ಪಿಎಂ ಮೋದಿಗೆ ಸೇರಿದ 270 ಗಿಫ್ಟ್ ಹರಾಜು, 5 ಲಕ್ಷ ರು ಗರಿಷ್ಠ ಬಿಡ್ಡಿಂಗ್!

Recommended Video

      ಪಿಎಂ ಮೋದಿಗೆ ಸೇರಿದ 270 ಗಿಫ್ಟ್ ಹರಾಜು | Oneindia Kannada

      ನವದೆಹಲಿ, ಜನವರಿ 29: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಳಿ ಇದ್ದ ಗಿಫ್ಟ್, ಸ್ಮರಣಿಕೆಗಳನ್ನು ಹರಾಜು ಹಾಕುತ್ತಿದ್ದಾರೆ. ದೆಹಲಿಯ ಮಾರ್ಡನ್ ಆರ್ಟ್​ನ್ಯಾಷನಲ್​ಗ್ಯಾಲರಿಯಲ್ಲಿ ಭಾನುವಾರ ಹಾಗೂ ಸೋಮವಾರ ಹರಾಜು ಹಾಕಲಾಗಿದೆ.

      ಸುಮಾರು 1800 ಉಡುಗೊರೆಗಳ ಪೈಕಿ 270 ವಸ್ತುಗಳು ಮಾರಾಟವಾಗಿದ್ದು, ಪೈಂಟಿಂಗ್ ವೊಂದು 5 ಲಕ್ಷ ರು ಗರಿಷ್ಠ ಬಿಡ್ಡಿಂಗ್ ಪಡೆದುಕೊಂಡಿದೆ.

      ಮೋದಿ ಅವರ ಬಳಿ ಇರುವ ಪೈಂಟಿಂಗ್ಸ್, ಫೋಟೋ, ಪೇಟಗಳು, ಶಾಲುಗಳು, ಶಿಲ್ಪಗಳು ಸೇರಿದಂತೆ 1,900 ವಸ್ತುಗಳನ್ನು ದೆಹಲಿಯಲ್ಲಿನ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್​ ಆರ್ಟ್​ನಲ್ಲಿ (ಎನ್​ಜಿಎಂಎ) ಹರಾಜು ಪ್ರಕ್ರಿಯೆ ನಡೆಸಲಾಯಿತು.

      ಮಂಗಳವಾರದಿಂದ ಆನ್​ಲೈನ್ ಹರಾಜು ನಡೆಯಲಿದೆ. ಜನವರಿ 31ರ ತನಕ ಹರಾಜು ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಆಸಕ್ತರು ವೆಬ್​ಸೈಟ್ ಮೂಲಕ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ, ವಸ್ತುಗಳನ್ನು ಖರೀದಿಸಬಹುದಾಗಿದೆ.

      ಮಂಗಳವಾರದಿಂದ ಇ ಹರಾಜು ನಡೆಯಲಿದೆ

      ಮಂಗಳವಾರದಿಂದ ಇ ಹರಾಜು ನಡೆಯಲಿದೆ

      ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಳಿ ಇದ್ದ ಗಿಫ್ಟ್, ಸ್ಮರಣಿಕೆಗಳನ್ನು ಹರಾಜು ಹಾಕುತ್ತಿದ್ದಾರೆ. ದೆಹಲಿಯ ಮಾರ್ಡನ್ ಆರ್ಟ್​ನ್ಯಾಷನಲ್​ಗ್ಯಾಲರಿಯಲ್ಲಿ ಹರಾಜಿಗೆ ಸಿದ್ಧವಾಗಿರುವ ವಸ್ತುಗಳನ್ನು ಇರಿಸಲಾಗಿದೆ. ಮಂಗಳವಾರದಿಂದ ಇ ಹರಾಜು ನಡೆಯಲಿದೆ ಜನವರಿ 31ರ ತನಕ ಹರಾಜು ಜಾರಿಯಲ್ಲಿರಲಿದೆ

