ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ಆಯ್ತು ಬಾಹುಬಲಿ ಟ್ರೈಲರ್ ಮಾದರಿಯಲ್ಲಿ ಉತ್ತರಾಖಾಂಡ ಸಿಎಂ ಪ್ರಚಾರ

ಬಾಹುಬಲಿಯ ಪ್ರಮುಖ ಪಾತ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮುಖವನ್ನು ಮಾರ್ಫ್ ಮಾಡಲಾಗಿದೆ. ಈವರೆಗೆ ಈ ವೀಡಿಯೋವನ್ನು ಎರಡು ಲಕ್ಷಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು, ಐದು ಸಾವಿರ ಶೇರ್ ಗಳನ್ನು ಕಂ

|
Google Oneindia Kannada News

ನವದೆಹಲಿ, ಫೆಬ್ರವರಿ 3: ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಾಖಾಂಡದಲ್ಲಿ ಫೆ. 15ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಈ ಬಾರಿಯ ಚುನಾವಣೆಗೆ ಸ್ಪರ್ಧಿಸಿರುವ ಅಲ್ಲಿನ ಹಾಲಿ ಮುಖ್ಯಮಂತ್ರಿ ಹರೀಶ್ ರಾವತ್ ಅವರ ಪ್ರಚಾರಕ್ಕಾಗಿ ವಿಶೇಷವಾದ ವೀಡಿಯೊವೊಂದನ್ನು ತಯಾರಿಸಲಾಗಿದೆ.

ಈ ವೀಡಿಯೋಕ್ಕೆ ಸೇವಿಯರ್ ಎಂಬ ಆಂಗ್ಲ ಶೀರ್ಷಿಕೆಯನ್ನಿಡಲಾಗಿದೆ.

Baahubali style for Uttarakhand CM Harish Rawat for fourthcoming assembly elections in the state

ಇದಕ್ಕಾಗಿ ಬಾಹುಬಲಿ ಚಿತ್ರದ ಟ್ರೈಲರ್ ಮಾದರಿಯಲ್ಲೇ ಗ್ರಾಫಿಕ್ಸ್ ಮೂಲಕ ವೀಡಿಯೊವನ್ನು ತಯಾರಿಸಿರುವುದು ವಿಶೇಷವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ಇದು ವೈರಲ್ ಆಗಿದೆ. ಅಷ್ಟೇ ಅಲ್ಲ, ಬಾಹುಬಲಿಯ ಪ್ರಮುಖ ಪಾತ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮುಖವನ್ನು ಮಾರ್ಫ್ ಮಾಡಲಾಗಿದೆ. ಈವರೆಗೆ ಈ ವೀಡಿಯೋವನ್ನು ಎರಡು ಲಕ್ಷಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು, ಐದು ಸಾವಿರ ಶೇರ್ ಗಳನ್ನು ಕಂಡಿದೆ.

ವೀಡಿಯೊದಲ್ಲಿ 'ದಿಲ್ ಕಿ ಸುನೆ, ಹರೀಶ್ ರಾವತ್ ಕೊ ಚುನೇ' (ಹೃದಯದ ಮಾತು ಕೇಳಿ, ಹರೀಶ್ ರಾವತ್ ಅವರನ್ನೇ ಚುನಾಯಿಸಿ) ಎಂಬ ಸಂದೇಶವೂ ಇದೆ.

Baahubali style for Uttarakhand CM Harish Rawat for fourthcoming assembly elections in the state

ಅಂಥಾದ್ದೇನಿದೆ ಈ ವೀಡಿಯೊದಲ್ಲಿ ಅಂತೀರಾ? ಈ ವೀಡಿಯೊದಲ್ಲಿ 69 ವರ್ಷದ ಹರೀಶ್ ರಾವತ್ ಅವರನ್ನು ಸಿಕ್ಸ್ ಪ್ಯಾಕ್ ಹೀರೋ ಆಗಿಸಲಾಗಿದೆ. ಇಡೀ ವೀಡಿಯೊ ಬಾಹುಬಲಿ ಚಿತ್ರದ ಟ್ರೈಲರ್ ಮಾದರಿಯಲ್ಲಿ ರಚಿಸಲಾಗಿದ್ದು, ಆ ಚಿತ್ರದ ಟ್ರೈಲರ್ ನಲ್ಲಿ ನಟ ಪ್ರಭಾಸ್ ಅವರು ಶಿವಲಿಂಗವನ್ನು ಎತ್ತಿಕೊಂಡು ಹೋಗುವಂತೆ ಇಲ್ಲಿ ಹರೀಶ್ ರಾವತ್ ಅವರು ಉತ್ತರಾಖಾಂಡ ಎಂಬ ಹೆಸರು ಬರೆದಿರುವ ಹೆಬ್ಬಂಡೆಯನ್ನು ಹೊತ್ತು ಸಾಗುತ್ತಾರೆ.

Baahubali style for Uttarakhand CM Harish Rawat for fourthcoming assembly elections in the state

ಅಷ್ಟೇ ಅಲ್ಲ ವೀಡಿಯೊದಲ್ಲಿ ಕಳೆದ ವರ್ಷ ಡಿಸೆಂಬರ್ ನಲ್ಲಿ ನಿಧನರಾದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನೂ ಹೋಲುವ ಪಾತ್ರವೊಂದನ್ನು ಅಳವಡಿಸಲಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಲ್ಲಿನ ಕಾಂಗ್ರೆಸ್ ಘಟಕ, ವೀಡಿಯೊಕ್ಕೂ ತಮಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಿದೆ.

English summary
Innovative animation powers a new video that casts Uttarakhand Chief Minister Harish Rawat as "Baahubali". Prime Minister Narendra Modi and BJP president Amit Shah also feature in the video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X