ಕೇಂದ್ರ ಸರ್ಕಾರಿ ನೌಕರರಿಗೆ ಶುರುವಾಗಿದೆ ಭಯ, ಯಾವ ಕಾರಣಕ್ಕೆ?

ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಲು ಮುಂದಾದರೆ ಏನೆಲ್ಲಾ ಸಮಸ್ಯೆಗಳು ದಿಢೀರ್ ಉದ್ಭವ ಆಗಲಿದೆ ಅನ್ನೋದು ಮತ್ತೊಮ್ಮೆ ಜಗತ್ತಿಗೆ ಗೊತ್ತಾಗಿದೆ. ಅದರಲ್ಲೂ ವಿದ್ಯಾರ್ಥಿಗಳು ಈ ವಿಚಾರದಲ್ಲಿ ರೊಚ್ಚಿಗೆದ್ದರೆ ಒಂದು ಸರ್ಕಾರವೇ ಬೀಳುತ್ತೆ & ಪ್ರಧಾನ ಮಂತ್ರಿಯೇ ದೇಶ ಬಿಟ್ಟು ಓಡಿ ಹೋಗಬೇಕಾದ ಪರಿಸ್ಥಿತಿ ಬರಲಿದೆ ಎಂಬುದು ಪ್ರಪಂಚಕ್ಕೆ ಗೊತ್ತಾಗಿದೆ. ಇಷ್ಟೆಲ್ಲಾ ನಡೆಯುತ್ತಿರುವ ಸಮಯದಲ್ಲೇ ಕೇಂದ್ರ ಸರ್ಕಾರಿ ನೌಕರರಲ್ಲಿ ಭಯದ ವಾತಾವರಣ ಇದೀಗ ನಿರ್ಮಾಣ ಆಗಿದೆ.

ಕೇಂದ್ರ ಸರ್ಕಾರಿ ನೌಕರರಲ್ಲಿ ಭಯ ಶುರುವಾಗಿರುವುದು ಭಾರತದಲ್ಲಿ ಅಲ್ಲ, ಭಾರತದ ಪಕ್ಕದ ದೇಶವಾದ ಬಾಂಗ್ಲಾದಲ್ಲಿ. ಯಾಕಂದ್ರೆ ಮೀಸಲಾತಿ ವಿರುದ್ಧ ಶುರುವಾಗಿರುವ ಹೋರಾಟಕ್ಕೆ ಇಡೀ ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶ ಸರ್ಕಾರಿ ನೌಕರರಿಗೆ ಭಯ ಶುರುವಾಗಿದೆ. ಕೆಲಸ ಉಳಿಸಿಕೊಳ್ಳುವುದು ಬಿಡಿ, ಜೀವ ಉಳಿಸಿಕೊಂಡರೆ ಸಾಕಪ್ಪ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಹಾಗಾದ್ರೆ ಸರ್ಕಾರಿ ನೌಕರರಿಗೆ ದಿಢೀರ್ ಭಯ ಶುರುವಾಗಿರುವುದು ಯಾಕೆ? ಮುಂದೆ ಓದಿ.

Bangladesh Government Employees Are In Tension After PM Sheikh Hasina Fled The Country

ಸರ್ಕಾರಿ ನೌಕರರಿಗೆ ಭಯ ಯಾಕೆ?

1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ್ದ ಹೋರಾಟಗಾರರಿಗೆ ಸರ್ಕಾರದ ಉದ್ಯೋಗದಲ್ಲಿ ಮೀಸಲಾತಿ ನೀಡುವ ನಿರ್ಧಾರವೇ ಬಾಂಗ್ಲಾದೇಶದ ನೆಮ್ಮದಿ ಹಾಳು ಮಾಡಿದೆ. ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಸರ್ಕಾರದ ನಿರ್ಧಾರ ವಿರೋಧಿಸಿ ಮೊದಲಿಗೆ ಪ್ರತಿಭಟನೆ ಶುರು ಮಾಡಿದ್ದ ವಿದ್ಯಾರ್ಥಿ ಸಂಘಟನೆಗಳು, ಆ ನಂತರ ಹಿಂಸಾಚಾರಕ್ಕೆ ಇಳಿದವು. ಹೀಗಾಗಿ ಬಾಂಗ್ಲಾದೇಶ ಇದೀಗ ಸಂಪೂರ್ಣವಾಗಿ ಹೊತ್ತಿ ಉರಿಯುತ್ತಿದೆ. ಈ ಸಮಯದಲ್ಲಿ ಸರ್ಕಾರದ ನೌಕರರಿಗೆ ಭಯ ಶುರುವಾಗಿದೆ. ಶೇಖ್‌ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬೆನ್ನಲ್ಲೇ ಸಚಿವಾಲಯದ ಉದ್ಯೋಗಿಗಳು & ವಿವಿಧ ಸರ್ಕಾರಿ ಇಲಾಖೆಗಳ ನೌಕರರಲ್ಲಿ ಆತಂಕ ಕಾಡುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಅದರಲ್ಲೂ ಬಾಂಗ್ಲಾದೇಶದ ರಾಜಧಾನಿ ಢಾಕಾದ ಸರ್ಕಾರಿ ಕಚೇರಿಗಳಲ್ಲಿ ನೌಕರರು ಸರಿಯಾಗಿ ಆಫಿಸ್‌ಗೆ ಬರುತ್ತಿಲ್ಲ. ಯಾಕಂದ್ರೆ ಯಾವ ಕ್ಷಣದಲ್ಲಿ ಹಿಂಸಾಚಾರ ಹೆಚ್ಚಾಗುತ್ತೋ? ಎನ್ನುವ ಭಯ ಬಾಂಗ್ಲಾದೇಶದ ಜನರಲ್ಲಿ ಕಾಡುತ್ತಿದೆ. ಹೀಗಾಗಿಯೇ ಬಾಂಗ್ಲಾದೇಶ ಜನರಿಗೆ ಬದುಕು ಕಟ್ಟಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ. ಅದ್ರಲ್ಲೂ ಸರ್ಕಾರಿ ನೌಕರರು ತಮ್ಮ ಮೇಲೆ ದಾಳಿ ನಡೆಯುತ್ತಾ? ಎಂಬ ಭಯದಲ್ಲೇ ನರಳುತ್ತಿದ್ದಾರೆ. ಈಗಾಗಲೇ ಬಾಂಗ್ಲಾದಲ್ಲಿ ಹಲವಾರು ಸರ್ಕಾರಿ ಕಚೇರಿಗಳಿಗೆ ಬೆಂಕಿ ಕೂಡ ಹಚ್ಚಲಾಗಿದೆ.

ವಿದ್ಯಾರ್ಥಿಗಳ ಶಕ್ತಿ ಏನು ಅಂತಾ ಗೊತ್ತಾಗಿದೆ!

ಒಟ್ನಲ್ಲಿ ಬಾಂಗ್ಲಾದೇಶ ಹೋರಾಟ ವಿದ್ಯಾರ್ಥಿಗಳ ಶಕ್ತಿ ಏನು ಅನ್ನೋದನ್ನ ಮತ್ತೊಮ್ಮೆ ಇಡೀ ಜಗತ್ತಿಗೆ ತೋರಿಸಿದಂತೆ ಕಾಣುತ್ತಿದೆ. ಯಾಕಂದ್ರೆ ಸಣ್ಣ ವಿಚಾರವನ್ನು ಬಾಂಗ್ಲಾದೇಶ ಸರ್ಕಾರ ಗುಡ್ಡ ಮಾಡಿ ತೋರಿಸಿತ್ತು. ಇದರ ಪರಿಣಾಮ ಬಾಂಗ್ಲಾದೇಶ ಈಗ ಅರಾಜಕತೆಗೆ ಸಿಲುಕಿದೆ. ಹಾಗೇ ಬಾಂಗ್ಲಾದೇಶ ಇದೀಗ ಸೇನೆಯ ಹಿಡಿತಕ್ಕೆ ಸಿಲುಕಿದ್ದು, ಭವಿಷ್ಯದಲ್ಲಿ ಬಾಂಗ್ಲಾ ಸ್ಥಿತಿ ಮತ್ತಷ್ಟು ಹದಗೆಡುವ ಭಯ ಕೂಡ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+