ಗೋಹತ್ಯೆ ನಿಷೇಧ, ಮಾರಾಟ ಕಾಯ್ದೆಗೆ ತಾತ್ಕಾಲಿಕ ತಡೆಯಾಜ್ಞೆ
ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ಗೋಹತ್ಯೆ ನಿಷೇಧ, ಗೋ ಮಾರಾಟ ನಿರ್ಬಂಧ ಕಾಯ್ದೆಗೆ ಮದ್ರಾಸ್ ಹೈಕೋರ್ಟಿನ ಮಧುರೈ ಬೆಂಚ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ
ಚೆನ್ನೈ, ಮೇ 30: ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ಗೋಹತ್ಯೆ ನಿಷೇಧ, ಗೋ ಮಾರಾಟ ನಿರ್ಬಂಧ ಕಾಯ್ದೆಗೆ ಮದ್ರಾಸ್ ಹೈಕೋರ್ಟಿನ ಮಧುರೈ ನ್ಯಾಯಪೀಠ ನಾಲ್ಕು ವಾರಗಳ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ರೈತರಿಗೆ ರೈತರಿಗೆ ಮಾತ್ರ ಪಶು(ಹಸು, ಎಮ್ಮೆ, ಕೋಣ, ಒಂಟೆ ಇತ್ಯಾದಿ) ಮಾರಾಟ ಮಾಡಬೇಕು ಎಂದು ಸರ್ಕಾರ ನಿಯಮ ರೂಪಿಸಿದೆ. ಇದನ್ನು ಪ್ರಶ್ನಿಸಿ ಕೋರ್ಟಿನಲ್ಲಿ ಅರ್ಜಿ ಹಾಕಲಾಗಿತ್ತು.

ಗೋವುಗಳು ಅಕ್ರಮವಾಗಿ ಕಸಾಯಿಖಾನೆ ಸೇರುವುದನ್ನು ತಪ್ಪಿಸಲು ದನಗಳ ಮಾರಾಟ ಕ್ರಮ ಹಾಗೂ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಕಠಿಣಗೊಳಿಸಿದೆ. ಗುರುತಿನ ಚೀಟಿ, ಮಾರಾಟಗಾರ ಹಾಗೂ ಗ್ರಾಹಕನ ಸಂಪೂರ್ಣ ವಿವರಗಳನ್ನು ಹೊಸದಾಗಿ ಸ್ಥಾಪಿತವಾಗಿರುವ ಗೋರಕ್ಷಕ ಸಮಿತಿ ಮುಂದಿಡಬೇಕಾಗುತ್ತದೆ.












Click it and Unblock the Notifications