Viral Video: ಅಯ್ಯಯ್ಯೋ.. ಬುಲೆಟ್ ಬೈಕ್ ಸವಾರನ ಜೀವ ತೆಗೆದ ಕೋಣ!

ರೋಡ್ ಮೇಲೆ ಬೈಕ್ ಸವಾರಿ ಮಾಡುವಾಗ ಮೈ ತುಂಬಾ ಕಣ್ಣು ಇರಬೇಕು ಅಂತಾರೆ ವೃತ್ತಿಪರ ಚಾಲಕರು. ಯಾಕಂದ್ರೆ ಅಕಸ್ಮಾತ್ ಒಂದು ಚೂರು ಏನಾದ್ರೂ ಎಡವಟ್ಟು ಮಾಡಿಕೊಂಡ್ರೆ ಜೀವ ಹೋಗೋದು ಗ್ಯಾರಂಟಿ. ಅದರಲ್ಲೂ ನಾಯಿ, ಎಮ್ಮೆ, ಹಸು ಅಡ್ಡ ಬಂದ್ರೆ ಬೈಕ್ ಸವಾರರ ಕಥೆ ಮುಗಿದೇ ಹೋಯ್ತು ಅನ್ನಬೇಕು. ಇಲ್ಲೂ ಅಷ್ಟೇ ತನ್ನಪಾಡಿಗೆ ಬುಲೆಟ್‌ನ ಹತ್ತಿ, ಬೈಕ್ ಸವಾರಿ ಹೊರಟಿದ್ದ ಸವಾರನಿಗೆ ಕೋಣ ಒಂದು ಬಂದು ಗುದ್ದೇ ಬಿಟ್ಟಿದೆ!

ಬೆಂಗಳೂರು ನಗರದಂಥ ದೊಡ್ಡ ದೊಡ್ಡ ಸಿಟಿಯಲ್ಲಿ ಬೈಕ್ ಸವಾರರಿಗೆ ನಾಯಿಗಳ ಕಾಟ ಇದ್ರೆ, ಸಣ್ಣ ಪುಟ್ಟ ಹಳ್ಳಿಗಳಲ್ಲಿ ಹಸು & ಎಮ್ಮೆ ಅಥವಾ ಕೋಣಗಳ ಕಾಟ ಹೆಚ್ಚಿರುತ್ತದೆ. ಹೀಗಿದ್ದಾಗ ತುಂಬಾ ಹುಷಾರಾಗಿ ಬೈಕ್ ಓಡಿಸಬೇಕು. ಹೀಗಿದ್ದಾಗಲೇ ಬೈಕ್ ಸವಾರನೊಬ್ಬ ಎಚ್ಚರಿಕೆಯಿಂದ ಬುಲೆಟ್ ಬೈಕ್ ಚಾಲನೆ ಮಾಡದ ಪರಿಣಾಮ, ಕೋಣಕ್ಕೆ ಗುದ್ದಿ ಕೆಳಗಡೆ ಬಿದ್ದಿದ್ದಾನೆ. ಆ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ ಮುಂದೆ ಓದಿ, ಹಾಗೇ ವಿಡಿಯೋ ಕೂಡ ಇದೆ ನೋಡಿ.

Attention Royal Enfield Owners: Buffalo Colliding with Bullet Rider Video Goes Viral

ಹೆಂಗಿತ್ತು ಗೊತ್ತಾ ಭಯಾನಕ ದೃಶ್ಯ?

ಕೋಣ ಬುಲೆಟ್ ಬೈಕ್ ಸವಾರನಿಗೆ ಗುದ್ದಿರುವ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ದೃಶ್ಯದಲ್ಲಿ ಕಂಡುಬರುವಂತೆ, ಭಾರತದ ಹಳ್ಳಿ ಒಂದರಲ್ಲಿ ಮಹಿಳೆ ಒಬ್ಬರು ಕೋಣವನ್ನು ಓಡಿಸಿಕೊಂಡು ಹೋಗುತ್ತಿರುತ್ತಾರೆ. ಹೀಗಿದ್ದಾಗ ಮಾತು ಕೇಳದ ಹಠ ಮಾಡುತ್ತಿದ್ದ ಕೋಣ ಅತ್ತ, ಇತ್ತ ತಿರುಗುತ್ತಾ ಮುಂದೆ ಹೋಗುತ್ತಿರುತ್ತದೆ.

ಕೋಣದ ಈ ವರ್ತನೆ ನೋಡಿ ನೋಡಿ ಕೊನೆಗೆ ಕೋಪಗೊಂಡ ಮಹಿಳೆಯು ಆ ಕೋಣಕ್ಕೆ ಹಿಂದೆಯಿಂದ, ಕೈಯಲ್ಲಿ ಒಮ್ಮೆ ಏಟು ಕೊಟ್ಟಿದ್ದಾಳೆ ಆ ಮಹಿಳೆ. ಹೀಗಿದ್ದಾಗ ರಸ್ತೆಯನ್ನು ಬಿಟ್ಟು ಪಕ್ಕಕ್ಕೆ ಹೋಗುತ್ತದೆ ಆ ಮುಂಗೋಪಿ ಮೊಂಡು ಕೋಣ. ಆದರೆ ಈ ಸಮಯದಲ್ಲಿ ಬುಲೆಟ್ ಬೈಕ್ ಸವಾರನೊಬ್ಬ ಬಂದೇ ಬಿಡುತ್ತಾನೆ, ಆತನಿಗೆ ಕೋಣ ಗುದ್ದಿಬಿಡುತ್ತದೆ!

