ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋ ಹತ್ಯೆ ನಿಷೇಧ: ಜೂ. 15ರಂದು ಸುಪ್ರೀಂ ತೀರ್ಪು

ಗೋ ಹತ್ಯೆಗೆ ಸಂಬಂಧಿಸಿದಂತೆ ಜೂೂ. 15ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್. ಕೇಂದ್ರದ ಗೋ ಹತ್ಯೆ ನಿಷೇಧ ಕಾನೂನಿನ ವಿರುದ್ಧ ಸಲ್ಲಿಕೆಯಾಗಿದ್ದ ಮೇಲ್ಮನವಿ ವಿಚಾರಣೆ ವೇಳೆ ಹೇಳಿಕೆ.

|
Google Oneindia Kannada News

ನವದಹೆಲಿ/ಕೊಚ್ಚಿ: ಕೇಂದ್ರ ಸರ್ಕಾರದ ಗೋ ಹತ್ಯೆ ಸಂಬಂಧಿ ಕಾನೂನಿನ ಬಗ್ಗೆ ತಾನು ಜೂನ್ 15ರಂದು ತೀರ್ಪು ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಕಸಾಯಿ ಖಾನೆಗಳಿಗೆ ಗೋವುಗಳ ಮಾರಾಟ ಹಾಗೂ ಸಂತೆಗಳಲ್ಲಿ ಜಾನುವಾರುಗಳ ಮಾರಾಟವನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ಸಲ್ಲಿಸಲಾಗಿದೆ.[ಗೋಹತ್ಯೆ ನಿಷೇಧ, ಮಾರಾಟ ಕಾಯ್ದೆಗೆ ತಾತ್ಕಾಲಿಕ ತಡೆಯಾಜ್ಞೆ]

Ban on cattle slaughter: SC to hear plea on June 15

ಹೈದರಾಬಾದ್ ನ ಮೊಹಮ್ಮದ್ ಅಬ್ದುಲ್ ಫಹೀಮ್ ಖುರೇಷಿ ಎಂಬುವರು ಕೇಂದ್ರ ಸರ್ಕಾರದ ನಿರ್ಧಾರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಬುಧವಾರ ಈ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಹಾಗೂ ದೀಪಕ್ ಗುಪ್ತಾ ಅವರುಳ್ಳ ವಿಭಾಗೀಯ ಪೀಠ, ಜೂ. 15ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿತು.

ಏತನ್ಮಧ್ಯೆ, ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಡೆಯಾಜ್ಞೆ ತರಲು ಕೇರಳ ಹೈಕೋರ್ಟ್ ನಿರಾಕರಿಸಿದೆ. ಗೋ ಹತ್ಯೆ ನಿಷೇಧ ವಿರೋಧಿಸಿ ಕೇರಳ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಅಲ್ಲಿನ ಪೀಠ, ಮುಂದಿನ ವಿಚಾರಣೆಯನ್ನು ಜೂ. 26ಕ್ಕೆ ಮುಂದೂಡಿತಾದರೂ, ಕೇಂದ್ರದ ನಿರ್ಧಾರದ ವಿರುದ್ಧ ತಡೆಯಾಜ್ಞೆ ನೀಡಲು ನಿರಾಕರಿಸಿತು.

English summary
The Supreme Court said on Wednesday that it will hear on June 15 a plea challenging the Centre's notification banning sale and purchase of cattle at animal markets for slaughter on the grounds that its provisions were unconstitutional.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X