ವಿಶಿಷ್ಟಚೇತನರ ಸಭೆಯಲ್ಲಿ 'ಕಾಲು ಮುರೀತಿನಿ' ಎಂದ ಬಿಜೆಪಿ ಸಚಿವ!

ಅಸಾನ್ಸೋಲ್(ಪಶ್ಚಿಮ ಬಂಗಾಳ), ಸೆಪ್ಟೆಂಬರ್ 19: 'ನಾನು ಮಾತನಾಡುತ್ತಿರುವ ಸಮಯದಲ್ಲಿ ಪದೇ ಪದೇ ಎದ್ದು ಓಡಾಡಿದರೆ ಕಾಲು ಮುರಿಯುತ್ತೇನೆ' ಎಂದು ಕೇಂದ್ರ ಬೃಹತ್ ಕೈಗಾರಿಕೆ ರಾಜ್ಯ ಸಚಿವ ಬಾಬುಲ್ ಸುಪ್ರಿಯೋ ಹೇಳಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದೈಹಿಕ ನ್ಯೂನತೆಯಿಂದ ಬಳಲುತ್ತಿರುವವರಿಗಾಗಿ ಪಶ್ಚಿಮ ಬಂಗಾಳದ ಅಸಾನ್ಸೋಲ್ ನಲ್ಲಿ ನಡೆಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ವ್ಹೀಲ್ ಚೇರ್ ಗಳನ್ನು ನೀಡಲಾಗುತ್ತಿತ್ತು. ಈ ಕಾರ್ಯಕ್ರಮಕ್ಕೂ ಮುನ್ನ ಬಾಬುಲ್ ಸುಪ್ರಿಯೋ ಮಾತನಾಡುತ್ತಿದ್ದರು. ಆ ಸಮಯದಲ್ಲಿ ವ್ಯಕ್ತಿಯೊಬ್ಬರು ತಾವು ಕುಳಿತ ಜಾಗದಿಂದ ಊರುಗೋಲನ್ನು ಊರುತ್ತ ಎದ್ದು ಹೊರಟರು.

ಆದರೆ ತಕ್ಷಣವೇ ಕೋಪಗೊಂಡ ಸುಪ್ರಿಯೋ, 'ಯಾಕೆ ಎದ್ದು ಹೋಗುತ್ತಿದ್ದೀರಾ? ಏನಾಯ್ತು? ನಾನು ಮಾತನಾಡುವ ಸಂದರ್ಭದಲ್ಲಿ ಇನ್ನೊಮ್ಮೆ ಹೀಗೆ ಎದ್ದು ಹೋದರೆ ನಿಮ್ಮ ಕಾಲನ್ನು ಮುರಿಯುತ್ತೇನೆ. ನಿಮ್ಮ ಊರುಗೋಲನ್ನೂ ಮುರಿದು ಹಾಕುತ್ತೇನೆ. ಸುಮ್ಮನೆ ಕುಳಿತುಕೊಳ್ಳಿ. ತಿಳಿಯಿತಾ?' ಎಂದಿದ್ದಾರೆ. ಅಷ್ಟೇ ಅಲ್ಲ, ಮಾತು ಮುಗಿದ ನಂತರ, 'ಆ ವ್ಯಕ್ತಿಗೆ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿ' ಎಂದಿದ್ದಾರೆ.

ಅವರ ಈ ವರ್ತನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಆ ವ್ಯಕ್ತಿಗೆ ಏನು ಕೆಲಸವಿತ್ತೋ ಏನೋ, ಎದ್ದು ಹೋಗಿದ್ದಕ್ಕೆ ಇವರ್ಯಾಕೆ ಇಂಥ ದುರಹಂಕಾರದ ವರ್ತನೆ ತೋರಬೇಕು? ಸಾರ್ವಜನಿಕವಾಗಿಯೇ ಹೀಗೆ ವರ್ತಿಸುವವರು ಜನರ ಬಗ್ಗೆ ನಿಜಕ್ಕೂ ಕಾಳಜಿ ತೋರುತ್ತಾರಾ? ವಿಶಿಷ್ಟ ಚೇತನರ ಕಾರ್ಯಕ್ರಮಕ್ಕೆ ತೆರಳಿ, ಅವರನ್ನೇ ಹೀಗೆ ಕೀಳಾಗಿ ನೋಡುತ್ತಾರೆ ಅಂದ್ರೆ ಅವರು ತೋರುವ ಕಾಳಜಿಯನ್ನು ನಂಬುವುದು ಹೇಗೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

Babul Supriyo loses cool, threatens to break mans leg at event

ಸುಪ್ರಿಯೋ ಇದೇ ಮೊದಲೇನಲ್ಲ, ಇದಕ್ಕೂ ಮೊದಲೂ ಹಲವು ವಿವಾದಗಳ ಮೂಲಕ ಸುದ್ದಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+