ಅತ್ಯಾಚಾರಿಗಳನ್ನು ಠಾಣೆಯಿಂದ ಎಳೆದೊಯ್ದು ಸಾಯಿಸಿದ ಜನ

ಇಟಾನಗರ, ಫೆಬ್ರವರಿ 20: ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ಬಂಧಿತರಾಗಿದ್ದ ಇಬ್ಬರು ಆರೋಪಿಗಳನ್ನು ಜನರು ಠಾಣೆಯಿಂದ ಹೊರಗೆಳೆದುಕೊಂಡುಬಂದು ಥಳಿಸಿ ಸಾಯಿಸಿದ ಘಟನೆ ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯಲ್ಲಿ ಫೆ.19 ರಂದು ನಡೆದಿದೆ.

ಅಸ್ಸಾಮಿನ ಟಿ ಪ್ಲಾಂಟೇಶನ್ ನಲ್ಲಿ ಕೆಲಸ ಮಾಡುತ್ತಿದ್ದ ಸಂಜಯ್ ಸೋಬರ್(30) ಮತ್ತು ಜಗದೀಶ್ ಲೋಹರ್(25) ಎಂಬ ಇಬ್ಬರನ್ನು ಠಾಣೆಯಿಂದ ಹೊರಗೆ ಒಂದು ಮಾರುಕಟ್ಟೆ ಪ್ರದೇಶಕ್ಕೆ ತಂದು, ಕಲ್ಲು ಹೊಡೆದು ಸಾಯಿಸಲಾಗಿದೆ.

ಫೆಬ್ರವರಿ 12 ರಂದು ಐದೂವರೆ ವರ್ಷದ ಮಗುವೊಂದು ಹಳ್ಳಿಯೊಂದರಿಂದ ನಾಪತ್ತೆಯಾಗಿತ್ತು. ಕೊನೆಗೆ ಮಗುವಿನ ರುಂಡವಿಲ್ಲದ ದೇಹ ಅರುಣಾಚಲ ಪ್ರದೇಶದ ನಮ್ಗೋ ಎಂಬ ಹಳ್ಳಿಯಲ್ಲಿ ಪತ್ತೆಯಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಪೊಲೀಸರು ಸಂಜಯ್ ಸೋಬರ್ ಮತ್ತು ಜಗದೀಶ್ ಲೋಹರ್ ನನ್ನು ಬಂಧಿಸಿದ್ದರು.

Arunachal Pradesh: Mob drags 2 rape-murder accused out of police station, beats them to death

ನಂತರ ಈ ಇಬ್ಬರೂ ತಾವೇ ಮಗುವಿನ ಮೇಲೆ ಅತ್ಯಾಚಾರ ಮಾಡಿ., ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ನಂತರ ಇಬ್ಬರನ್ನೂ ಕೋರ್ಟಿಗೆ ಒಪ್ಪಿಸಲಾಗಿತ್ತು. ಕೋರ್ಟಿನಲ್ಲಿ ಇವರನ್ನು ಪೊಲೀಸ್ ವಶಕ್ಕೆ ಒಪ್ಪಿಸಿತ್ತು.

ಪೊಲೀಸ್ ವಶದಲ್ಲಿದ್ದ ಈ ಇಬ್ಬರನ್ನು ಪೊಲೀಸ್ ಠಾಣೆಯಿಂದ ಎಳೆದೊಯ್ದ ಜನ ಪೊಲೀಸರೆದುರಲ್ಲೇ ಕಲ್ಲು ಹೊಡೆದು ಸಾಯಿಸಲಾಗಿದೆ. 2015 ರಲ್ಲಿ ನಾಗಾಲ್ಯಾಂಡ್ ನಲ್ಲೂ ಅತ್ಯಾಚಾರಿಯೊಬ್ಬನಿಗೆ ಜನರು ಇದೇ ರೀತಿಯ ಶಿಕ್ಷೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+