ಬಜೆಟ್ 2017: ಯಾವ್ದು ಏರಿಕೆ? ಯಾವ್ದು ಇಳಿಕೆ?

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 01: ಪ್ರಧಾನಿ ನರೇಂದ್ರ ಮೋದಿ ಅವರ ಎನ್ಡಿಎ ಸರ್ಕಾರದ ನಾಲ್ಕನೆ ಬಜೆಟ್ ನಲ್ಲಿ ಯಾವ ಯಾವ ವಸ್ತು ಬೆಲೆ ಏರಿದೆ? ಯಾವುದು ಕಡಿಮೆ? ಎಂಬ ಜನ ಸಾಮಾನ್ಯರ ಬಹು ನಿರೀಕ್ಷಿತ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಜಿಎಸ್ ಟಿ ಮಸೂದೆ ಮಂಡನೆ ಬಾಕಿ ಇರುವುದರಿಂದ ಸೇವಾ ತೆರಿಗೆ ಆಧಾರದ ಮೇಲೆ ಬೆಲೆ ಏರಿಕೆ ವರದಿ ಇಲ್ಲಿದೆ.

ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ್ ಯೋಜನೆಗಳಿಗೆ ಅನುಗುಣವಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪೂರ್ಣ ಪ್ರಮಾಣದ ಬಜೆಟ್ ಬುಧವಾರ ಮಂಡಿಸಿದ್ದಾರೆ.[ಜೇಟ್ಲಿ ಬಜೆಟ್ ಹೇಗಿದೆ? ಕನ್ನಡ ದಿನಪ್ರತ್ರಿಕೆ ಶೀರ್ಷಿಕೆ ನೋಡಿ]

ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ನಲ್ಲಿ ಕಳೆದ ಬಾರೆ ಸೇವಾ ತೆರಿಗೆಯನ್ನು ಶೇ.12.36ರಿಂದ ಶೇ.14ಕ್ಕೆ ಏರಿಕೆ ಮಾಡಿದ್ದಾರೆ. ವರ್ಷಾಂತ್ಯಕ್ಕೆ ಈ ಪ್ರಮಾಣ ಶೇ 18ಕ್ಕೇರಿದರೂ ಅಚ್ಚರಿಪಡಬೇಕಾಗಿಲ್ಲ. ಕಸ್ಟಮ್ ಶುಲ್ಕ ಏರಿಕೆಯಾಗಿದೆ. ಜಿಎಸ್ ಟಿ ಮಸೂದೆ ಪಾಸ್ ಆದಮೇಲೆ ಶೇ 25ರ ತನಕ ತೆರಿಗೆ ಹೆಚ್ಚಳಕ್ಕೆ ಸಿದ್ದರಾಗಬೇಕಿದೆ. (ಒನ್ಇಂಡಿಯಾ ಸುದ್ದಿ)

ಬೆಲೆ ಏರಿಕೆ ಪಟ್ಟಿಗೆ ಇನ್ನಷ್ಟು ವಸ್ತುಗಳು ಸೇರ್ಪಡೆ

ಬೆಲೆ ಏರಿಕೆ ಪಟ್ಟಿಗೆ ಇನ್ನಷ್ಟು ವಸ್ತುಗಳು ಸೇರ್ಪಡೆ

ಜೊತೆಗೆ ನಿರೀಕ್ಷೆಯಂತೆ ಪಾನ್ ಮಸಾಲ, ಸಿಗರೇಟ್, ಮದ್ಯದ ಮೇಲಿನ ಅಬಕಾರಿ ಸುಂಕ ಹಾಗೆ ಉಳಿಸಲಾಗಿದೆ. ಜುಲೈ 1 ರಂದು ಸರಕು ಸಾಗಾಣೆ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ. ಹೀಗಾಗಿ ಬೆಲೆ ಏರಿಕೆ ಪಟ್ಟಿಗೆ ಇನ್ನಷ್ಟು ವಸ್ತುಗಳು ಸೇರ್ಪಡೆಯಾಗಲಿವೆ.

ಸಿಗರೇಟು ಹಾಗೂ ತಂಬಾಕು ಪದಾರ್ಥ

ಸಿಗರೇಟು ಹಾಗೂ ತಂಬಾಕು ಪದಾರ್ಥ

* ಆಮದು ಪದಾರ್ಥ(impoted products)
* ವಿಮಾನಯಾನ
* ಮೊಬೈಲ್ ಫೋನ್ ಬಿಲ್, ಸ್ಮಾರ್ಟ್ ಫೋನ್
* ರೆಸ್ಟೋರೆಂಟ್ ನಲ್ಲಿ ಊಟ
* ಸಿಗರೇಟು ಹಾಗೂ ತಂಬಾಕು ಪದಾರ್ಥ, ಪಾನ್ ಮಸಾಲ ದರ ಏರಿಕೆ. ಶೇ 12ರಷ್ಟು ತೆರಿಗೆ

