ರೈಲ್ವೇ ಮಂಡಳಿ ನೂತನ ಅಧ್ಯಕ್ಷರಾಗಿ ಅಶ್ವನಿ ಲೊಹಾನಿ ನೇಮಕ
ನವದೆಹಲಿ, ಆಗಸ್ಟ್ 24: ಸರಣಿ ರೈಲು ದುರಂತಗಳ ನಂತರ ರೈಲ್ವೇ ಇಲಾಖೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ನೈತಿಕ ಹೊಣೆ ಹೊತ್ತು ಸುರೇಶ್ ಪ್ರಭು ರಾಜೀನಾಮೆಗೆ ಮುಂದಾಗಿದ್ದರು. ಏತನ್ಮಧ್ಯೆ ರೈಲ್ವೇ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಮಿತ್ತಲ್ ರಾಜೀನಾಮೆ ನೀಡಿದ್ದರು.
ಇದೀಗ ನೂತನ ರೈಲ್ವೇ ಮಂಡಳಿ ಅಧ್ಯಕ್ಷರಾಗಿ ಏರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಶ್ವನಿ ಲೊಹಾನಿ ಅವರನ್ನು ನೇಮಿಸಲಾಗಿದೆ.

ಕಳೆದ ಶನಿವಾರ ಮುಜಫ್ಫರ್‌ನಗರ ಸಮೀಪದ ಖತೌಲಿಯಲ್ಲಿ ನಡೆದ ಉತ್ಕಲ್ ಎಕ್ಸ್‌ಪ್ರೆಸ್ ಅಪಘಾತಕ್ಕೆ ಸಂಬಂಧಿಸಿದಂತೆ ಈ ಹಿಂದೆ 4ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. 3 ಅಧಿಕಾರಿಗಳನ್ನು ಕೆಸಲದಿಂದಲೇ ವಜಾ ಮಾಡಲಾಗಿತ್ತು.
ಏರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಹಿರಿಯ ಐಎಎಸ್ ಅಧಿಕಾರಿ ರಾಜೀವ್ ಬನ್ಸಾಲ್ ರನ್ನು ನೇಮಿಸಲಾಗಿದೆ.












Click it and Unblock the Notifications