Aravalli Mountain Explained: 4 ರಾಜ್ಯಗಳ ಹಸಿರು ತಡೆಗೋಡೆ "ಅರಾವಳಿ ಪರ್ವತ"ದಲ್ಲಿ ಗಣಿಗಾರಿಕೆ ಭೂತ, ಇಲ್ಲಿದೆ ಸಂಪೂರ್ಣ ವಿವರ
ನವ ದೆಹಲಿ: ದೇಶದಾದ್ಯಂತ ಇದೀಗ ಹೊಸ ಅಭಿಯಾನ ಶುರುವಾಗಿದೆ. ಅದರಲ್ಲೂ ರಾಜಸ್ಥಾನ ಹಾಗೂ ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿನ ಜನರು ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ದೇಶದ ಮೂರಕ್ಕೂ ಹೆಚ್ಚು ರಾಜ್ಯಗಳ ಕೋಟ್ಯಾಂತರ ಜನರಿಗೆ ಮುಖ್ಯವಾಗಿ ಗ್ರಾಮೀಣ ಭಾಗದ ಜನರಿಗೆ ಗಾಳಿ ಹಾಗೂ ನೀರಿನ ವಿಚಾರದಲ್ಲಿ ಆಶಾಕಿರಣವಾಗಿರುವ ಅರಾವಳಿ ಪರ್ವತಗಳಲ್ಲಿ ಗಣಿಗಾರಿಕೆ ವಿಚಾರವು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಇಷ್ಟಕ್ಕೂ ಏನಿದು ಅರಾವಳಿ ಪರ್ವತ ಹಾಗೂ ಈ ಶುರುವಾಗಿರುವ ಅಭಿಯಾನವೇನು, ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
2 ಶತಕೋಟಿ ವರ್ಷಗಳಷ್ಟು ಅಳೆಯದಾಗಿರುವ ರಾಜಸ್ಥಾನದ ಅರಾವಳಿ ಪರ್ವತ ಶ್ರೇಣಿಯಲ್ಲಿ ಗಣಿಗಾರಿಕೆಯ ಸದ್ದು ಕೇಳಿ ಬರುತ್ತಿದೆ. ಹಸಿರನ್ನೇ ಹೊದ್ದು ಮಲಗಿರುವ ಈ ಪರ್ವತವು ಕೋಟ್ಯಾಂತರ ಜನರ ಬದುಕು ಹಸನಾಗಲು ಕಾರಣವಾಗಿದೆ. 2025ರ ವರ್ಷಾಂತ್ಯದಲ್ಲಿ ಅರಾವಳಿ ಪರ್ವಶ್ರೇಣಿ ಮತ್ತೆ ರಾಷ್ಟ್ರೀಯ ಚರ್ಚೆಗೆ ಬಂದಿದೆ. #SaveAravalli ಎನ್ನುವ ಹ್ಯಾಶ್ಟ್ಯಾಗ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಕ್ಕೆ ಪ್ರಾರಂಭವಾಗಿದೆ. ಭಾರತದ ಅತ್ಯಂತ ಹಳೆಯ ಪರ್ವತ ಶ್ರೇಣಿಗಳಲ್ಲಿ ಒಂದಾಗಿರುವ ಅರಾವಳಿಗೆ ಈ ಗಣಿಗಾರಿಕೆ ಮುನ್ನುಡಿಯು ಸಾವಿಗೆ ಮುಂದಡಿ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ನವೆಂಬರ್ 20 ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹಾಗೂ ಕೇಂದ್ರ ಸರ್ಕಾರವು ನೀಡಿದಂತಹ ಟಿಪ್ಪಣಿಯ ನಂತರ ಅರಾವಳಿ ಪರ್ವತ ಶ್ರೇಣಿಯ ವಿಚಾರವು ಚರ್ಚೆಯ ಮುನ್ನೆಲೆಗೆ ಬಂದಿದೆ. ನೆಲಮಟ್ಟದಿಂದ (ಭೂಪ್ರದೇಶದಿಂದ) 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಎತ್ತರದಲ್ಲಿರುವ ಪರ್ವತಗಳು ಮಾತ್ರ ಪರ್ವತ ಎಂದು ಪರಿಗಣಿಸಬಹುದು. ಅದಕ್ಕಿಂತ ಕಡಿಮೆ ಇರುವ ಪ್ರದೇಶ (ಪರ್ವತ)ವನ್ನು ಇನ್ಮುಂದೆ ಪರ್ವತ ವ್ಯಾಪ್ತಿಗೆ ಸೇರಿಸುವುದಿಲ್ಲ. ಈ ಪ್ರದೇಶದಲ್ಲಿ ಗಣಿಗಾರಿಕೆ ಮಾಡಬಹುದು ಎಂದು ಕೇಂದ್ರ ಸರ್ಕಾರವು ವ್ಯಾಖ್ಯಾನಿಸಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದ ವ್ಯಾಖ್ಯಾನವು ಇದೀಗ ಭಾರೀ ವಿರೋಧಕ್ಕೆ ಕಾರಣವಾಗಿದೆ. ಅಲ್ಲದೇ ಇದರಿಂದ ಅರಣ್ಯ ನಾಶ ಹಾಗೂ ಪ್ರಕೃತಿ ಮೇಲೆ ಪರಿಣಾಮ ಬೀರುವುದು ಖಚಿತ ಎನ್ನುವುದು ಈ ಆತಂಕಕ್ಕೆ ಕಾರಣ.