ಬಜೆಟ್ 2017 ಏರಿಕೆ

ಬಜೆಟ್ 2017 ಏರಿಕೆ

* ಪಿಸಿಬಿ ಮೇಲೆ ಶೇ 2ರಷ್ಟು ತೆರಿಗೆ
* ಗೋಡಂಬಿ ಮೇಲಿನ ಸುಂಕ ಶೇ 30 ರಿಂದ ಶೇ 45 ರಷ್ಟು ಏರಿಕೆ
* ಬೆಳ್ಳಿ, ಬೆಳ್ಳಿ ನಾಣ್ಯ ಶೇ 12.5ರಷ್ಟು ಸುಂಕ
* ಕಂಪ್ಯೂಟರ್ ಉಪಕರಣಗಳ ಆಮದು ಸುಂಕ ಏರಿಕೆ
* ಕ್ಲಬ್ ಗಳಲ್ಲಿ ಊಟ, ನೋಟ, ಆಟ ಎಲ್ಲವೂ ಕೈ ಕಚ್ಚಲಿದೆ.
* ಕ್ಲಬ್, ಜಿಮ್ ಗಳಲ್ಲಿ ಸದಸ್ಯತ್ವ ದರ ಏರಿಕೆ.

ಇಳಿಕೆ ಯಾವುದು?

ಇಳಿಕೆ ಯಾವುದು?

* ಇ ಟಿಕೆಟ್ (ರೈಲ್ವೆ ಬುಕ್ಕಿಂಗ್)
* ಸೋಲಾರ್ ಪ್ಯಾನಲ್
* ಹಣ್ಣು ತರಕಾರಿಗಳಿಗೆ ಸೇವಾ ತೆರಿಗೆ ಇಲ್ಲ
* ಜೀವ ರಕ್ಷಕ ಔಷದಗಳ ಬೆಲೆ ಇಳಿಕೆ
* ದ್ರವೀಕೃತ ನೈಸರ್ಗಿಕ ಅನಿಲ ಮೇಲಿನ ಅಬಕಾರಿ ಸುಂಕ(custom duty) ಶೇ 5 ರಿಂದ ಶೇ 2.5ಕ್ಕೆ ಇಳಿಕೆ
* ರಾಸಾಯನಿಕ ಅಮ್ಲಗಳು(ಎಂಟಿಎ) ಮೇಲಿನ ಅಬಕಾರಿ ಸುಂಕ ಶೇ7.5 ರಿಂದ ಶೇ 5ಕ್ಕೆ ಇಳಿಕೆ

ಡಿಜಿಟಲ್ ಇಂಡಿಯಾ ಸಾಧನ

ಡಿಜಿಟಲ್ ಇಂಡಿಯಾ ಸಾಧನ

* ನಿಕ್ಕೆಲ್ ಲೋಹ ಮೇಲಿನ ಸುಂಕ ಶೇ 2.5 ತೆಗೆದು ಹಾಕಲಾಗಿದೆ.
* ಸಿಎನ್ ಸಿ ಮಷಿನ್ ಹಾಗೂ ಟೂಲ್ಸ್ ಮೇಲಿನ ಅಬಕಾರಿ ಸುಂಕ ಶೇ7.5 ರಿಂದ ಶೇ 2.5ಕ್ಕೆ ಇಳಿಕೆ
* ಬಯೋಗ್ಯಾಸ್ ಮಷಿನ್ ಮೇಲೆ ಶೇ 10 ರಿಂದ ಶೇ 5ರಷ್ಟು ಇಳಿಕೆ
* ಎಲ್ ಇ ಡಿ ಉತ್ಪಾದನೆ ಮೇಲೆ ಶೇ 5ರಷ್ಟು ಮಾತ್ರ ಸುಂಕ
* ನೈಲಾನ್ ಮೊನೊ ಫಿಲಮೆಂಟ್ ಮೇಲಿನ ಅಬಕಾರಿ ಸುಂಕ ಶೇ7.5 ರಿಂದ ಶೇ 5ಕ್ಕೆ ಇಳಿಕೆ
* ಮೈಕ್ರೋ ಎಟಿಎಂ, ಫಿಂಗರ್ ಪ್ರಿಂಟ್ ಸ್ಕ್ಯಾನರ್/ ರೀಡರ್, ಐರೀಸ್ ಸ್ಕ್ಯಾನರ್ ಮೇಲೆ ಸುಂಕ ಇಲ್ಲ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Union Budget 2017 : Finance Minister Arun Jaitley presented Union Budget in Lok Sabha today (Feb.01). Check Which commodity is dearer and which is costlier.
Please Wait while comments are loading...