Get Updates
Get notified of breaking news, exclusive insights, and must-see stories!

ಕಾಲಿನಲ್ಲಿ ಯಲ್ಲಮ್ಮ ದೇವಿಯ ಹಚ್ಚೆಹಾಕಿಸಿದ್ದು ತಪ್ಪಲ್ಲದೇ ಮತ್ತಿನ್ನಿನೇನು?

ಚೀನಾದ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಹಿಂದೊಮ್ಮೆ ಪ್ರಯಾಣಿಕನೊಬ್ಬ ತನ್ನ ಕಾಲಿನಲ್ಲಿ ಭಗವಾನ್ ಬುದ್ದನ ಟ್ಯಾಟು ಹಾಕಿಕೊಂಡಿದ್ದ ಎನ್ನುವ ಕಾರಣಕ್ಕಾಗಿ ಆತನನ್ನು ಚೀನಾದ ವಲಸೆ ಅಧಿಕಾರಿಗಳು ದೇಶ ಪ್ರವೇಶಿಸಲು ಬಿಡದೇ ವಾಪಸ್ ಕಳುಹಿಸಿದ್ದರು.

ಬೌದ್ದ ಮತ್ತು ಇಸ್ಲಾಂ ರಾಷ್ಟ್ರಗಳಲ್ಲಿ ಇತರ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವಂತಹ ಘಟನೆಗಳು ನಡೆಯುವುದು ಅಪರೂಪ, ಒಂದು ವೇಳೆ ನಡೆದರೂ ಅದನ್ನು ಸಮರ್ಥಿಸಿಕೊಳ್ಳುವ ಮನಸ್ಥಿತಿಯವರಾಗಲಿ ಅಥವಾ ಮಾಧ್ಯಮದವರಾಗಲಿ ಅಲ್ಲಿ ಇರುವುದು ಕಮ್ಮಿ.

ಪ್ರಾಯಶಃ ನಮ್ಮ ದೇಶದಲ್ಲಿ ಮಾತ್ರವೋ ಏನೋ, ಹಿಂದೂ ದೇವಾನು ದೇವತೆಗಳನ್ನು ಮತ್ತು ಸಂಸ್ಕೃತಿಗಳನ್ನು ಯಾವ ರೀತಿ ಬೇಕಾದರೂ ಅಣಕವಾಡಿದರೂ ನಡೆಯುತ್ತೆ ಎನ್ನುವ ವಾತಾವರಣವಿರುವುದು. (ಯಲ್ಲಮ್ಮ ಟ್ಯಾಟೂ ಪ್ರಕರಣದ ಎರಡು ಮುಖ)

ಅಂತಹ ಘಟನೆಗಳಿಗೆ ರಾಜಕೀಯದ ಲೇಪ ಮತ್ತು ಕೋಮು ಬಣ್ಣ ಬೆರೆಯುವುದರಿಂದ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಇದಕ್ಕೆ ಪೂರಕ ಎನ್ನುವಂತೆ ಎರಡು ದಿನದ ಹಿಂದೆ ನಡೆದ ಆಸ್ಟ್ರೇಲಿಯಾ ಪ್ರಜೆಯ ಯಲ್ಲಮ್ಮ ಟ್ಯಾಟು ಪ್ರಕರಣ.

ಜ್ಞಾನಪೀಠ ಪುರಸ್ಕೃತರು, ಸಾಹಿತಿಗಳು, ಬುದ್ದಿಜೀವಿಗಳಿಂದ ಹಿಡಿದು ಜನಸಾಮಾನ್ಯರ ವರೆಗೂ ಬಹುಸಂಖ್ಯಾತರ ನಂಬಿಕೆಯನ್ನು ಅಪಹ್ಯಾಸ ಮಾಡುವ ಘಟನೆಗಳು ನಡೆಯುತ್ತಲೇ ಇದೆ.

