143 ವರ್ಷಗಳ ಬಳಿಕ ಕಾಡಿಗೆ ಸಿಂಹಗಳ ಎಂಟ್ರಿ; ಸಂರಕ್ಷಣೆಗೆ ಸರ್ಕಾರದ ಬಿಗಿ ಕ್ರಮ!

ಗುಜರಾತ್‌: ಬರೋಬ್ಬರಿ 143 ವರ್ಷಗಳ ಬಳಿಕ ಏಷ್ಯನ್‌ ಸಿಂಹಗಳು ಬರ್ಡಾ ಅರಣ್ಯಕ್ಕೆ ಮರಳಿರುವುದು ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ. ಸಿಂಹಗಳ ಪುನರಾಗಮನದ ಹಿನ್ನೆಲೆಯಲ್ಲಿ ಅವುಗಳಿಗೆ ಸುರಕ್ಷಿತ ಆವಾಸ ಕಲ್ಪಿಸುವುದು ಹಾಗೂ ಅರಣ್ಯ ಸಂರಕ್ಷಣೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಗುಜರಾತ್ಸರ್ಕಾರ ಅರಣ್ಯ ಇಲಾಖೆಯ ಆಡಳಿತ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ.

ಸಿಂಹಗಳ ಸಂರಕ್ಷಣೆ ಮತ್ತು ಪುನರ್ವಸತಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಪೋರ್‌ಬಂದರ್‌ ಅರಣ್ಯ ವಿಭಾಗದ ವ್ಯಾಪ್ತಿ ಹಾಗೂ ಆಡಳಿತ ವ್ಯವಸ್ಥೆಯನ್ನು ಪುನರ್‌ರಚಿಸಲಾಗಿದೆ. ಅರಣ್ಯ, ಪರಿಸರ ಇಲಾಖೆಗಳ ಮಾರ್ಗದರ್ಶನದಲ್ಲಿ ಕೈಗೊಂಡಿರುವ ಈ ಬದಲಾವಣೆಗಳ ಮೂಲಕ ಅರಣ್ಯ ವ್ಯಾಪ್ತಿಯ ರೇಂಜ್‌ಗಳು, ಬೀಟ್‌ಗಳು, ಅಧಿಕಾರಿಗಳ ಜವಾಬ್ದಾರಿ ಹಾಗೂ ಸಿಬ್ಬಂದಿಯ ಕರ್ತವ್ಯಗಳನ್ನು ಮರುಹೊಂದಿಸಲಾಗಿದೆ.

Asiatic lions Lions Return to Barda Forest After 143 Years Gujarat Steps Up Conservation Efforts

ಇದರ ಜತೆಗೆ ಅರಣ್ಯ ಇಲಾಖೆಗೆ ಅಗತ್ಯವಿರುವ ವಾಹನಗಳು, ಶಸ್ತ್ರಾಸ್ತ್ರಗಳು, ವೈರ್‌ಲೆಸ್‌ ಉಪಕರಣಗಳು ಸೇರಿದಂತೆ ವಿವಿಧ ಸಂಪನ್ಮೂಲಗಳನ್ನು ಸಮರ್ಪಕವಾಗಿ ವ್ಯವಸ್ಥೆ ಮಾಡಲಾಗಿದ್ದು, ಕಾಡಿನಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ ತ್ವರಿತವಾಗಿ ನಿರ್ಧಾರ ಕೈಗೊಳ್ಳಲು ಅನುಕೂಲವಾಗುವಂತೆ ವ್ಯವಸ್ಥೆ ರೂಪಿಸಲಾಗಿದೆ.

7 ರೇಂಜ್‌ಗಳ ಅಡಿಯಲ್ಲಿ ಅರಣ್ಯ ವಿಭಾಗ

ಹೊಸ ವ್ಯವಸ್ಥೆಯಡಿ ಪೋರ್‌ಬಂದರ್‌ ರೇಂಜ್‌ ಅನ್ನು ಪುನರ್‌ವ್ಯವಸ್ಥೆಗೊಳಿಸಲಾಗಿದ್ದು, 80 ಗ್ರಾಮಗಳ ವ್ಯಾಪ್ತಿಯ ಸುಮಾರು 6,840 ಹೆಕ್ಟೇರ್‌ ಪ್ರದೇಶವನ್ನು ಇದರ ಅಡಿಯಲ್ಲಿ ಸೇರಿಸಲಾಗಿದೆ.

