ನವೆಂಬರ್ 20: ಮುಂದಿನ ವಾರದಲ್ಲಿ (ನವೆಂಬರ್ 21ರಿಂದ) ಐದು (5) ದಿನ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳಿಗೆ ರಜೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ವಾರ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದಾದರೂ ಮಹತ್ವದ ಕೆಲಸವಿದ್ದರೆ ರಜೆಯನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಕೆಲಸವನ್ನು ನಿರ್ವಹಿಸಿಕೊಳ್ಳಿ.

ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಮತ್ತು ದೇಶಾದ್ಯಂತ ಪ್ರಾದೇಶಿಕ ಬ್ಯಾಂಕ್‌ಗಳು ಸೂಚಿಸಿದ ದಿನಾಂಕಗಳಲ್ಲಿ ಮುಚ್ಚಲ್ಪಡುತ್ತವೆ ಎಂದು ಆರ್‌ಬಿಐ ಬಿಡುಗಡೆ ಮಾಡಿದ ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾಗಿದೆ.

ವಿವಿಧ ರಾಜ್ಯವಾರು ರಜಾದಿನಗಳ ಹೊರತಾಗಿ ವಾರಾಂತ್ಯದ ಕೆಲವು ದಿನಗಳಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಇವುಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ.

ನವೆಂಬರ್ 21 ಭಾನುವಾರ
ನವೆಂಬರ್ 22 ಕನಕದಾಸ ಜಯಂತಿ- ಕರ್ನಾಟಕ
ನವೆಂಬರ್ 23 ಸೆಂಗ್ ಕುಟ್ಸ್ನೆಮ್- ಶಿಲ್ಲಾಂಗ್
ನವೆಂಬರ್ 27 ತಿಂಗಳ ನಾಲ್ಕನೇ ಶನಿವಾರ
ನವೆಂಬರ್ 28 ಭಾನುವಾರ

ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, ಹಾಲಿಡೇ, ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ ಮತ್ತು ಬ್ಯಾಂಕ್‌ಗಳ ಖಾತೆಗಳನ್ನು ಮುಚ್ಚುವುದು. ಆರ್‌ಬಿಐ ಈ ವರ್ಗಗಳ ಅಡಿಯಲ್ಲಿ ಸಾಲದಾತರಿಗೆ ರಜಾದಿನಗಳನ್ನು ಸೂಚಿಸಿದೆ.

ಗಣರಾಜ್ಯೋತ್ಸವ (ಜನವರಿ 26), ಸ್ವಾತಂತ್ರ್ಯ ದಿನ (ಆಗಸ್ಟ್ 15), ಮತ್ತು ಗಾಂಧಿ ಜಯಂತಿ (ಅಕ್ಟೋಬರ್ 2), ಕ್ರಿಸ್‌ಮಸ್ ದಿನ (ಡಿಸೆಂಬರ್ 25). ದೀಪಾವಳಿ, ಈದ್, ಗುರುನಾನಕ್ ಜಯಂತಿ, ಗುಡ್ ಫ್ರೈಡೇ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.

ಬ್ಯಾಂಕ್ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಆದರೆ ಮುಂದಿನ ವಾರ ಕೆಲವು ರಾಜ್ಯಗಳಲ್ಲಿ ಎಲ್ಲಾ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಉದಾಹರಣೆಗೆ ನವೆಂಬರ್ 22ರ ಕನಕದಾಸ ಜಯಂತಿಯಂದು ಕರ್ನಾಟಕದಲ್ಲಿ ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಆದರೆ, ದೇಶದ ಉಳಿದ ಕಡೆ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

ಗಮನಿಸಬೇಕಾದ ಇನ್ನೊಂದು ಪ್ರಮುಖ ವಿಷಯವೆಂದರೆ ತಿಂಗಳ ನಾಲ್ಕನೇ ಶನಿವಾರ ಮತ್ತು ಭಾನುವಾರದಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಏಕೆಂದರೆ ಆರ್‌ಬಿಐ ಇದನ್ನು ಕಡ್ಡಾಯಗೊಳಿಸಿದೆ.

English summary
There will be a holiday for all private and government banks for five (5) days in next week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X