ಇಂತವರನ್ನು ಸಮರ್ಥಿಸಿಕೊಳ್ಳುವ ದೊಡ್ದ ಗುಂಪೇ ಇದೆ. ಗಲ್ಫ್ ಅಥವಾ ಇನ್ನಿತರ ಇಸ್ಲಾಂ ರಾಷ್ಟ್ರಗಳಲ್ಲಿ ಅಲ್ಲಾಹು ಫೋಟೋಗೆ ಏನಾದರೂ ಈ ರೀತಿ ಆದ್ರೆ ಬಿಡ್ತಿದ್ರಾ ಎನ್ನುವ ಪ್ರಶ್ನೆಗೆ ಇವರ ಬಳಿ ಉತ್ತರವಿರುವುದಿಲ್ಲ.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ದೇವ್ರು,, ದಿಂಡ್ರು, ರಾಷ್ಟ್ರಧ್ವಜವಿರುವ ಚಿತ್ರವನ್ನು ಎಲ್ಲಿ ಬೇಕಾದರೂ ಹಚ್ಚೆ ಹಾಕಿಸಬಹುದು, ಎಲ್ಲಿ ಬೇಕಾದರೂ ಉಡಬಹುದು, ಆದರೆ ಭಾರತದಲ್ಲಿ ಹಾಗಲ್ಲ.

ರಾಜ್ಯದ ಐತಿಹಾಸಿಕ ದೇವಾಲಯಗಳಲ್ಲೊಂದಾದ ಸವದತ್ತಿ ಯಲ್ಲಮ್ಮ ದೇವಿಯ ಫೋಟೋವನ್ನು ಆಸ್ಟ್ರೇಲಿಯಾದ ಪ್ರಜೆ ಕಾಲಿನ ಮೇಲೆ ಹಚ್ಚೆ ಹಾಕಿಸಿದ್ದೂ ತಪ್ಪು, ಬಲಪಂಥೀಯರು ಎನ್ನಲಾಗುವ ಕಾರ್ಯಕರ್ತರು ವರ್ತಿಸಿದ ರೀತಿಯೂ ತಪ್ಪು.

ಬೆಂಗಳೂರು ಪೊಲೀಸರು ಮಾತ್ರ ದೊಡ್ದ ಸುದ್ದಿಯಾಗಬಹುದಾದ ಈ ವೃತ್ತಾಂತವೊಂದನ್ನು ಜಾಣ್ಮೆಯಿಂದ ಬಗೆಹರಿಸಿದ್ದಂತೂ ಸತ್ಯ. ಹಿಂದೂ ಭಾವನೆಗಳನ್ನು ಕೆರಳಿಸುವಂತಹ ಈ ಹಿಂದೆ ನಡೆದ ಕೆಲವೊಂದು ಘಟನೆಗಳು, ಹೇಳಿಕೆಗಳ ಝಲಕ್ ಸ್ಲೈಡಿನಲ್ಲಿ..

ಮಂಡೋದರಿ ನಂಬಿಕೆ ದ್ರೋಹಿ

ಮಂಡೋದರಿ ನಂಬಿಕೆ ದ್ರೋಹಿ

ರಾವಣನ ಪತ್ನಿ ಮಂಡೋದರಿ ನಂಬಿಕೆ ದ್ರೋಹಿ ರಾವಣ ಮಹಾನ್ ಪರಾಕ್ರಮಿ, ಯುದ್ದದಲ್ಲಿ ಅವನು ಎಂದೂ ಸೋಲುತ್ತಿರಲಿಲ್ಲ. ಆದರೆ ಅವನ ಹೆಂಡತಿ ಮಂಡೋದರಿ ಮತ್ತು ತಮ್ಮ ವಿಭೀಷಣನ ನಂಬಿಕೆ ದ್ರೋಹದಿಂದ ರಾಮನ ವಿರುದ್ದ ಯುದ್ದ ಸೋಲುವಂತಾಯಿತು ಎಂದು ಶ್ರೀಲಂಕಾದ ವಿಜಿತಾ ಯಾಪ ಪಬ್ಲಿಕೇಷನ್ಸ್ ಹೊರತಂದ 'ರಾವಣ, ದಿ ಕಿಂಗ್ ಆಫ್ ಲಂಕಾ' ಎನ್ನುವ ಪುಸ್ತಕದಲ್ಲಿ ಈ ರೀತಿ ಉಲ್ಲೇಖವಾಗಿತ್ತು.

ಕರುಣಾನಿಧಿ

ಕರುಣಾನಿಧಿ

ಶ್ರೀರಾಮಚಂದ್ರ ಯಾವ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದ್ದಾನೆ ರಾಮ ಯಾರು ಅವನೇನು ಇಂಜಿನಿಯರಾ? ಯಾವ ಕಾಲೇಜಿನಲ್ಲಿ ಓದಿದ್ದಾನೆ? ರಾಮಾಯಣ ಎನ್ನುವುದು ಕಾಲ್ಪನಿಕ ಕಥೆಯೆಂದು- ಡಿಎಂಕೆ ಮುಖ್ಯಸ್ಥ ಮುತ್ತುವೇಲು ಕರುಣಾನಿಧಿ (ಸೇತುಸಮುದ್ರಂ ಯೋಜನೆ ಉಲ್ಲೇಖಿಸಿ) ಹೇಳಿಕೆ ನೀಡಿದ್ದರು.

