Get Updates
Get notified of breaking news, exclusive insights, and must-see stories!

ಅಯೋಧ್ಯೆ ಮಸೀದಿ ವಿವಾದ: ಇತ್ಯರ್ಥವಾದರೂ ಮುಗಿಯದ ಕಥೆ- ಏನಿದು ವರದಿ, ವಿವರ? ತಿಳಿಯಿರಿ

ರಾಮ ಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದ ಹುಟ್ಟಿಕೊಂಡು ಹಲವು ದಶಕಗಳೇ ಕಳೆದಿವೆ. ಈ ಸಂಘರ್ಷವು ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥವಾಗಿ ಮೂರು ವರ್ಷಗಳಾಗಿದೆ. ಆದರೆ,ಇದಕ್ಕೆ ಇಟ್ಟಿಗೆ ಹಾಕಿ ನಿರ್ಮಾಣ ಕಾರ್ಯ ಆರಂಭಿಸಲು ಸರ್ಕಾರದ ಅನುಮತಿಗಾಗಿ ಮಸೀದಿ ಮಂಡಳಿ ಕಾಯುತ್ತಿದೆ

ಅಯೋದ್ಯೆ, ಫೆಬ್ರವರಿ 27: ರಾಮ ಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದ ಹುಟ್ಟಿಕೊಂಡು ಹಲವು ದಶಕಗಳೇ ಕಳೆದಿವೆ. ಈ ಸಂಘರ್ಷವು ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥವಾಗಿ ಮೂರು ವರ್ಷಗಳಾಗಿದೆ. ಆದರೆ, ಇದಕ್ಕೆ ಇಟ್ಟಿಗೆ ಹಾಕಿ ನಿರ್ಮಾಣ ಕಾರ್ಯ ಆರಂಭಿಸಲು ಸರ್ಕಾರದ ಅನುಮತಿಗಾಗಿ ಮಸೀದಿ ಮಂಡಳಿ ಕಾಯುತ್ತಿದೆ ಎಂದು 'ದಿ ಹಿಂದೂ' ವರದಿ ಮಾಡಿದೆ.

ಸರಯೂ ನದಿಗೆ ಅಡ್ಡಲಾಗಿ ಅದರ ಅದರ ಮುಖ್ಯ ದಂಡೆಯಲ್ಲಿ, ಅಯೋಧ್ಯೆಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಗರ್ಭಗುಡಿಯನ್ನು ಪ್ರವೇಶಿಸಲು ಹಿಂದೂ ಭಕ್ತರು ಎದುರು ನೋಡುತ್ತಿದ್ದಾರೆ.

Ayodhya Mosque Dispute: The story of the settlement- what is the report, the detail?

2019 ರ ನವೆಂಬರ್‌ನಲ್ಲಿ, ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಅಯೋಧ್ಯೆಯಲ್ಲಿ 16 ನೇ ಶತಮಾನದ ಬಾಬರಿ ಮಸೀದಿ ಇದ್ದ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸಲು ಅನುಮತಿ ನೀಡಿತು. 1993 ಬಾಬರಿ ಮಸೀದಿಯನ್ನು ಹಿಂದೂ ಮೂಲಭೂತವಾದಿಗಳು ಧ್ವಂಸ ಮಾಡಿದರು. ಸತತ ಎರಡು ದಶಕಗಳ ಕಾಲ ವಿವಾದವನ್ನು ಜೀವಂತವಾಗಿಯೇ ಇರಿಸಲಾಯಿತು.

2019ರಲ್ಲಿ ಒಂದು ಸಾವಿರ ಪುಟಗಳ ಆದೇಶವನ್ನು ನೀಡಿದ ಸುಪ್ರೀಂ ಕೋರ್ಟ್‌, ಅದೇ ಪ್ರದೇಶದ 5 ಎಕರೆಯಲ್ಲಿ ಮಸೀದಿ ನಿರ್ಮಿಸಲು ಸುಪ್ರೀಂ ಕೊರ್ಟ್‌ ಅನುಮತಿ ನೀಡಿತು. ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಗೆ ಅಯೋಧ್ಯೆಯಲ್ಲಿ ಸೂಕ್ತವಾದ 5 ಎಕರೆ ಜಾಗವನ್ನು ನೀಡಬೇಕು. ಅಲ್ಲಿ ಮಸೀದಿಯನ್ನು ನಿರ್ಮಿಸಲು ಅವಕಾಶ ನೀಡಬೇಕೆಂದು ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಹೇಳಿದೆ.

Ayodhya Mosque Dispute: The story of the settlement- what is the report, the detail?

ಫೆಬ್ರವರಿ 2020 ರಲ್ಲಿ, ಯುಪಿ ಸರ್ಕಾರ ದೇವಾಲಯದ ಸ್ಥಳದಿಂದ ಸುಮಾರು 25 ಕಿಮೀ ದೂರದಲ್ಲಿರುವ ಧನ್ನಿಪುರದಲ್ಲಿ ಮಸೀದಿ ನಿರ್ಮಾಣಕ್ಕೆ ಜಾಗವನ್ನು ನೀಡಿತು. ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಗೆ ಜಾಗವನ್ನು ಹಸ್ತಾಂತರಿಸಿತು. ವಕ್ಫ್ ಬೋರ್ಡ್ ನಂತರ ಮಸೀದಿ-ಎ-ಅಯೋಧ್ಯೆ ಎಂಬ ಹೆಸರಿನ ಮಸೀದಿಯ ನಿರ್ಮಾಣವನ್ನು ನೋಡಿಕೊಳ್ಳಲು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (IICF) ಎಂಬ ಸಮಿತಿಯನ್ನು ರಚಿಸಲಾಯಿತು.