ಹೆಲ್ಮೆಟ್ ಹಾಕದೆ ತಪ್ಪು ಮಾಡಿದ!

ಹಿಂಗೆ ಬುಲೆಟ್ ಬೈಕ್ ಸವಾರ ರಸ್ತೆಯಲ್ಲಿ ಹೆಲ್ಮೆಟ್ ಹಾಕದೆ, ಜಾಲಿಯಾಗಿ ಬರುತ್ತಿರುವಾಗ ದಿಢೀರ್ ಕೋಣ ರೊಚ್ಚಿಗೆದ್ದು ಬಿಡುತ್ತೆ. ಹೀಗೆ, ರಸ್ತೆ ಪಕ್ಕದಲ್ಲಿ ಇದ್ದ ಕೋಣ ಗಮನಿಸದ ಆ ಬುಲೆಟ್ ಬೈಕ್ ಸವಾರ ತನ್ನ ಬೈಕ್‌ನ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡು ಮುಂದೆ ನುಗ್ಗುತ್ತಾನೆ. ಆಗ ಆ ಕೋಣಕ್ಕೆ ಅದೇನು ಹುಚ್ಚು ಹಿಡಿದಿತ್ತೋ ಗೊತ್ತಿಲ್ಲ, ತನ್ನ ಪಕ್ಕದಲ್ಲೇ ಹೋಗುತ್ತಿದ್ದ ಬುಲೆಟ್ ಬೈಕ್ ಸವಾರನಿಗೆ ಗುದ್ದಿಬಿಡುತ್ತದೆ.

Attention Royal Enfield Owners: Buffalo Colliding with Bullet Rider Video Goes Viral

ಕೋಣದ ಓನರ್ ಮಾಡಿದ್ದು ಏನು?

ಮೊದಲೇ ವೇಗವಾಗಿ ಬುಲೆಟ್ ಓಡಿಸುತ್ತಿದ್ದ ಚಾಲಕ ಕೋಣ ಗುದ್ದಿರುವ ರಭಸಕ್ಕೆ ಹಿಡಿತಕ್ಕೆ ಸಿಗದವಂತೆ ರಪ್ ಎಂದು ನೆಲಕ್ಕೆ ಬಿಳುತ್ತಾನೆ. ಆತ ತಲೆಗೆ ಹೆಲ್ಮೆಟ್ ಹಾಕದ ಹಿನ್ನೆಲೆಯಲ್ಲಿ ಆತನ ತಲೆ ನೆಲಕ್ಕೆ ಬಡಿದು, ಜ್ಞಾನತಪ್ಪಿ ಬೀಳುತ್ತಾನೆ. ಕೊನೆಗೆ ಕೋಣದ ಓನರ್ ಮಹಿಳೆ ಭಯದಲ್ಲಿ ಬಂದು, ಆ ಬುಲೆಟ್ ಬೈಕ್ ಚಾಲಕನ ಸ್ಥಿತಿ ಗಮನಿಸಿದ್ದಾಳೆ. ಬೈಕ್ ಸವಾರನು ಬಿದ್ದು ಒದ್ದಾಡುವುದನ್ನು ಗಮನಿಸಿ ಭಯಗೊಂಡಿದ್ದಾಳೆ.

ಒಟ್ನಲ್ಲಿ ಹೀಗೆ ಬುಲೆಟ್ ಬೈಕ್ ಸವಾರನಿಗೆ ಕೋಣ ಒಂದು ಗುದ್ದಿರುವ ವಿಡಿಯೋ ವೈರಲ್ ಆಗುತ್ತಿದ್ದು, ಬೈಕ್ ಸವಾರನ ಸ್ಥಿತಿ ಹೇಗಿದೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಆದರೆ ಆತನಿಗೆ ದೊಡ್ಡದಾಗಿ ಪೆಟ್ಟಾಗಿರೋದು ಪಕ್ಕಾ ಅಂತ ಸೋಷಿಯಲ್ ಮೀಡಿಯಾದಲ್ಲಿ ಜನ ಈಗ ಮಾತನಾಡಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಬೈಕ್ ಓಡಿಸುವಾಗ ಮರೆಯದೆ ಹೆಲ್ಮೆಟ್‌ನ ಧರಿಸಿ ಹಾಗೆ ನಿಮ್ಮ ಜೀವದ ಜೊತೆ ನಿಮ್ಮನ್ನು ನಂಬಿ ಬದುಕುವವರ ಜೀವನ ಉಳಿಸಿ. ಈ ತಪ್ಪು ಮಾಡಿದರೆ ಹೋದ ಜೀವ ಮತ್ತು ಜೀವನ ಮತ್ತೆ ಬರಲ್ಲ. ಪ್ರತಿ ವರ್ಷ ಭಾರತದಲ್ಲಿ ಹೀಗೆ ಹೆಲ್ಮೆಟ್ ಧರಿಸದೆ ಹಲವರು ಜೀವ ಬಿಡ್ತಿದ್ದಾರೆ. ಸರ್ಕಾರ ಕೂಡ, ಹೆಲ್ಮೆಟ್ ಕಡ್ಡಾಯ ಮಾಡಿದ್ದರೂ ಬೈಕ್ ಸವಾರರು ಅದನ್ನ ಪಾಲನೆ ಮಾಡುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+