ಶ್ರೀರಾಮ ಡ್ಯೂಡ್, ಕೌಸಲ್ಯೆ ಬಿಚ್

ಶ್ರೀರಾಮ ಡ್ಯೂಡ್, ಕೌಸಲ್ಯೆ ಬಿಚ್

ಶ್ರೀರಾಮ ಡ್ಯೂಡ್, ಕೌಸಲ್ಯೆ ಬಿಚ್ ಹಿಂದೂ ಧರ್ಮೀಯರ ಆರಾಧ್ಯ ದೇವರಾದ ರಾಮ-ಸೀತೆಯರ ಕುರಿತಂತೆ ಬೀದರ್ ಜಿಲ್ಲಾಧಿಕಾರಿಯಾಗಿದ್ದ ಡಾ. ಪಿ ಸಿ ಜಾಫರ್ ಫೇಸ್‌ಬುಕ್ ನಲ್ಲಿ ಅವಹೇಳನಕಾರಿ ಲೇಖನವೊಂದನ್ನು ಪೋಸ್ಟ್ ಮಾಡಿದ್ದರು. ನ.3, 2013ರಂದು ಡಿಸಿ ತಮ್ಮ ವೈಯಕ್ತಿಕ ಅಕೌಂಟ್‌ನಲ್ಲಿ ದೀಪಾವಳಿ ಹಬ್ಬದ ಕುರಿತಂತೆ ತಾಯಿ ಮಗನ ಮಧ್ಯೆ ನಡೆಯುವ ಸಂಭಾಷಣೆಯನ್ನು ಲಗತ್ತಿಸಿ ಶ್ರೀರಾಮನಿಗೆ 'ಡ್ಯೂಡ್‌', ಸೀತೆಗೆ 'ಬೇಬ್‌' ಹಾಗೂ ಕೌಸಲ್ಯೆಗೆ 'ಬಿಚ್‌' ಎಂದು ಸಂಬೋಧಿಸಿದ್ದರು.

ಅನಂತಮೂರ್ತಿ

ಅನಂತಮೂರ್ತಿ

ದೈವಗಳ ಕಲ್ಲಿನ ಮೇಲೆ ಮೂತ್ರ ವಿಸರ್ಜನೆ ಮಾಡಿದರೆ ಏನೂ ಆಗುವುದಿಲ್ಲ ಬೆತ್ತಲೆ ಪೂಜೆ ಯಾಕೆ ಮಾಡಬಾರದು? ಪಂಜುರ್ಲಿಯ (ಕರಾವಳಿ ಭಾಗದ ದೈವ) ಮೇಲೆ ಮೂತ್ರ ವಿಸರ್ಜನೆ ಮಾಡಿದರೂ ಏನೂ ಆಗುವುದಿಲ್ಲ ಎಂದು ಸಾಹಿತಿ ಯು ಆರ್ ಅನಂತಮೂರ್ತಿ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದರು.

ಪಾಶ್ಚಿಮಾತ್ಯ ರಾಷ್ಟ್ರ

ಪಾಶ್ಚಿಮಾತ್ಯ ರಾಷ್ಟ್ರ

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹಿಂದೂ ದೇವರುಗಳ ಚಿತ್ರಗಳು ಒಳ ಉಡುಪು, ಬಿಯರ್ ಬಾಟಲ್, ಪಾದರಕ್ಷೆ ಮುಂತಾದ ಕಡೆ ಕಾಣಿಸಿ, ವಿವಾದವಾಗಿ ನಂತರ ಕಂಪೆನಿಗಳು ಕ್ಷಮೆ ಕೇಳಿ ಹಿಂದಕ್ಕೆ ಪಡೆದ ಉದಾಹರಣೆಗಳೂ ನಮ್ಮ ಮುಂದಿವೆ.

