ವಿವಾದಗಳ ಬೆನ್ನಲ್ಲೇ ಕೇದಾರನಾಥ ದೇಗುಲದ ಬಳಿ ಫೋಟೋ, ವಿಡಿಯೋ ತೆಗೆಯುವುದಕ್ಕೆ ನಿಷೇಧ
ಡೆಹೆರಾಡೂನ್, ಜುಲೈ. 17: ಕೇದಾರನಾಥ ದೇಗುಲದ ಬಳಿಯಲ್ಲಿ ತೆಗೆದಿದ್ದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಅದಕ್ಕೆ ಮೆಚ್ಚುಗೆ ಟೀಕೆ ಎರಡು ವ್ಯಕ್ತವಾಗಿದ್ದವು. ಇದಾದ ನಂತರ ದೇವಾಸ್ಥಾನದ ಬಳಿ ಫೋಟೋಗಳನ್ನು ಕ್ಲಿಕ್ಕಿಸುವುದು ಮತ್ತು ವೀಡಿಯೊಗಳನ್ನು ಚಿತ್ರೀಕರಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ದೇವಸ್ಥಾನ ಮಂಡಳಿ ಗಮನಿಸಿತ್ತು.
ಈ ಪ್ರಕ್ರಿಯೆಗೆ ಕಡಿವಾಣ ಹಾಕಲು ನಿರ್ಧರಿಸಿರುವ ಶ್ರೀ ಬದರಿನಾಥ ಕೇದಾರನಾಥ ದೇವಾಲಯ ಸಮಿತಿಯು ಸೋಮವಾರ ಪವಿತ್ರ ದೇಗುಲದೊಳಗೆ ಫೋಟೋಗಳನ್ನು ತೆಗೆದಯುವುದು ಮತ್ತು ವಿಡಿಯೋ ಮಾಡುವುದನ್ನು ನಿಷೇಧಿಸುವುದಾಗಿ ಘೋಷಿಸಿದೆ. ಈ ನಿಯಮಗಳನ್ನು ಬಲಪಡಿಸಲು, ಸಮಿತಿಯು ದೇವಾಲಯದ ಆವರಣದಲ್ಲಿ ವಿವಿಧ ಸ್ಥಳಗಳಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕಿದೆ.

ಈ ಎಚ್ಚರಿಕೆ ಫಲಕಗಳಲ್ಲಿ "ಮೊಬೈಲ್ ಫೋನ್‌ಗಳೊಂದಿಗೆ ದೇವಾಲಯದ ಆವರಣವನ್ನು ಪ್ರವೇಶಿಸಬೇಡಿ, ಯಾವುದೇ ರೀತಿಯ ಛಾಯಾಗ್ರಹಣ ಮತ್ತು ವೀಡಿಯೋಗ್ರಫಿಯನ್ನು ದೇವಾಲಯದ ಒಳಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದಕ್ಕೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇದೆ" ಎಂದು ತಿಳಿಸಲಾಗಿದೆ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರೆದಿರುವ ಬೋರ್ಡ್‌ಗಳಲ್ಲಿ ಆದೇಶವನ್ನು ಪಾಲಿಸದವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ.
ದೇವಸ್ಥಾನದ ಮುಂದೆ ಮಹಿಳಾ ಬ್ಲಾಗರ್ ಒಬ್ಬರು ತನ್ನ ಗೆಳೆಯನಿಗೆ ಪ್ರಪೋಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಸಮಿತಿಯು ಕೇದಾರನಾಥ ಧಾಮ್ ಪೊಲೀಸರಿಗೆ ಪತ್ರ ಬರೆದು ದೇವಸ್ಥಾನದ ಸುತ್ತಮುತ್ತ ವಿಡಿಯೋ ಮಾಡುವುದನ್ನು ನಿಷೇಧಿಸುವಂತೆ ಕೋರಿದೆ.