'ಭೂಮಿಯ ಹಂಚಿಕೆಯ ನಂತರವೂ ಯಾವುದೇ ಕಾರ್ಯಗಳು ನಡೆದಿಲ್ಲ' ಎಂದು ಐಐಸಿಎಫ್ ಸದಸ್ಯರೊಬ್ಬರು ಹೇಳಿದ್ದಾರೆ. 'ನಮಗೆ ಯಾವುದೇ ಪ್ರಮುಖ ಸ್ಥಳದಲ್ಲಿ ಭೂಮಿ ಸಿಕ್ಕಿಲ್ಲ. ಇದು ನಗರದ ಹೊರವಲಯದಲ್ಲಿದೆ' ಎಂದು ಸದಸ್ಯರು ತಿಳಿಸಿದ್ದಾರೆ. 4,500 ಚದರ ಮೀಟರ್‌ಗಳಷ್ಟು ವಿಸ್ತಾರವಾಗಿರುವ ಮಸೀದಿಯ ಜೊತೆಗೆ ಆಸ್ಪತ್ರೆ, ಅಡುಗೆ ಕೋಣೆ, ಗ್ರಂಥಾಲಯ ಮತ್ತು ಸ್ವಾತಂತ್ರ್ಯ ಹೋರಾಟಗಾರ ಮೌಲ್ವಿ ಅಹ್ಮದುಲ್ಲಾ ಶಾ ಅವರಿಗೆ ಮೀಸಲಾದ ಸಂಶೋಧನಾ ಕೇಂದ್ರವನ್ನು ಒಳಗೊಂಡಿರುವ ಯೋಜನೆಗಳಿಗೆ ಅನುಮೋದನೆ ಸಿಕ್ಕಿಲ್ಲ ಎಂದು ಅವರು ತಿಳಿಸಿದ್ದಾರೆ.

Ayodhya Mosque Dispute: The story of the settlement- what is the report, the detail?

ಈ ವಿನ್ಯಾಸ ಯೋಜನೆಗಳನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರಕ್ಕೆ (ADA) ಅಗತ್ಯ ಶುಲ್ಕಗಳೊಂದಿಗೆ ಟ್ರಸ್ಟ್‌ ಸಲ್ಲಿಸಿದೆ. ಸಲ್ಲಿಕೆಗಳನ್ನು ಆನ್‌ಲೈನ್‌ನಲ್ಲಿ ಮಾಡಬೇಕು ಎಂದು ಸದಸ್ಯರು ತಿಂಗಳುಗಟ್ಟಲೆ ಕಾದರು. 'ನಾವು ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಿದ್ದೇವೆ. ಆದರೆ ವಿನ್ಯಾಸದ ಅಂತಿಮ ಅನುಮೋದನೆಗಾಗಿ ನಾವು ವಿವಿಧ ಇಲಾಖೆಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್‌ಒಸಿ) ಪಡೆಯಬೇಕಾಗಿದೆ. ಈ ಸಂಪೂರ್ಣ ಪ್ರಕ್ರಿಯೆಯು ಒಂದು ವರ್ಷದ ಸಮಯವನ್ನು ತೆಗೆದುಕೊಂಡಿತು' ಎಂದು ಸದಸ್ಯರೊಬ್ಬರು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿರುವ IICF ನ ಟ್ರಸ್ಟಿ ಅರ್ಷದ್ ಅಫ್ಜಾಲ್ ಖಾನ್ ಅವರು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಲು ನಿರ್ಧರಿಸಿದರು. ಎಡಿಎ ಕಚೇರಿ, ಡಿಎಂ ಕಚೇರಿ ಮತ್ತು ಇತರ ಇಲಾಖೆಗಳಿಗೆ ದಾಖಲೆಗಳನ್ನು ನೀಡಿದ್ದಾರೆ. ರಸ್ತೆಗಳನ್ನು ವಿಸ್ತರಿಸಲು ಖಾನ್ ಎಡಿಎಗೆ ಮನವಿ ಮಾಡಿದ್ದಾರೆ. ಆದರೆ ಇದನ್ನು ಪರಿಗಣಿಸುತ್ತಿದ್ದಂತೆ ಮತ್ತೊಂದು ಅಡಚಣೆಯುಂಟಾಯಿತು ಎಂದು ತಿಳಿದುಬಂದಿದೆ.

'ನಮಗೆ ಒದಗಿಸಿದ ನಿವೇಶನದಲ್ಲಿ ಯಾವುದೇ ನಿರ್ಮಾಣ ಸಾಧ್ಯವಿಲ್ಲ ಎಂದು ಐದು ತಿಂಗಳ ಹಿಂದೆ ನನಗೆ ತಿಳಿಸಲಾಗಿತ್ತು. ಏಕೆಂದರೆ ಅದು ಕೃಷಿ ಭೂಮಿಯಾಗಿದೆ. ಆದ್ದರಿಂದ, ಎಡಿಎ ಭೂ ಬಳಕೆಯನ್ನು ಬದಲಾಯಿಸಬೇಕಾಗಿತ್ತು. ಇದಕ್ಕಾಗಿ, ನಾವು ಎಡಿಎ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಆದರೆ ಪರಿಸ್ಥಿತಿ ಇನ್ನೂ ಹಾಗೆಯೇ ಇದೆ' ಎಂದು ಐಐಸಿಎಫ್ ಕಾರ್ಯದರ್ಶಿ ಅಥರ್ ಹುಸೇನ್ ಸಿದ್ದಿಕಿ ದಿ ಹಿಂದೂಗೆ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+