ನಟಿ ಮೇಲೆ ಕಿರುಕುಳ, ನನ್ನ ಪಾತ್ರವಿಲ್ಲ ಎಂದ ಸ್ಟಾರ್ ನಟ
ಬಹುಭಾಷಾ ನಟಿ ಮೇಲೆ ಇತ್ತೀಚೆಗೆ ನಡೆದ ಹಲ್ಲೆ, ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಜನಪ್ರಿಯ ಮಲಯಾಳಂ ನಟ ದಿಲೀಪ್ ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ನನ್ನ ಪಾತ್ರವಿಲ್ಲ, ಪೊಲೀಸರು ನನ್ನನ್ನು ಪ್ರಶ್ನಿಸಿಲ್ಲ ಎಂದಿದ್ದಾರೆ.
ತಿರುವನಂತಪುರಂ, ಫೆಬ್ರವರಿ 22: ಬಹುಭಾಷಾ ನಟಿ ಮೇಲೆ ಇತ್ತೀಚೆಗೆ ನಡೆದ ಹಲ್ಲೆ, ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಜನಪ್ರಿಯ ಮಲಯಾಳಂ ನಟ ದಿಲೀಪ್ ಪ್ರತಿಕ್ರಿಯಿಸಿದ್ದಾರೆ. ಮಲಯಾಳಂ ಮನೋರಾಮ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ಈ ಕೇಸಿನಲ್ಲಿ ನನ್ನ ಪಾತ್ರವಿಲ್ಲ, ಪೊಲೀಸರು ನನ್ನನ್ನು ಪ್ರಶ್ನಿಸಿಲ್ಲ ಎಂದಿದ್ದಾರೆ.
ನನ್ನ ಹೆಸರನ್ನು ಈ ಪ್ರಕರಣದಲ್ಲಿ ಎಳೆದು ತರಲಾಗುತ್ತಿದೆ. ಇದೊಂದು ಸಂಚು. ಆಲಪ್ಪುಳ ಮೂಲದ ನಟ ಎಂದು ಸುದ್ದಿ ಹಬ್ಬಿಸಿರುವ ಸುದ್ದಿ ವಾಹಿನಿಗಳೇ ಈ ಬಗ್ಗೆ ಸತ್ಯಾಂಶ ಬಹಿರಂಗ ಪಡಿಸಲಿ. ನನ್ನ ಮನಗೆ ವಿಚಾರಣೆಗಾಗಿ ಪೊಲೀಸರು ಬಂದಿಲ್ಲ. ನಾನು ಕೂಡಾ ಠಾಣೆಗೆ ಹೋಗಿಲ್ಲ. ಆಧಾರ ರಹಿತ ಸುದ್ದಿಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಡಲಾಗುತ್ತಿದೆ. ಇದೊಂದು ವ್ಯವಸ್ಥಿತ ಸಂಚು ಎಂದು ದಿಲೀಪ್ ಹೇಳಿದ್ದಾರೆ.[ಜನಪ್ರಿಯ ರೀಲ್ ಜೋಡಿ ರಿಯಲ್ಲಾಗಿ ಮದ್ವೆಯಾದ್ರು!]
[ನಂ.1 ತಾರಾ ಜೋಡಿ ಸಂಸಾರ ಛಿದ್ರ ಛಿದ್ರ] || [ಟೈಮ್ಸ್ ಆಫ್ ಇಂಡಿಯಾ ವಿರುದ್ಧ ತಿರುಗಿ ಬಿದ್ದ ಮಲ್ಲು ಸ್ಟಾರ್]
ಮಮ್ಮೂಟಿ, ಮೋಹನ್ ಲಾಲ್ , ಸುರೇಶ್ ಗೋಪಿ ನಂತರ ಸೂಪರ್ ಸ್ಟಾರ್ ಪಟ್ಟಕ್ಕೇರಿದ ದಿಲೀಪ್ ಅವರು ಮಾಲಿವುಡ್ ನಲ್ಲಿ ಪ್ರಭಾವ ಹೊಂದಿದ್ದಾರೆ. ಉದಯೋನ್ಮುಖ ನಟಿಯ ಮೇಲೆ ಹಲ್ಲೆ ಮಾಡಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ನೇರವಾಗಿ ಬೈಯಲಾಗುತ್ತಿದೆ. ಇದಕ್ಕೆಲ್ಲ ಉತ್ತರವಾಗಿ ದಿಲೀಪ್ ಪ್ರತಿಕ್ರಿಯಿಸಿದ್ದಾರೆ.