ರಣವಾವ್‌ ರೇಂಜ್‌ನ ವ್ಯಾಪ್ತಿಯನ್ನೂ ವಿಸ್ತರಿಸಲಾಗಿದ್ದು, ಸುಮಾರು 27 ಗ್ರಾಮಗಳನ್ನು ಇದರ ವ್ಯಾಪ್ತಿಗೆ ತರಲಾಗಿದೆ. ಜಾಮ್‌ನಗರ ಅರಣ್ಯ ವಿಭಾಗದಲ್ಲಿದ್ದ ಕೆಲವು ಪ್ರದೇಶಗಳು ಹಾಗೂ ಭಾಣವಾಡ್‌ ರೇಂಜ್‌ ಕೂಡ ಪೋರ್‌ಬಂದರ್‌ ವಿಭಾಗದ ವ್ಯಾಪ್ತಿಗೆ ಸೇರ್ಪಡೆಯಾಗಿವೆ.

ಇದರೊಂದಿಗೆ ಕುತಿಯಾಗಾ ರೇಂಜ್‌, ಪೋರ್‌ಬಂದರ್‌ ಸೋಶಿಯಲ್‌ ಫಾರೆಸ್ಟ್ರಿ ಹಾಗೂ ರಣವಾವ್‌ ಸೋಶಿಯಲ್‌ ಫಾರೆಸ್ಟ್ರಿ ರೇಂಜ್‌ಗಳು ಒಂದೇ ಆಡಳಿತ ವ್ಯವಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ. ಒಟ್ಟಾರೆ ಪೋರ್‌ಬಂದರ್‌ ಅರಣ್ಯ ವಿಭಾಗದ ಅಡಿಯಲ್ಲಿ ಏಳು ರೇಂಜ್‌ಗಳು ಕಾರ್ಯನಿರ್ವಹಿಸಲಿವೆ.

ಇಬ್ಬರು ACFಗಳ ನೇತೃತ್ವದಲ್ಲಿ ಕಾರ್ಯಾಚರಣೆ

ವಿಸ್ತರಿಸಲಾದ ಅರಣ್ಯ ವಿಭಾಗವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಇಬ್ಬರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ (ACF) ಹುದ್ದೆಗಳನ್ನು ನಿಯೋಜಿಸಲಾಗಿದೆ. ಮೊದಲ ACF ಪೋರ್‌ಬಂದರ್‌ ರೇಂಜ್‌ ಹಾಗೂ ಸೋಶಿಯಲ್‌ ಫಾರೆಸ್ಟ್ರಿ ವಿಭಾಗಗಳನ್ನು ನೋಡಿಕೊಳ್ಳಲಿದ್ದಾರೆ. ಎರಡನೇ ACF ರಣವಾವ್‌, ಭಾಣವಾಡ್‌, ಕುತಿಯಾಗಾ ಹಾಗೂ ಮೊಬೈಲ್‌ ಸ್ಕ್ವಾಡ್‌ ವಿಭಾಗಗಳ ಮೇಲ್ವಿಚಾರಣೆ ನಡೆಸಲಿದ್ದಾರೆ.

ಈ ಸಂಪೂರ್ಣ ವಿಭಾಗವು ಜುನಾಗಢ್‌ ವನ್ಯಜೀವಿ ವೃತ್ತದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಅವರ ಮೇಲ್ವಿಚಾರಣೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

Asiatic lions: ಸಿಂಹಗಳಿಗೆ ಸುರಕ್ಷಿತ ಆವಾಸ ಕಲ್ಪಿಸುವ ಗುರಿ

143 ವರ್ಷಗಳ ಬಳಿಕ ಬರ್ಡಾ ಅರಣ್ಯಕ್ಕೆ ಸಿಂಹಗಳು ಮರಳಿರುವುದು ಈ ಪ್ರದೇಶದ ಪರಿಸರ ವ್ಯವಸ್ಥೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ. ಹೀಗಾಗಿ ಮರಳಿ ಬಂದಿರುವ ಸಿಂಹಗಳಿಗೆ ಯಾವುದೇ ತೊಂದರೆಯಾಗದಂತೆ ಸುರಕ್ಷಿತ ಆವಾಸ, ಆಹಾರ ಹಾಗೂ ಅಗತ್ಯ ಸಂರಕ್ಷಣಾ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.

ಅರಣ್ಯ ಸಂರಕ್ಷಣೆಯ ಜತೆಗೆ ಪರಿಸರ ಸಂಬಂಧಿತ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಹೊಸ ಆಡಳಿತ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಂಹಗಳ ಪುನರಾಗಮನದ ಬೆನ್ನಲ್ಲೇ ಅರಣ್ಯ ಇಲಾಖೆಯನ್ನು ಬಲಪಡಿಸಲು ಗುಜರಾತ್‌ ಸರ್ಕಾರ ಕೈಗೊಂಡಿರುವ ಈ ಕ್ರಮಗಳು ವನ್ಯಜೀವಿ ಸಂರಕ್ಷಣೆಯತ್ತ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+