ಕೇರಳ: ಬೆಂಗಳೂರು ಟೆಕ್ಕಿ ಮೇಲೆ ಸಾಮೂಹಿಕ ರೇಪ್

ಬೆಂಗಳೂರಿನ 40 ವರ್ಷ ವಯಸ್ಸಿನ ಸದರಿ ಮಹಿಳಾ ಟೆಕ್ಕಿ, ತಿರುವನಂತಪುರದ ಹಿನ್ನೀರು ದ್ವೀಪದ ಸ್ಟಾರ್ ಶ್ರೇಣಿಯ ವಿಹಾರಧಾಮದಲ್ಲಿ ವಿಹರಿಸುತ್ತಿದ್ದಾಗ ನವೆಂಬರ್ 28ರಂದು ಈ ದುರ್ಘಟನೆ ನಡೆದಿದೆ. ಬಿಗಿ ಭದ್ರತೆಯಿರಬೇಕಾದ ಸ್ಟಾರ್ ಶ್ರೇಣಿಯ ಹೋಟೆಲಿನಲ್ಲಿ ಈ ಘಟನೆ ನಡೆದಿರುವುದು ಆತಂಕ ಹೆಚ್ಚಿಸಿದೆ.
ಸದರಿ ಮಹಿಳೆಯು ತಮ್ಮ ಕೆಲ ಸಹೋದ್ಯೋಗಿಗಳ ಜತೆ ತಿರುವನಂತಪುರದಿಂದ 30 ಕಿಮೀ ದೂರದ ಪೊಳಿಯೂರಿನ (Pozhiyur) ವಿಹಾರಧಾಮಕ್ಕೆ ಅಧಿಕೃತ ಪ್ರವಾಸಕ್ಕೆ ಬಂದಿದ್ದರು. ಆದರೆ ನವೆಂಬರ್ 28ರಂದು ಇಬ್ಬರು ಅಪರಿಚಿತರು ರಾತ್ರಿ 2.30ಕ್ಕೆ ಅವರ ಕೋಣೆ ಪ್ರವೇಶಿಸಿದ್ದಾನೆ. ( ಮುನ್ನಾರ್ ಗೆ ಹಿನ್ನಡೆ, ನಮ್ಮ ಕೊಡಗು ಈಗ ನಂ 1 )
ಒಬ್ಬನು ಆಕೆಯನ್ನು ಕಪಿಮುಷ್ಟಿಯಲ್ಲಿ ಹಿಡಿದಿದ್ದಾನೆ. ಅದೇ ವೇಳೆ ಮತ್ತೊಬ್ಬ ಆಕೆಯ ಮೇಲೆ ಎರಗಿದ್ದಾನೆ. ನಂತರ ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್ದಾರೆ. ಈ ಘಟನೆಯಿಂದ ಮಹಿಳೆಗೆ ಗಾಯಗಳಾಗಿದ್ದು, ತೀವ್ರ ಆಘಾತಗೊಂಡಿದ್ದಾರೆ.
ಮರುದಿನ ಸಂಜೆ ಪೊಲೀಸರಿಗೆ ಅವರು ದೂರು ನೀಡಿದ್ದಾರೆ. ಬಾಧಿತ ಮಹಿಳೆಯ ಹೇಳಿಕೆಯನ್ನಾಧರಿಸಿ ಪೊಲೀಸರು ರೇಪ್ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಪೊಲೀಸರಲ್ಲಿ ದೂರು ದಾಖಲಿಸಿದ ಬಾಧಿತ ಮಹಿಳೆ, ತಕ್ಷಣ ಬೆಂಗಳೂರಿಗೆ ವಾಪಸಾಗಿದ್ದಾರೆ.
ಆದರೆ ಇನ್ನೂ ಆರೋಪಿಗಳ ಪತ್ತೆಯಾಗಿಲ್ಲ. ಕೋಣೆಯಿಂದ ಸಂಗ್ರಹಿಸಿದ ವಿಧಿವಿಜ್ಞಾನ ಸಾಕ್ಷ್ಯವನ್ನು ವಿಶ್ಲೇಷಣೆಗೆ ಕಳಿಸಲಾಗಿದೆ. ವಿಹಾರಧಾಮದಲ್ಲಿದ್ದ ಅತಿಥಿಗಳು ಮತ್ತು ಸಿಬ್ಬಂದಿಯ ಫೋನ್ ಕರೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.


Click it and Unblock the Notifications