ವೀರಪ್ಪ ಮೊಯ್ಲಿ

ವೀರಪ್ಪ ಮೊಯ್ಲಿ

'ಹಿಂದು ಎಂಬ ಶಬ್ದ ನಮ್ಮದಲ್ಲ. ವೇದ- ಪುರಾಣಗಳಲ್ಲೂ ಈ ಪದದ ಉಲ್ಲೇಖವಿಲ್ಲ. ದೇಶ ವಿಭಜನೆ ವೇಳೆ ಮಹಮ್ಮದೀಯರಿಂದ ಆ ಪದ ಬಂದಿದೆ. ನಂತರ ಅದು ನಮ್ಮದೇ ಪದ ಎನ್ನುವಂತೆ ಬಳಸಲಾಗುತ್ತಿದೆ. ಭಾರತೀಯತೆಯ ತಳಪಾಯ ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಭಗವಾನ್

ಭಗವಾನ್

ಹಿಂದೂಗಳಲ್ಲಿ ಶ್ರೀರಾಮಚಂದ್ರ ಎಂದರೆ ಮರ್ಯಾದಾ ಪುರುಷೋತ್ತಮ, ಪಿತೃವಾಕ್ಯ ಪರಿಪಾಲಕ, ಏಕಪತ್ನೀವ್ರತಸ್ಥ ಎನ್ನುವ ನಂಬಿಕೆಯಿದೆ. ಆದರೆ ಅದೆಲ್ಲಾ ಸುಳ್ಳು. ಅವನು ಪರಸ್ತ್ರೀಯರ ಸಂಬಂಧ ಇಟ್ಟುಕೊಂಡಿದ್ದ. ಶ್ರೀರಾಮ, ಸೀತೆ ಜೊತೆಗೂಡಿ ಮದ್ಯ ಸೇವಿಸುತ್ತಿದ್ದ. ಮದ್ಯ ಸೇವಿಸಿ ಪರಸ್ತ್ರೀಯರೊಂದಿಗೆ ಮೋಜು ಮಾಡುತ್ತಿದ್ದ ಎಂದು ವಾಲ್ಮೀಕಿಯೇ ಹೇಳಿದ್ದಾರೆ. ಹಾಗಿದ್ದಾಗ ಶ್ರೀರಾಮಚಂದ್ರ 'ಮರ್ಯಾದಾ ಪುರುಷೋತ್ತಮ' ಆಗಲು ಹೇಗೆ ಸಾಧ್ಯ ಎಂದು ಭಗವಾನ್ ಲೇವಡಿ ಮಾಡಿದ್ದರು.

ಮ್ಯಾಗಜೀನ್ ವೊಂದರಲ್ಲಿ ಎಂಎಸ್ ಧೋನಿ

ಮ್ಯಾಗಜೀನ್ ವೊಂದರಲ್ಲಿ ಎಂಎಸ್ ಧೋನಿ

ಮ್ಯಾಗಜೀನ್ ವೊಂದರಲ್ಲಿ ಎಂಎಸ್ ಧೋನಿ ಅವರ ಚಿತ್ರಕ್ಕೆ ಸಂಬಂಧಿಸಿದಂತೆ ಆಕ್ಷೇಪ ವ್ಯಕಪಡಿಸಿ ದೂರು ಸಲ್ಲಿಸಲಾಗಿತ್ತು. 2013ರ ಏಪ್ರಿಲ್ ಸಂಚಿಕೆಯ ಬಿಸಿನೆಸ್ ಟುಡೆ ಮ್ಯಾಗಜೀನ್ ನಲ್ಲಿ ಧೋನಿಯನ್ನು ಮಹಾವಿಷ್ಣುವಿನಂತೆ ಚಿತ್ರಿಸಿ 'God of Big Deals' ಎಂದು ಶೀರ್ಷಿಕೆ ನೀಡಲಾಗಿತ್ತು.

