ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಆಟೋ ಪ್ರಯಾಣ ದರ ಏರಿಕೆ, ಕಿಮೀಗೆ ಎಷ್ಟು ಗೊತ್ತಾ?

|
Google Oneindia Kannada News

ನವದೆಹಲಿ, ಜನವರಿ 11: ಹೆಚ್ಚುತ್ತಿರುವ ಹಣದುಬ್ಬರದ ಹಿನ್ನೆಲೆ ಆಟೋ ಮತ್ತು ಟ್ಯಾಕ್ಸಿ ಮಾಲೀಕರಿಗೆ ನೆರವಾಗಲು ದೆಹಲಿ ಸರ್ಕಾರವು ಜನವರಿ 11 ರಂದು ಆಟೋ- ಟ್ಯಾಕ್ಸಿಗಳ ಹೊಸ ಪ್ರಯಾಣ ದರಗಳನ್ನು ಪ್ರಕಟಿಸಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಸರ್ಕಾರದ ಮೂಲಗಳ ಪ್ರಕಾರ, ಆಟೋ ಬಾಡಿಗೆ ಮೀಟರ್ ಈಗಿರುವ ₹ 25ರ ಬದಲು ₹ 30ಕ್ಕೆ ಏರಿಕೆಯಾಗುತ್ತದೆ ಮತ್ತು ಅದರ ನಂತರ ಪ್ರತಿ ಕಿಲೋ ಮೀಟರ್‌ಗೆ ಪ್ರಯಾಣ ದರವು ₹ 9.5 ರ ಬದಲು ₹ 11 ರೂಪಾಯಿಗೆ ಏರಿಕೆ ಆಗಿರುತ್ತದೆ ಎಂದು ತಿಳಿಸಲಾಗಿದೆ.

ಓಲಾ, ಊಬರ್ ಆಟೋ ಶೇ. 5ರ ದರ ನಿಗದಿ ಆದೇಶಕ್ಕೆ ತಡೆಓಲಾ, ಊಬರ್ ಆಟೋ ಶೇ. 5ರ ದರ ನಿಗದಿ ಆದೇಶಕ್ಕೆ ತಡೆ

ಇದಲ್ಲದೆ, ಪ್ರಯಾಣಿಕರು ಇನ್ನು ಮುಂದೆ ಕನಿಷ್ಠ ₹ 40 ದರದ ನಂತರ ಎಸಿ ರಹಿತ ಟ್ಯಾಕ್ಸಿಗಳಿಗೆ ಪ್ರತಿ ಕಿಲೋಮೀಟರ್‌ಗೆ ₹ 17 ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಸಾರಿಗೆ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ರಾತ್ರಿಯ ಶುಲ್ಕಗಳು ರಾತ್ರಿ 11ರಿಂದ ಬೆಳಿಗ್ಗೆ 5ರವರೆಗಿನ ಪ್ರಯಾಣಕ್ಕೆ ಆಟೋ ರಿಕ್ಷಾಗೆ ಶುಲ್ಕದ ಶೇಕಡಾ 25 ರಷ್ಟು ಹೆಚ್ಚುವರಿಯಾಗಿರುತ್ತದೆ. ಟ್ರಾಫಿಕ್‌ನಲ್ಲಿ ಪ್ರತಿ ನಿಮಿಷಕ್ಕೆ ವೇಟಿಂಗ್ ಶುಲ್ಕ 75 ಪೈಸೆ ಹೆಚ್ಚಳ ಹಾಗೂ 'ಶಾಪಿಂಗ್ ಲಗೇಜ್ ಬ್ಯಾಗ್ ಅಥವಾ ಸಣ್ಣ ಸೂಟ್‌ಕೇಸ್ ಸೇರಿದಂತೆ ಪ್ರತಿ ಬ್ಯಾಗಿಗೆ ₹10 ಹೆಚ್ಚಳ ಮಾಡಲಾಗಿದೆ.

Auto fare hike in Delhi, do you what is the fare?