      ಮರದ ಬೈಕ್​ 5 ಲಕ್ಷ ರು ಗೆ ಮಾರಾಟ

      ಮರದ ಬೈಕ್​ 5 ಲಕ್ಷ ರು ಗೆ ಮಾರಾಟ

      ಪ್ರಧಾನಿ ಮೋದಿ ಅವರಿಗೆ ಸಿಕ್ಕಿರುವ ಉಡುಗೊರೆಗಳ ಪೈಕಿ ಮರದ ಬೈಕ್​ಗೆ 40,000 ರು, ಮೂಲ ಬೆಲೆ ಇತ್ತು. ಇದು ಕೂಡಾ 5 ಲಕ್ಷ ರು ಗೆ ಮಾರಾಟವಾಗಿದೆ. ಉಳಿದಂತೆ 10 ಸಾವಿರ ರು ಮೂಲ ಬೆಲೆಯ ಸ್ವರ್ಣ ಮಂದಿರ ಮಾದರಿಯ ಸ್ಮರಣಿಕೆಯು 3.5 ಲಕ್ಷ ರುಗೆ ಬಿಕರಿಯಾಗಿದೆ.

      2 ದಿನಗಳಲ್ಲಿ 270 ವಸ್ತುಗಳು ಬಿಕರಿಯಾಗಿವೆ

      2 ದಿನಗಳಲ್ಲಿ 270 ವಸ್ತುಗಳು ಬಿಕರಿಯಾಗಿವೆ

      ಎರಡು ದಿನ ನಡೆದ ಹರಾಜಿನಲ್ಲಿ 270 ವಸ್ತುಗಳು ಬಿಕರಿಯಾಗಿವೆ.ರೈಲ್ವೆ ನಿಲ್ದಾಣದಲ್ಲಿ ಬ್ಯಾಗ್ ಹಿಡಿದು ನಿಂತಿರುವ ಮೋದಿ ಪೇಂಟಿಂಗ್ ಚಿತ್ರಕ್ಕೆ 50 ಸಾವಿರ ರು ಮೂಲ ಬೆಲೆ ನಿಗದಿಯಾಗಿತ್ತು. ಮೋದಿ ಅಭಿಮಾನಿಯೊಬ್ಬರು 5 ಲಕ್ಷ ರು ಬಿಡ್ ಮಾಡಿ, ಚಿತ್ರವನ್ನು ಗಳಿಸಿದ್ದಾರೆ.

      ನಮಾಮಿ ಗಂಗಾ ಯೋಜನೆಗೆ ಬಳಸಲಾಗುತ್ತದೆ.

      ನಮಾಮಿ ಗಂಗಾ ಯೋಜನೆಗೆ ಬಳಸಲಾಗುತ್ತದೆ.

      1,500 ರು ಮೂಲ ಬೆಲೆಯ ಅಷ್ಟಮಂಗಳ ಫೋಟೋ ಫ್ರೇಮ್​ 28 ಸಾವಿರ ರುಗೆ, 5 ಸಾವಿರ ರು ಬೆಲೆಯ ಲೋಹದ ಖಡ್ಗವೊಂದು 1 ಲಕ್ಷ ರುಗೆ ಹಾಗೂ 5 ಸಾವಿರ ರು ಬೆಲೆಯ ಬಸವೇಶ್ವರ ಪುತ್ಥಳಿ 70 ಸಾವಿರ ರುಗೆ ಮಾರಾಟವಾಗಿದೆ ಎಂದು ಪ್ರಧಾನಿ ಸಚಿವಾಲಯ ಮಾಹಿತಿ ನೀಡಿದೆ. ಈ ಹರಾಜು ಪ್ರಕ್ರಿಯೆಯಿಂದ ಬರುವ ಮೊತ್ತವನ್ನು ನಮಾಮಿ ಗಂಗಾ ಯೋಜನೆಗೆ ಬಳಸಲಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+