ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಪರ್ ಆಫರ್: ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ Free ಸ್ಕೂಟರ್!

|
Google Oneindia Kannada News

ಗುವಾಹಟಿ, ಅಕ್ಟೋಬರ್ 20: ಪಿಯುಸಿ ಹಾಗೂ ಎಸ್ಎಸ್ಎಲ್‌ಸಿ ಓದುತ್ತಿರುವ ಮಕ್ಕಳು ಈ ಬಾರಿ ಹೆಚ್ಚು ಅಂಕ ತೆಗೆದುಕೊಂಡರೆ ನೀನು ಕೇಳಿದ್ದನ್ನು ಕೊಡಿಸುತ್ತೀನಿ ಎನ್ನುವ ಪೋಷಕರ ಬಗ್ಗೆ ಕೇಳಿದ್ದೀರಿ ಅಲ್ಲವೇ. ಆದರೆ ಅಸ್ಸಾಂ ಸರ್ಕಾರವೇ ಅಂಥದೊಂದು ಆಫರ್ ಅನ್ನು ಕೊಡುತ್ತಿದೆ.

ರಾಜ್ಯದಲ್ಲಿ 12ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕೂಟರ್ ನೀಡುವುದಾಗಿ ಘೋಷಿಸಿದೆ. 2022ನೇ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ಅಂಕ ಪಡೆದುಕೊಂಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

World EV Day 2022: ಇವೇ ನೋಡಿ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್‌ಗಳು; ಬೆಲೆ ಎಷ್ಟು?World EV Day 2022: ಇವೇ ನೋಡಿ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್‌ಗಳು; ಬೆಲೆ ಎಷ್ಟು?

ಈ ವರ್ಷ ಹೈಯರ್ ಸೆಕೆಂಡರಿ (12ನೇ ತರಗತಿ) ಪರೀಕ್ಷೆಯಲ್ಲಿ ಉತ್ತೀರ್ಣರಾದ 35,800 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟರ್ ನೀಡಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಶೇ.60 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ 29,748 ಹುಡುಗಿಯರಿಗೆ ಮತ್ತು ಶೇ.75 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ 6,052 ಹುಡುಗರಿಗೆ ಸ್ಕೂಟರ್‌ಗಳನ್ನು ನೀಡಲಾಗುತ್ತಿದೆ.

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ಕಳೆದ ಬುಧವಾರ ಗುವಾಹಟಿಯ ಜನತಾ ಭವನದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇಂಥದೊಂದು ಆಫರ್ ಅನ್ನು ಕೊಡಲಾಗಿದೆ.

ವಿದ್ಯಾರ್ಥಿಗಳಿಗೆ ಯಾವಾಗ ಸಿಗುತ್ತೆ ಉಚಿತ ಸ್ಕೂಟರ್?

ವಿದ್ಯಾರ್ಥಿಗಳಿಗೆ ಯಾವಾಗ ಸಿಗುತ್ತೆ ಉಚಿತ ಸ್ಕೂಟರ್?

ಅಸ್ಸಾಂ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಸಚಿವ ಜಯಂತ್ ಮಲ್ಲಾ ಬರುವಾ ವಿವರಿಸಿದರು. ಸಚಿವ ಸಂಪುಟ ಸಭೆಯ ನಂತರದಲ್ಲಿ ಮಾತನಾಡಿದ ಅವರು, "ನವೆಂಬರ್ 30 ರಿಂದ ಸ್ಕೂಟರ್ ವಿತರಣಾ ಸಮಾರಂಭವು ನಡೆಯಲಿದೆ. ಈ ಸಂಬಂಧ ಉದ್ಘಾಟನಾ ಕಾರ್ಯಕ್ರಮವು ಕಾಮರೂಪ್ ಜಿಲ್ಲೆಯ ಕಾಮರೂಪ್ ನಗರದಲ್ಲಿ ನಡೆಯಲಿದೆ," ಎಂದು ಮಾಹಿತಿ ನೀಡಿದರು.

258.9 ಕೋಟಿ ರೂ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಸ್ಕೂಟರ್

258.9 ಕೋಟಿ ರೂ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಸ್ಕೂಟರ್

ಅಸ್ಸಾಂನಲ್ಲಿ 12ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸ್ಕೂಟರ್ ನೀಡುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಅಂದಾಜು ವೆಚ್ಚವನ್ನು ಲೆಕ್ಕ ಹಾಕಲಾಗುತ್ತಿದೆ. ರಾಜ್ಯದ ಉನ್ನತ ಶಿಕ್ಷಣ ಇಲಾಖೆಯು ನೋಡಲ್ ಪ್ರಾಂಶುಪಾಲರ ಮೂಲಕ ಫಲಾನುಭವಿಗಳಿಗೆ ನೋಂದಣಿ ಮತ್ತು ವಿಮೆಗಾಗಿ ಹಣಕಾಸಿನ ನೆರವು ನೀಡುತ್ತದೆ. ಈ ಯೋಜನೆಗಾಗಿ ಒಟ್ಟು 258.9 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.

ಪ್ರತಿ ತಿಂಗಳು ಸಹಾಯಕ ಪ್ರಾಧ್ಯಾಪಕರಿಗೆ 55 ಸಾವಿರ ವೇತನ!

ಪ್ರತಿ ತಿಂಗಳು ಸಹಾಯಕ ಪ್ರಾಧ್ಯಾಪಕರಿಗೆ 55 ಸಾವಿರ ವೇತನ!

ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಕೊಟ್ಟಿರುವ ಅಸ್ಸಾಂ ಸರ್ಕಾರವು ಸಹಾಯಕ ಪ್ರಾಧ್ಯಾಪಕರಿಗೂ ಗುಡ್ ನ್ಯೂಸ್ ಕೊಟ್ಟಿದೆ. ಪ್ರಾಂತೀಯ ಕಾಲೇಜುಗಳಲ್ಲಿ ನಿಗದಿತ ವೇತನಕ್ಕಾಗಿ ಕೆಲಸ ಮಾಡುವ ಸಹಾಯಕ ಪ್ರಾಧ್ಯಾಪಕರ ಮಾಸಿಕ ಸಂಭಾವನೆಯನ್ನು 55,000 ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಅಸ್ಸಾಂ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಲ್ಲದೇ ಎರಡನೇ ಹಂತದ ಮಿಷನ್ ಬಾಸುಂಧರ ಅನುಷ್ಠಾನದ ಬಗ್ಗೆಯೂ ರಾಜ್ಯ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದೆ.

English summary
Assam government gives free scooters to 35,800 meritorious students, Who Passed out 12th exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X