ದೆಹಲಿಯ ಟ್ಯಾಕ್ಸಿಗಳಿಗೆ (ಎಸಿ ಮತ್ತು ನಾನ್-ಎಸಿ) ರಾತ್ರಿಯ ಶುಲ್ಕಗಳು ಆಟೋ ರಿಕ್ಷಾಗಳಂತೆಯೇ ಇರುತ್ತದೆ. ಕಾಯುವ ಶುಲ್ಕವನ್ನು ಪ್ರತಿ ನಿಮಿಷಕ್ಕೆ ₹1 ಮತ್ತು ಲಗೇಜ್ ಶುಲ್ಕಗಳು (ಅದೇ ವಿನಾಯಿತಿಗಳೊಂದಿಗೆ) ಪ್ರತಿ ಬ್ಯಾಗಿಗೆ ₹15 ಕ್ಕೆ ನಿಗದಿಪಡಿಸಲಾಗಿದೆ. ಮೊದಲು ಈ ಶುಲ್ಕ ಪ್ರತಿ ಕಿಲೋಮೀಟರ್‌ಗೆ ₹ 14 ಇತ್ತು. ಎಸಿ ಟ್ಯಾಕ್ಸಿ ದರವನ್ನು ಕಿ.ಮೀಗೆ ₹16 ರಿಂದ ₹20ಕ್ಕೆ ಹೆಚ್ಚಿಸಲಾಗಿದೆ.

Auto Drivers Strike : ಡಿಸೆಂಬರ್ 29ಕ್ಕೆ ಬೆಂಗಳೂರಲ್ಲಿ ಆಟೋ ಸಂಚಾರ ಬಂದ್Auto Drivers Strike : ಡಿಸೆಂಬರ್ 29ಕ್ಕೆ ಬೆಂಗಳೂರಲ್ಲಿ ಆಟೋ ಸಂಚಾರ ಬಂದ್

ಆಟೋ ಪ್ರಯಾಣ ದರಗಳ ಹೆಚ್ಚಳವು ಒಕ್ಕೂಟಗಳ ದೀರ್ಘಕಾಲದ ಬೇಡಿಕೆಯಾಗಿತ್ತು. 2020ರಲ್ಲಿ ಆಟೋ ಪ್ರಯಾಣ ದರಗಳಿಗೆ ಕೊನೆಯ ಪರಿಷ್ಕರಣೆ ಮಾಡಲಾಯಿತು. ಆದರೆ ಟ್ಯಾಕ್ಸಿಗಳ ದರಗಳು (ಕಪ್ಪು ಮತ್ತು ಹಳದಿ, ಆರ್ಥಿಕತೆ ಮತ್ತು ಪ್ರೀಮಿಯಂ) 2013 ರಲ್ಲಿ ನಡೆಯಿತು. 2022ರ ಅಕ್ಟೋಬರ್‌ನಲ್ಲಿ ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್, "ಸಿಎನ್‌ಜಿ ಆಟೋಗಳು ಮತ್ತು ಟ್ಯಾಕ್ಸಿಗಳು ಕಡಿಮೆ ಕಿಲೋಮೀಟರ್‌ಗಳಿಗೆ ಆಟೋ ಓಡಿಸಲು ಕಾರಣವಾಯಿತು. ಇದು ಪೂರೈಕೆಯ ಮೇಲೆ ಪರಿಣಾಮ ಬೀರಿತು. ಪರಿಷ್ಕೃತ ದರಗಳು ಕುಟುಂಬಗಳನ್ನು ಪೊರೆಯಲು ಮತ್ತು ಪ್ರಯಾಣಿಕರಿಗೆ ಅನುಕೂಲವನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಅಂದಾಜಿನ ಪ್ರಕಾರ ದೆಹಲಿಯಲ್ಲಿ ಸುಮಾರು 93,00 ಆಟೋಗಳು ಮತ್ತು 80,000 ಟ್ಯಾಕ್ಸಿಗಳಿವೆ. ಇದು ನಗರದ ಯೋಜನೆಯಡಿಯಲ್ಲಿ ಬರದ ಓಲಾ ಮತ್ತು ಉಬರ್‌ನಂತಹ ಕ್ಯಾಬ್ ಅಗ್ರಿಗೇಟರ್‌ಗಳನ್ನು ಹೊರತುಪಡಿಸಿರುತ್ತದೆ ಎನ್ನಲಾಗಿದೆ.

English summary
The Delhi government on January 11 announced new fares for auto-taxis to help auto and taxi owners amid rising inflation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X