ಫೋನ್ ಬಳಕೆ ಪ್ರಶ್ನಿಸಿದಕ್ಕೆ ತನ್ನ ಸೇನಾಧಿಕಾರಿಯನ್ನೇ ಗುಂಡಿಕ್ಕಿ ಕೊಂದ ಯೋಧ!
ಶ್ರೀನಗರ, ಜುಲೈ 18 : ಕರ್ತವ್ಯದ ವೇಳೆ ಮೊಬೈಲ್ ಫೋನ್ ಬಳಸಿದ್ದನ್ನು ಪ್ರಶ್ನಿಸಿದ ಹಿರಿಯ ಅಧಿಕಾರಿಯನ್ನು ಭಾರತೀಯ ಸೇನೆಯ ಯೋಧನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಲ್ಲಿ ಕರ್ತವ್ಯ ನಿರತರಾಗಿದ್ದ ಯೋಧ ಮೊಬೈಲ್ ಬಳಸುತ್ತಿದ್ದುದನ್ನು ಮೇಜರ್ ಶಿಖರ್ ಥಾಪಾ ಪ್ರಶ್ನಿಸಿದ್ದಾರೆ. ಈ ವಿಷಯದಲ್ಲಿ ಮೇಜರ್ ಮತ್ತು ಯೋಧನ ನಡುವೆ ವಾಗ್ವಾದ ನಡೆದಿದೆ. ವೇಳೆ ಕೋಪಿತಗೊಂಡ ಯೋಧ ತನ್ನ ಸೇನಾಧಿಕಾರಿ ಮೇಲೆ ಗುಂಡು ಹಾರಿಸಿದ್ದಾನೆ.

ಶಿಖರ್ ಥಾಪಾ 71 ಸಶಸ್ತ್ರ ಪಡೆಯ ಸೇನಾಧಿಕಾರಿಯಾಗಿದ್ದರು. ಕರ್ತವ್ಯದಲ್ಲಿರುವಾಗ ಮೊಬೈಲ್ ಫೋನ್ ಬಳಸುವಂತಿಲ್ಲ ಎಂದು ಹೇಳಿ ಥಾಪಾ ಅವರು ಯೋಧನ ಕೈಯಿಂದ ಫೋನ್ ಕಿತ್ತುಕೊಂಡಿದ್ದರು.
ಸೂಕ್ಷ್ಮ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಕಮಾಂಡಿಂಗ್ ಆಫೀಸರ್ ಗೆ ದೂರು ನೀಡುವುದಾಗಿಯೂ ಥಾಪಾ ಅವರು ಯೋಧನಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.












Click it and Unblock the Notifications