ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ರ ವಿಧಾನಸಭೆ ಚುನಾವಣೆಗೆ ವೀಕ್ಷಕರನ್ನು ನೇಮಿಸಿದ ಕಾಂಗ್ರೆಸ್

|
Google Oneindia Kannada News

ನವದೆಹಲಿ, ಜನವರಿ 06: 2021 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗಾಗಿ ಆಯಾ ರಾಜ್ಯಗಳ ಚುನಾವಣಾ ಪ್ರಚಾರ ನಿರ್ವಹಣೆ ಮತ್ತು ಸಮನ್ವಯದ ಮೇಲ್ವಿಚಾರಣೆ ಮುಖಂಡರನ್ನು ನೇಮಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಆದೇಶ ಹೊರಡಿಸಿದ್ದಾರೆ.

ಭೂಪೇಶ್ ಬಘೆಲ್ ಮುಕುಲ್ ವಾಸ್ನಿಕ್, ಅಶೋಕ್ ಗೆಹ್ಲೋಟ್, ಬಿ.ಕೆ. ಹರಿಪ್ರಸಾದ್ ಮತ್ತು ಇತರರನ್ನು ಹಿರಿಯ ವೀಕ್ಷಕರಾಗಿ ನೇಮಕ ಮಾಡಲಾಗಿದೆ. ಚುನಾವಣೆ ಪ್ರಚಾರ ಉಸ್ತುವಾರಿ, ಸಮನ್ವಯ, ಸಂಘಟನೆ ಜವಾಬ್ದಾರಿಯನ್ನು ತಕ್ಷಣದಿಂದಲೇ ಈ ನಾಯಕರು ಹೊರಬೇಕಾಗುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಸಹಿ ಹಾಕಿರುವ ಆದೇಶ ಪ್ರತಿಯಲ್ಲಿ ಹೇಳಲಾಗಿದೆ.

2021ರಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳಲ್ಲಿ ಚುನಾವಣೆ ನಡೆಯಬೇಕಾಗಿದ್ದು, ಏಪ್ರಿಲ್ -ಮೇ ತಿಂಗಳಲ್ಲಿ ಚುನಾವಣೆ ಆಯೋಜನೆಯ ನಿರೀಕ್ಷೆಯಿದೆ. ಯಾವ ರಾಜ್ಯಕ್ಕೆ ಯಾವ ಮುಖಂಡರು ಚುನಾವಣಾ ವೀಕ್ಷಕರಾಗಿರುತ್ತಾರೆ ಎಂಬ ಪಟ್ಟಿ ಇಲ್ಲಿದೆ..

Congress President appoints Bhupesh Baghel, Ashok Gehlot, BK Hariprasad and others for overseeing Election Campaign Management

* ಅಸ್ಸಾಂ: ಭೂಪೇಶ್ ಬಘೇಲ್, ಮುಕುಲ್ ವಾಸ್ನಿಕ್, ಶಕೀಲ್ ಅಹ್ಮದ್ ಖಾನ್

* ಕೇರಳ: ಅಶೋಕ್ ಗೆಹ್ಲೋಟ್, ಲೀಝಿನ್ಹೋ ಫಲೆರಿಯೋ, ಜಿ ಪರಮೇಶ್ವರ

* ತಮಿಳುನಾಡು ಹಾಗೂ ಪುದುಚೇರಿ: ಎಂ ವೀರಪ್ಪ ಮೋಯ್ಲಿ, ಎಂಎಂ ಪಲ್ಲಂ ರಾಜು, ನಿತಿನ್ ರಾವತ್.

* ಪಶ್ಚಿಮ ಬಂಗಾಳ: ಬಿಕೆ ಹರಿಪ್ರಸಾದ್, ಅಲಂಗಿರ್ ಆಲಂ, ವಿಜಯ್ ಇಂದರ್ ಸಿಂಗ್ಲಾ.

English summary
Congress President appoints Bhupesh Baghel, Mukul Wasnik, Ashok Gehlot, BK Hariprasad and others as senior observers for overseeing Election Campaign Management & Coordination in states where assembly election is going to be held in 2021: Congress
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X