ಕೆ ಎಸ್ ಭಗವಾನ್

ಕೆ ಎಸ್ ಭಗವಾನ್

ಕ್ರೈಸ್ತ ಧರ್ಮದ ಪ್ರತಿಪಾದಕ ಯೇಸು, ಇಸ್ಲಾಂ ಧರ್ಮಗುರು ಪ್ರವಾದಿ ಮಹಮ್ಮದ್, ಬೌದ್ಧ ಧರ್ಮದ ಪ್ರತಿಪಾದಕ ಭಗವಾನ್ ಬುದ್ಧ ಮುಂತಾದವರ ಭಾವಚಿತ್ರಗಳಲ್ಲಿ ಮಾರಕ ಆಯುಧಗಳೇ ಇರುವುದಿಲ್ಲ. ಹಾಗಾಗಿ ಅಂತಹ ಚಿತ್ರಗಳು ಶಾಂತಿ ಸಂದೇಶ ಸಾರುತ್ತವೆ. ಸೂಕ್ಷ್ಮವಾಗಿ ಗಮನಿಸಿದಾಗ ಬಹುತೇಕ ಎಲ್ಲ ಹಿಂದೂ ದೇವರುಗಳ ಕೈಯಲ್ಲಿ ಒಂದೊಂದು ರೀತಿಯ ಆಯುಧ ಇದ್ದೇ ಇರುತ್ತದೆ. ಹಾಗಾಗಿ ಭಕ್ತರಲ್ಲೂ ದುಷ್ಟ ನಿಗ್ರಹ ಗುಣ ಮೇಳೈಸುವ ಅಪಾಯವಿರುತ್ತದೆ. ಆದ್ದರಿಂದ ಹಿಂದೂ ದೇವರುಗಳ ಆರಾಧನೆಯಿಂದ ದೂರವಿರಿ ಎಂದು ಕೆ ಎಸ್ ಭಗವಾನ್ ಹೇಳಿದ್ದರು.

ಯೋಗೀಶ್ ಮಾಸ್ಟರ್

ಯೋಗೀಶ್ ಮಾಸ್ಟರ್

ಇಂದು ಜನ ಆರಾಧಿಸುವ ಚಾಮುಂಡೇಶ್ವರಿ ದೇವಿ ಒಬ್ಬ ಬುಡಕಟ್ಟು ಮಹಿಳೆಯಾಗಿದ್ದಳು. ಚಾಮುಂಡೇಶ್ವರಿ ಹಾಗೂ ನಂಜುಂಡೇಶ್ವರ ಜತೆಗಿದ್ದ ಸಂಬಂಧದ ಬಗ್ಗೆ ಹಳೆ ಮೈಸೂರಿನವರಿಗೆ ಗೊತ್ತೇ ಇದೆ ನಾನೇನು ಹೊಸದಾಗಿ ಹೇಳಿಲ್ಲ. ಚಾಮುಂಡೇಶ್ವರಿ ಹೇಗೆ ಅಭಿಸಾರಿಕೆಯಾಗಿದ್ದಳು ಎಂಬುದನ್ನು ಜಾನಪದ ಗೀತೆಗಳ ಮೂಲಕ ಹಾಡಲಾಗಿದೆ ಎಂದು ಯೋಗೇಶ್ ಮಾಸ್ಟರ್ ಹೇಳಿದ್ದರು. ಹಿಂದೂಗಳು ಪ್ರಥಮ ಪೂಜೆ ಸಲ್ಲಿಸುವ ಗಣೇಶ ಒಬ್ಬ ರೌಡಿ, ಕ್ರೂರಿ - 'ಢುಂಢಿ ಅರಣ್ಯಕನೊಬ್ಬ ಗಣಪತಿಯಾದ ಕಥೆ' ಪುಸ್ತಕದಲ್ಲಿ ಲೇಖಕರು ಈ ರೀತಿ ಉಲ್ಲೇಖಿಸಿದ್ದರು.

ಪ್ರೊ. ಕಲ್ಬುರ್ಗಿ

ಪ್ರೊ. ಕಲ್ಬುರ್ಗಿ

ಪ್ರೊ. ಕಲ್ಬುರ್ಗಿ ವಿವಾದಕಾರಿ ಹೇಳಿಕೆ ದೇವತೆಗಳು ಮೂರ್ತ ಸ್ವರೂಪ, ಹಾಗಾಗಿ ದೇವತೆಗ ವಿಗ್ರಹ ಅಥವಾ ಮೂರ್ತಿಗಳ ಮೇಲೆ 'ಮೂತ್ರ' ಮಾಡಿದರೆ ತಪ್ಪೇನು? ವಿಗ್ರಹಗಳಿಗೆ ಭಕ್ತರನ್ನು ಕಾಪಾಡುವ ಶಕ್ತಿ ಇಲ್ಲ, ಪೂಜೆ ನಿಲ್ಲಿಸಿದರೆ ಏನೂ ತಪ್ಪಿಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾಯದ ವಿಶ್ರಾಂತ ಕುಲಪತಿ ಪ್ರೊಫೆಸರ್ ಕಲುಬುರ್ಗಿ ಇತ್ತೀಚೆಗೆ ಹೇಳಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+