ಅಯೋಧ್ಯೆ ರಾಮಮಂದಿರ ಕಳ್ಳತನ - ಕರ್ನಾಟಕಕ್ಕೂ ಪಾಲು, ಸ್ಫೋಟಕ ವಿಷಯ ರಿವೀಲ್
Ayodhya Ram Temple: ಅಯೋಧ್ಯೆ ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ಕಳ್ಳತನ ಪ್ರಕರಣವು ಕರ್ನಾಟಕದ ಕಡೆಯೂ ತಿರುಗಿದೆ. ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ ವಿಚಾರದಲ್ಲಿ ಭಾರೀ ಅವ್ಯವಹಾರ ಆಗಿದೆ ಎನ್ನುವ ವಿಚಾರವು ತಡವಾಗಿ ಬೆಳಕಿಗೆ ಬಂದಿದೆ. ಅಯೋಧ್ಯೆ ರಾಮಮಂದಿರದಲ್ಲಿ ಕಳ್ಳತನ ನಡೆದಿದೆ ಎನ್ನುವ ವಿಚಾರವು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಕರ್ನಾಟಕಕ್ಕೂ ಪಾಲಿದೆ ಎನ್ನುವ ಸ್ಫೋಟಕ ವಿಷಯ ರಿವೀಲ್ ಆಗಿದೆ. ರಾಮಮಂದಿರ ಕಾಣಿಕೆಯಲ್ಲಿ ಅಕ್ರಮ
ನಡೆದಿದೆ ಎಂದು ಮೊದಲು ಆರೋಪಿಸಿದ್ದ ಸಮಾಜವಾದಿ ಪಕ್ಷದ ಅಖಿಲೇಶ್ ಮುಖ್ಯಸ್ಥ ಯಾದವ್ ಅವರು ಇದೀಗ ಇನ್ನಷ್ಟು ಗಂಭೀರವಾದ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಬಿಜೆಪಿಯ ದೇಣಿಗೆ ವಿಚಾರವನ್ನು ಅಖಿಲೇಶ್ ಯಾದವ್ ಅವರು ತೀವ್ರವಾಗಿ ಟೀಕೆ ಮಾಡಿದ್ದಾರೆ. ಬಿಜೆಪಿಯು ದೇಶಕ್ಕಿಂತಲೂ ದೇಣಿಗೆ ಸಂಗ್ರಹ ಮಾಡುವುದರಲ್ಲಿಯೇ ಹೆಚ್ಚು ನೀಡುತ್ತಿದೆ ಎಂದು ಅವರು ದೂರಿದ್ದಾರೆ. ಬಿಜೆಪಿಯು ಸಾರ್ವಜನಿಕ ನಂಬಿಕೆಗೆ ದ್ರೋಹವೆಸಗಿದೆ. ರಾಮಮಂದಿರ ದೇಣಿಗೆ ಕಳ್ಳತನದ ನಂಟು ಕರ್ನಾಟ ಕದವರೆಗೂ ವಿಸ್ತರಿಸಿದೆ ಎಂದು ಅಯೋಧ್ಯೆಯ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಕರ್ನಾಟಕದ ಭೂಗತ (ಅಂಡರ್ ಗೌಂಡ್) ಮತ್ತು ನೋಂದಾಯಿಸಲ್ಪಡದ (ಅನ್‌ರಿಜಿಸ್ಟರ್ಡ್) ಜನರು ಚುನಾವಣೆಗೆ ಸಂಬಂಧಿಸಿದ ಪಿತೂರಿಗಳಲ್ಲಿಯೂ ಭಾಗಿಯಾಗಿದ್ದಾರೆ ಎಂದಿದ್ದಾರೆ. ಮುಂದಿನ ವರ್ಷ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿರುವಾಗ ನಡೆದಿರುವ ಈ ಬೆಳವಣಿಗೆಯು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಯೋಧ್ಯೆಯ ರಾಮಮಂದಿರ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಭಾವಿಗಳ ಹೆಸರು ಕೇಳಿ ಬರುವ ಸಾಧ್ಯತೆ ಇದೆ. ಒಂದೊಮ್ಮೆ ಹೆಚ್ಚು ಜನರ ಹೆಸರು ಕೇಳಿ ಬಂದರೆ, ಬಿಜೆಪಿಗೆ ಇನ್ನಷ್ಟು ಹಿನ್ನಡೆ ಆಗುವ ಸಾಧ್ಯತೆಯೂ ಇದೆ.
ಇನ್ನು ಅಖಿಲೇಶ್ ಯಾದವ್ ಅವರು, ಕರ್ನಾಟಕದ ಆ ನೋಂದಾಯಿತವಲ್ಲದ ವ್ಯಕ್ತಿಗಳು ಯಾರು ಎನ್ನುವುದನ್ನು ಇನ್ನೂ ಹೇಳಿಲ್ಲ. ರಾಮಮಂದಿರ ದೇಣಿಗೆ ಹಣ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಪ್ರಭು ಚೌಹಾಣ್ ಅವರ ವಿರುದ್ಧ ಎಸ್‌ಐಟಿಗೆ ದೂರು ಸಹ ದಾಖಲಾಗಿದೆ.
8 ಆರೋಪಿಗಳ ಬಂಧನ
ಇನ್ನು ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗ ವಿಷಯಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸ್ಫೋಟಕ ವಿಷಯಗಳು ರಿವೀಲ್ ಆಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಜನರನ್ನು ಬಂಧಿಸಲಾಗಿದೆ. ಆದರೆ, ಅಯೋಧ್ಯೆ ದೇಣಿಗೆ ಹಣದ ಕಳ್ಳತನ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ವಿಷಯ ಮೊದಲೇ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗಮನಕ್ಕೆ ಬಂದಿತ್ತು ಎಂದು ಹೇಳಲಾಗಿದೆ.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಸೂಚನೆಯ ಮೇರೆಗೆ ಟ್ರಸ್ಟ್‌ನ ಪ್ರತಿನಿಧಿಗಳು ಜೂನ್ 5ರಂದು ಪೊಲೀಸರೊಂದಿಗೆ ಆರೋಪಿಗಳಲ್ಲಿ ಒಬ್ಬರಾದ ಅವಿನಾಶ್ ಶುಕ್ಲಾ ಅವರ ನಿವಾಸಕ್ಕೆ ಹೋಗಿದ್ದರು. ಶೋಧದ ಸಮಯದಲ್ಲಿ ನಗದು ಪತ್ತೆಯಾಗಿತ್ತು. ಆಗಲೇ ಪೊಲೀಸರ ಗಮನಕ್ಕೂ ತರಲಾಗಿತ್ತು ಎಂದು ಹೇಳಲಾಗಿದೆ.













Click it and Unblock the Notifications