209 ಸ್ಥಾನ ಗೆದ್ದು ಬೀಗಿದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ, ಪ್ರಧಾನಿ ಮೋದಿ ಅವರ ಮಹತ್ವದ ಸಂದೇಶ... Bangladesh Election
ಭಾರತ ಮತ್ತು ಬಾಂಗ್ಲಾದೇಶ ಮತ್ತೊಮ್ಮೆ ಒಟ್ಟಿಗೆ ಸಾಗುವ ಸಮಯ ಬಂದಂತೆ ಭಾಸವಾಗುತ್ತಿದೆ, ಈ ಮಾತು ಯಾಕಂದ್ರೆ ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬಾಂಧವ್ಯ ಹಾಳಾಗಿ ಹೋಗಿತ್ತು. ಅದರಲ್ಲೂ ಶೇಖ್ ಹಸೀನಾ ಅಧಿಕಾರ ಬಿಟ್ಟು ಕೆಳಗೆ ಇಳಿದು, ಭಾರತಕ್ಕೆ ಬಂದು ಆಶ್ರಯ ಪಡೆದ ನಂತರ ಎರಡೂ ದೇಶಗಳ ಸಂಬಂಧ ಹಾಳು ಮಾಡಲು ಅನೇಕರು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದರು. ಬಾಂಗ್ಲಾದೇಶ 2 ವರ್ಷದ ಹಿಂದೆ ಹೊತ್ತಿ ಉರಿದಿತ್ತು, 2024 ಆಗಸ್ಟ್ ತಿಂಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಜೋರಾಗಿ ಶೇಖ್ ಹಸೀನಾ ಅಧಿಕಾರ ತ್ಯಾಗ ಆಗಿತ್ತು. ಅಂದಿನಿಂದ ಕೂಡ ಭಾರತ ಮತ್ತು ಬಾಂಗ್ಲಾ ಸ್ನೇಹ ಹಾಳಾಗುತ್ತ ಬಂದಿತ್ತು. ಆದರೆ ಇದೀಗ ಬದಲಾವಣೆ ಶುರುವಾದಂತೆ ಕಾಣುತ್ತಿದ್ದು, ಪ್ರಧಾನಿ ಮೋದಿ ಅವರು ಪರೋಕ್ಷವಾಗಿ ಈ ಬಗ್ಗೆ ಸಂದೇಶ ರವಾನಿಸಿದ್ದಾರೆ.
ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಎಂದರೆ ಬಿಎನ್ಪಿ ಪಕ್ಷದ ತಾರಿಕ್ ರಹ್ಮಾನ್ಗೆ ಬಾಂಗ್ಲಾ ಪ್ರಧಾನಿ ಪಟ್ಟ ಸಿಗುವ ನಿರೀಕ್ಷೆ ಇದ್ದು, ಭಾರತದ ಜೊತೆಗೆ ತಾರಿಕ್ ರಹ್ಮಾನ್ ಸಂಬಂಧ ಕೂಡ ಉತ್ತಮವಾಗಿದೆ. 291 ಅಭ್ಯರ್ಥಿಗಳನ್ನು ಬಿಎನ್ಪಿ ಪಕ್ಷ ಈ ಚುನಾವಣೆಯಲ್ಲಿ ಕಣಕ್ಕೆ ಇಳಿಸಿತ್ತು, ಈ ಪೈಕಿ ಈಗಾಗಲೇ 209 ಸ್ಥಾನಗಳಲ್ಲಿ ಬಿಎನ್ಪಿ ಪಕ್ಷ ಗೆದ್ದು ಬೀಗಿದೆ. ಹೀಗೆ 2 ವರ್ಷಗಳ ತಿಕ್ಕಾಟದ ನಂತರ ಬಾಂಗ್ಲಾದ ನೆಲದಲ್ಲಿ ಚುನಾವಣೆ ನಡೆದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವ ಸಮಯದಲ್ಲೇ ಭಾರತದ ಪ್ರಧಾನಿ ಮೋದಿ ಅವರು ನೇರವಾಗಿ ನೆರೆ ದೇಶದ ರಾಜಕೀಯ ನಾಯಕನಿಗೆ ಕರೆ ಮಾಡಿ ಶುಭ ಕೋರಿದ್ದಾರೆ.

ಭಾರತ ಮತ್ತು ಬಾಂಗ್ಲಾ ಮತ್ತೆ ದೋಸ್ತಿ?