ದೇವಾಲಯದ ಸುತ್ತಲಿನ ಪ್ರದೇಶವನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲು ಮತ್ತು ಯೂಟ್ಯೂಬ್ ಕಿರುಚಿತ್ರಗಳು, ವಿಡಿಯೋಗಳು, ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇದಾರನಾಥ ಧಾಮ್ ಪೊಲೀಸರಿಗೆ ಶ್ರೀ ಬದರಿನಾಥ ಕೇದಾರನಾಥ ದೇವಾಲಯ ಸಮಿತಿ (BKTC) ಪತ್ರ ಬರೆದು ಕೇಳಿದೆ.
ಛಾಯಾಗ್ರಹಣ ನಿಷೇಧದ ಜೊತೆಗೆ, ದೇವಸ್ಥಾನವು ಭಕ್ತರು "ಯೋಗ್ಯವಾದ ಬಟ್ಟೆಗಳನ್ನು" ಧರಿಸುವಂತೆ ಸೂಚಿಸಿದೆ. ಇದರ ಜೊತೆಗೆ ದೇವಾಲಯದ ಆವರಣದಲ್ಲಿ ಡೇರೆಗಳು ಅಥವಾ ಶಿಬಿರಗಳನ್ನು ಹಾಕುವುದನ್ನು ತಡೆಯುತ್ತದೆ. "ಕೇದಾರನಾಥಕ್ಕೆ ಹೋಗುವ ಯಾತ್ರಾರ್ಥಿಗಳು ಸಾಧಾರಣ ಉಡುಗೆ ತೊಡುವಂತೆ ತಿಳಿಸಲಾಗಿದೆ. ಈ ಹಿಂದೆ ಕೆಲವು ಯಾತ್ರಾರ್ಥಿಗಳು ದೇವಸ್ಥಾನದೊಳಗೆ ಅಸಭ್ಯವಾಗಿ ಚಿತ್ರೀಕರಿಸುವ ಮತ್ತು ಫೋಟೋಗಳನ್ನು ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿದ್ದರು" ಎಂದು ಶ್ರೀ ಬದರಿನಾಥ್ ಕೇದಾರನಾಥ ದೇವಾಲಯ ಸಮಿತಿಯ ಅಧ್ಯಕ್ಷ ಅಜಯ್ ಅಜೇಂದ್ರ ಎಎನ್‌ಐಗೆ ತಿಳಿಸಿದ್ದಾರೆ.

ಆವರಣದಲ್ಲಿ ಇಂತಹ ವಿಡಿಯೊ ಅಥವಾ ರೀಲ್ ಗಳನ್ನು ಮಾಡುವುದರಿಂದ ಇಲ್ಲಿನ ಧಾರ್ಮಿಕ ಪಾವಿತ್ರ್ಯತೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಮಿತಿ ಅಧ್ಯಕ್ಷರು ಹೇಳಿದ್ದಾರೆ. ಕೆಲವು ಯಾತ್ರಾರ್ಥಿಗಳ ಅಸಭ್ಯ ವರ್ತನೆಯಿಂದಾಗಿ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಭಕ್ತರಿಂದ ದೂರುಗಳು ಬಂದ ನಂತರ ದೇವಾಲಯ ಸಮಿತಿಯು ಈ ನಿಷೇಧವನ್ನು ವಿಧಿಸಿದೆ.
ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಪರ್ವತಗಳ ಮಧ್ಯೆ ಇರುವ ಪುರಾತನ ಕೇದಾರನಾಥ ದೇವಾಲಯವು ವಾರ್ಷಿಕವಾಗಿ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಭಗವಾನ್ ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮತ್ತು ಎಲ್ಲಕ್ಕಿಂತ ಎತ್ತರದ ಈ ಪವಿತ್ರ ದೇವಾಲಯವು ಸಮುದ್ರ ಮಟ್ಟದಿಂದ 3584 ಮೀಟರ್ ಎತ್ತರದಲ್ಲಿದೆ.
-
ಶ್ರೀರಾಮನವಮಿ ಪ್ರಯುಕ್ತ ಬೆಂಗಳೂರಿನ ತ್ಯಾಗರಾಜನಗರದಲ್ಲಿ ಅಪರೂಪದ ‘ಪುಷ್ಪಯಾಗ’ -
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ












Click it and Unblock the Notifications