ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ 11 ರು ಇಳಿಕೆ
ನವದೆಹಲಿ, ಜುಲೈ 01: ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಲಾಗಿದೆ, ಪ್ರತಿ ಸಿಲಿಂಡರ್ ಮೇಲೆ 11 ರು ಕಡಿತಗೊಳಿಸಲಾಗಿದೆ. ಆದರೆ, ವಿಮಾನ ಇಂಧನ(ಎಟಿಎಫ್) ಬೆಲೆ ಸತತ ಐದನೇ ತಿಂಗಳು ಏರಿಕೆ ಮಾಡಲಾಗಿದ್ದು, ಶೇ5.5ರಷ್ಟು ಏರಿಕೆ ಕಂಡಿದೆ.
ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಎರಡು ಬಾರಿ ಏರಿಕೆ ಮಾಡಲಾಗಿತ್ತು. ಆದರೆ, ಜುಲೈ 01 ರಂದು ಸಿಲಿಂಡರ್ ಬೆಲೆ ಇಳಿಸಲಾಗಿದೆ. [ಪ್ರಧಾನ ಮಂತ್ರಿ "ಉಜ್ವಲ" ಯೋಜನೆ ಎಂದರೇನು?]
ಜೂನ್ 1 ರಂದು ಎಲ್ ಪಿಜಿ ಪ್ರತಿ ಸಿಲಿಂಡರ್ ಬೆಲೆ 21ರು ಹಾಗೂ ವಿಮಾನ ಇಂಧನ (ಎಟಿಎಫ್) ದರ ಕೂಡಾ ಶೇ 9.2ರಷ್ಟು ಏರಿಕೆಯಾಗಿತ್ತು. ದೆಹಲಿಯಲ್ಲಿ ಸಬ್ಸಿಡಿ ರಹಿತ ಗೃಹಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ 548.50ರು ನಷ್ಟಿತ್ತು. ಈಗ 537.50 ರು ನಷ್ಟಾಗಲಿದೆ.

ವಾರ್ಷಿಕ 12 ಸಿಲಿಂಡರ್ ಕೋಟಾ ನಂತರ ಪಡೆಯುವ 14.2ಕೆ.ಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಮೇ 01ರಂದು 527.50 ರು ಗೇರಿಸಲಾಗಿತ್ತು. ಸಬ್ಸಿಡಿ ಸಹಿತ 14.2 ಕೆಜಿ ತೂಗುವ ಎಲ್ ಪಿಜಿ ಸಿಲಿಂಡರ್ ಬೆಲೆ 421.16 ರು ನಷ್ಟಿದೆ.
ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ.












Click it and Unblock the Notifications