ಜಗತ್ತಿನ ಶಕ್ತಿಶಾಲಿ ದೇಶಗಳ ಪೈಕಿ ಒಂದಾಗಿರುವ ಭಾರತಕ್ಕೆ ಈಗ ಬಾಂಗ್ಲಾದೇಶದ ಸ್ನೇಹ ಅನಿವಾರ್ಯ ಅಲ್ಲ, ಆದರೆ ಭವಿಷ್ಯದ ದೃಷ್ಟಿಯಿಂದ ಎರಡೂ ದೇಶಗಳು ಒಟ್ಟಿಗೆ ಸಾಗಬೇಕಿದೆ. ಇಂತಹ ಸಮಯ ಹಾಗೂ ಸಂದರ್ಭವನ್ನು ಕೇಂದ್ರದ ಎನ್ಡಿಎ ಸರ್ಕಾರ ಅಳೆದು & ತೂಗಿ ಲೆಕ್ಕಾಚಾರ ಹಾಕುತ್ತಾ ಇದೆ. ಹೀಗಿದ್ದಾಗ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಪೂರ್ಣ ಬಹುಮತ ಪಡೆದು, ಬಾಂಗ್ಲಾದಲ್ಲಿ ಸರ್ಕಾರ ರಚಿಸುವ ಸುದ್ದಿ ಸಿಗುತ್ತಿದ್ದಂತೆ ಪ್ರಧಾನಿ ಮೋದಿ ಅವರು ಬಿಎನ್ಪಿ ಪಕ್ಷದ ನಾಯಕನಿಗೆ ಕರೆ ಮಾಡಿ ಶುಭ ಕೋರಿದ್ದಾರೆ.
ಪ್ರಧಾನಿ ಮೋದಿ ಅವರು ಹೇಳಿದ್ದೇನು?
ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಗೆಲುವಿನ ಹಿನ್ನೆಲೆ ಮೊದಲಿಗೆ ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದರು ಪ್ರಧಾನಿ ಮೋದಿ ಅವರು. ಅಲ್ಲದೆ ಇದೇ ವೇಳೆ ಬಾಂಗ್ಲಾದೇಶದ ನೂತನ ಪ್ರಧಾನಿ ಎಂದು ಕರೆಸಿಕೊಳ್ಳುತ್ತಿರುವ, ತಾರಿಕ್ ರಹ್ಮಾನ್ ಅವರ ಜೊತೆಗೆ ಫೋನ್ ಮೂಲಕ ಸಂಭಾಷಣೆಯನ್ನ ನಡೆಸಿದ ವಿಚಾರವನ್ನು ಕೂಡ ತಿಳಿಸಿದ್ದರು ಪ್ರಧಾನಿ ಅವರು. ತಮ್ಮ ಎಕ್ಸ್ ಖಾತೆ ಮೂಲಕ, ತಾರಿಕ್ ರಹ್ಮಾನ್ ಅವರ ಜೊತೆಯಲ್ಲಿ ಮಾತನಾಡಿ ಸಂತೋಷವಾಯಿತು. ಬಾಂಗ್ಲಾದೇಶ ಚುನಾವಣೆ ಭರ್ಜರಿ ಗೆಲುವಿಗಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದರು. ಅಲ್ಲದೆ ಬಾಂಗ್ಲಾ ಪ್ರಜೆಗಳ ಆಕಾಂಕ್ಷೆ ಈಡೇರಿಸುವ ಅವರ ಪ್ರಯತ್ನದಲ್ಲಿ ಶುಭಾಶಯ ಮತ್ತು ಬೆಂಬಲ ವ್ಯಕ್ತಪಡಿಸಿದ್ದೇನೆ ಎಂದಿದ್ದಾರೆ. ಹೀಗೆ ಬಾಂಗ್ಲಾ ನೆಲದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವ ಸಮಯದಲ್ಲಿ, ಭಾರತ ಮತ್ತು ಬಾಂಗ್ಲಾ ಸಂಬಂಧ ಕೂಡ ಸುಧಾರಣೆ ಕಾಣುವ ಮುನ್ಸೂಚನೆ ಸಿಗುತ್ತಿದೆ.
ಬಿಎನ್ಪಿ ಪಕ್ಷದ ತಾರಿಕ್ ರಹ್ಮಾನ್ಗೆ ಪ್ರಧಾನಿ ಪಟ್ಟ ಸಿಗುವ ನಿರೀಕ್ಷೆ ಇದ್ದು, ಭಾರತದ ಜೊತೆ ತಾರಿಕ್ ರಹ್ಮಾನ್ ಸಂಬಂಧ ಕೂಡ ಉತ್ತಮವಾಗಿದೆ. ಎದುರಾಳಿ ಅಭ್ಯರ್ಥಿಗಳನ್ನ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಅಭ್ಯರ್ಥಿಗಳು ಸುಲಭವಾಗಿ ಎದುರಿಸಿ ಗೆದ್ದಿದ್ದಾರೆ, ಹೀಗಾಗಿ ಬಾಂಗ್ಲಾ ಮತದಾರ ಸಂಪೂರ್ಣ ಬೆಂಬಲವನ್ನು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಗೆ ನೀಡಿದ್ದಾನೆ ಎಂಬ ಚರ್ಚೆಗಳು ಈಗ ಶುರುವಾಗಿವೆ. 291 ಅಭ್ಯರ್ಥಿಗಳನ್ನು ಬಿಎನ್ಪಿ ಪಕ್ಷ ಈ ಚುನಾವಣೆಯಲ್ಲಿ ಕಣಕ್ಕೆ ಇಳಿಸಿತ್ತು, ಹೀಗೆ ಕಣಕ್ಕಿಳಿದ ಅಭ್ಯರ್ಥಿಗಳಲ್ಲಿ 200ಕ್ಕೂ ಹೆಚ್ಚು ಸ್ಥಾನ ಈಗಾಗಲೇ ಬಿಎನ್ಪಿ ಪಕ್ಷದ ಪಾಲಾಗಿದೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications