ಸಮೀಕ್ಷೆ: ಗೋವಾದಲ್ಲಿ ಬಿಜೆಪಿಯದ್ದೇ ಆಧಿಪತ್ಯ, ಲೆಕ್ಕಕಷ್ಟೆ ಎಎಪಿ

Subscribe to Oneindia Kannada

ಪಣಜಿ, ಫೆಬ್ರವರಿ 1: ಸಣ್ಣ ಆದರೆ ಬಿಜೆಪಿ ಪಾಲಿನ ಅತಿ ಮುಖ್ಯ ರಾಜ್ಯ ಗೋವಾದಲ್ಲಿ ಕೇಸರಿ ಪಕ್ಷ ಅಧಿಕಾರ ಉಳಿಸಿಕೊಳ್ಳಲಿದೆ ಅಂತ ಹೆಚ್ಚಿನ ಸಮೀಕ್ಷೆಗಳು ಹೇಳಿವೆ. ಈ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೇರುವ ಎಎಪಿ ಮತ್ತು ಕಾಂಗ್ರೆಸ್ ಆಸೆಗೆ ಮತದಾರರು ತಣ್ಣೀರೆರಚಲಿದ್ದಾರೆ..[ಗೋವಾ: ಭಾಷಣದಲ್ಲಿ ಲಂಚದ ಪ್ರಸ್ತಾಪ; ಕೇಜ್ರಿವಾಲ್ ಮೇಲೆ ಎಫ್ಐಆರ್]

40 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ಫೆಬ್ರವರಿ 4ರಂದು ಚುನಾವಣೆ ನಡೆಯಲಿದೆ. ಚುನಾವಣೆಗೆ ನಾಲ್ಕು ದಿನಗಳಿರುವಾಗ ಇಂಡಿಯಾ ಟುಡೇ-ಆಕ್ಸಿಸ್ ಸಮೀಕ್ಷೆ ಬಿಡುಗಡೆಯಾಗಿದ್ದು ರಾಜ್ಯದಲ್ಲಿ ಬಿಜೆಪಿ 22-25 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ. ಇನ್ನು ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನಕಷ್ಟೆ ತೃಪ್ತಿ ಪಟ್ಟುಕೊಳ್ಳಬಹುದು ಎಂದು ಹೇಳಿರುವ ಸಮೀಕ್ಷೆ 12-14 ಸ್ಥಾನಗಳು ಸಿಗಬಹುದು ಎಂದು ಅಂದಾಜು ಮಾಡಿದೆ. ಎಎಪಿ 1-2 ಸ್ಥಾಣಗಳಲ್ಲಷ್ಟೆ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.[ಗೋವಾ: ಉದ್ಯೋಗ ಸೃಷ್ಠಿಯೇ ಬಿಜೆಪಿ ಪ್ರಣಾಳಿಕೆಯ ಮಂತ್ರ]

Assembly Election Survey: Goa in the hands of BJP

ಇತರ ಸಮೀಕ್ಷೆಗಳತ್ತ ನೋಡುವುದಾದರೆ, ಕೌಟಿಲ್ಯ ಬಿಜೆಪಿ-14, ಕಾಂಗ್ರೆಸ್-7, ಎಎಪಿ-14 ಹಾಗೂ ಎಂಜಿಪಿ 6 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದೆ.

ಪ್ರುಡೆಂಟ್ ಮೀಡಿಯಾ ಸಮೀಕ್ಷೆ ಬಿಜೆಪಿ 17-18, ಕಾಂಗ್ರೆಸ್ 12-13, ಎಎಪಿ 4-5, ಎಂಜಿಪಿ 3-4 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದೆ.

ಇನ್ನೊಂದು ಸಮೀಕ್ಷೆ ವಿಡಿಪಿ ಅಸೋಸಿಯೇಟ್ಸ್, ಬಿಜೆಪಿ 22, ಎಎಪಿ 9 ಮತ್ತು ಕಾಂಗ್ರೆಸ್ 6 ಸ್ಥಾನದಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India Today-Axis and ABP News survey says that BJP will won Goa assembly ellection. And Congress may give strong fight in the election.
Please Wait while comments are loading...