ಇದೊಂದು ಸಂಚು ಎಂದ ದಿಲೀಪ್
ನನ್ನ ಹೆಸರನ್ನು ಈ ಪ್ರಕರಣದಲ್ಲಿ ಅನಗತ್ಯವಾಗಿ ಎಳೆದು ತರಲಾಗುತ್ತಿದೆ. ಇದೊಂದು ಸಂಚು. ಆಳುವ ಮೂಲದ ನಟ ಎಂದು ಸುದ್ದಿ ಹಬ್ಬಿಸಿರುವ ಸುದ್ದಿ ವಾಹಿನಿಗಳೇ ಈ ಬಗ್ಗೆ ಸತ್ಯಾಂಶ ಬಹಿರಂಗ ಪಡಿಸಲಿ. ಆಳುವ ಮೂಲದ ಯುವ ನಟ ಎನ್ನಲಾಗಿದೆ. ನಂತರ ಸ್ಟಾರ್ ನಟನ ಕೈವಾಡ ಎಂದು ಸುದ್ದಿ ಹಬ್ಬಿಸಲಾಗಿದೆ. ಇದಕ್ಕೆ ಅಂತ್ಯ ಹಾಡಬೇಕಿದೆ ಎಂದಿದ್ದಾರೆ

ನಾನೇನು ಆರೋಪಿಯಲ್ಲ
ನನ್ನ ಮನಗೆ ವಿಚಾರಣೆಗಾಗಿ ಪೊಲೀಸರು ಬಂದಿಲ್ಲ. ನಾನು ಕೂಡಾ ಠಾಣೆಗೆ ಹೋಗಿಲ್ಲ. ಈ ಕೇಸಿನಲ್ಲಿ ನಾನು ಆರೋಪಿಯಾಗಿದ್ದೇನೆ, ಆದ್ರೆ, ಪೊಲೀಸರು ನನ್ನನ್ನು ವಿಚಾರಣೆ ಒಳಪಡಿಸಲ್ಲ ಎಂಬ ಆಧಾರ ರಹಿತ ಸುದ್ದಿಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಡಲಾಗುತ್ತಿದೆ. ಇದೊಂದು ವ್ಯವಸ್ಥಿತ ಸಂಚು ಎಂದು ದಿಲೀಪ್ ಹೇಳಿದ್ದಾರೆ.

ಮಂಜು ಜತೆ ಬಂಧನ ಕಳಚಿಕೊಂಡ ಮೇಲೆ
ನಟಿ ಮಂಜು ವಾರಿಯರ್ ಹಾಗೂ ದಿಲೀಪ್ ನಡುವಿನ ವಿವಾಹ ಬಂಧನ ಮುರಿದು ನಂತರ ದಿಲೀಪ್ ಅವರು ಇತ್ತೀಚೆಗೆ ನಟಿ ಕಾವ್ಯ ಮಾಧವನ್ ಅವರನ್ನು ಮದುವೆಯಾಗಿದ್ದು ಗೊತ್ತಿರಬಹುದು. ಆದರೆ, ಮಂಜು ವಾರಿಯರ್ ಅವರೊಂದಿಗೆ ವಿವಾಹ ವಿಚ್ಛೇದನ ಪಡೆಯುವ ಸಂದರ್ಭದಲ್ಲಿ ಈಗ ಹಲ್ಲೆಗೊಳಲಾಗಿರುವ ನಟಿ ಅವರು ಮಂಜು ಪರ ನಿಂತಿದ್ದರು. ಇದರಿಂದ ದಿಲೀಪ್ ಹಾಗೂ ನಟಿ ನಡುವೆ ಕಂದಕ ಏರ್ಪಟ್ಟಿತ್ತು ಎಂಬ ಸುದ್ದಿಯಿತ್ತು

ದಿಲೀಪ್ ವಿರುದ್ಧ ನಟಿಯರು
ಸಂಯುಕ್ತಾ, ಶ್ವೇತಾ, ಗೀತು ಪೂರ್ಣಿಯಾ ಹಾಗೂ ಈಗ ಹಲ್ಲೆಗೊಳಗಾದ ನಟಿಯರು 2014ರಲ್ಲಿ ದಿಲೀಪ್ ರಿಂದ ವಿಚ್ಛೇದನ ಪಡೆದ ಸ್ಟಾರ್ ನಟಿ ಮಂಜು ವಾರಿಯರ್ ಬೆಂಬಲಕ್ಕೆ ನಿಂತಿದ್ದರು. ಆದರೆ, ಇದರಿಂದ ದಿಲೀಪ್ ಕೋಪಗೊಂಡಿದ್ದರು, ಈಗ ಹಲ್ಲೆಗೊಳಗಾದ ನಟಿ ಮೇಲೆ ಚಿತ್ರರಂಗ ನಿಷೇಧ, ನಿರ್ಬಂಧ ಹೇರಲು ಪರೋಕ್ಷವಾಗಿ ಕಾರಣರಾಗಿದ್ದರು ಎಂಬ ಸುದ್ದಿ ಹಬ್ಬಿತ್ತು. ಆದರೆ, ಮಂಜು ಇದಕ್ಕೆಲ್ಲ ಸ್ಪಷ್ಟನೆ ನೀಡಿದ್ದರು.











Click it and Unblock the Notifications