ಅರಾವಳಿಯಲ್ಲಿ ಹೆಚ್ಚಿನ ಪ್ರದೇಶ 90 ಮೀಟರ್ ಒಳಗೆ ಇದೆ !
ಇನ್ನು ರಾಜಸ್ಥಾನದ ಅರಾವಳಿ (ಪರ್ವತ) ಬೆಟ್ಟಗಳಲ್ಲಿ 100 ಮೀ.ಗಿಂತ ಕಡಿಮೆ ಎತ್ತರದಲ್ಲಿ ಇರುವ ಬೆಟ್ಟಗಳಲ್ಲಿ ಗಣಿಗಾರಿಕೆ ಮಾಡುವುದಕ್ಕೆ ಇದೀಗ ಅಧಿಕೃತವಾಗಿ ಮಾನ್ಯತೆ ಸಿಕ್ಕಂತೆ ಆಗಿದೆ. ಆದರೆ ಅರಾವಳಿಯಲ್ಲಿ 100 ಮೀ.ಗಿಂತ ಕಡಿಮೆ ಇರುವ ಪ್ರದೇಶಗಳೇ ಹೆಚ್ಚಾಗಿ ಇವೆ. ಇಲ್ಲಿ ಗಣಿಗಾರಿಕೆ ಪ್ರಾರಂಭವಾದ ರಾಜಸ್ಥಾನ ಮಾತ್ರವಲ್ಲ ದೆಹಲಿ ಹಾಗೂ ಎನ್ಸಿಆರ್ ಸೇರಿದಂತೆ ಹಲವು ಪ್ರದೇಶಗಳಿಗೆ ಸಂಕಷ್ಟ ಫಿಕ್ಸ್ ಎಂದೇ ಹೇಳಲಾಗುತ್ತಿದೆ.
ಅರಾವಳಿ ಪರ್ವತ ಯಾಕೆ ಮುಖ್ಯ ಹಾಗೂ ಏನೆಲ್ಲಾ ನಡೆದಿದೆ
1. ಅರಾವಳಿಯಲ್ಲಿ 100 ಮೀ.ಗಿಂತ ಕಡಿಮೆ ಎತ್ತರದಲ್ಲಿ ಇರುವ ಬೆಟ್ಟಗಳಲ್ಲಿ ಗಣಿಗಾರಿಕೆಗೆ ಅವಕಾಶ.
2. ಅರಾವಳಿಯಲ್ಲಿ ಈಗ ಗಣಿಗಾರಿಕೆಗೆ ಅವಕಾಶ ಸಿಗಲಿದ್ದು ಇದರ ಪರಿಣಾಮವು ರಾಜಸ್ಥಾನ, ಹರಿಯಾಣ, ದೆಹಲಿ - ಎನ್ಸಿಆರ್ ಮೇಲೆ ಪರಿಣಾಮ ಬೀರಲಿದೆ.
3. ಪರಿಸರವಾದಿಗಳು ಇಲ್ಲಿನ ಶೇಕಡಾ 90 ರಷ್ಟು ಪರಿಸರ ನಾಶವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
4. ಗಣಿಗಾರಿಕೆ, ರಿಯಲ್ ಎಸ್ಟೇಟ್ ಹಾಗೂ ಕಟ್ಟಡಗಳ ನಿರ್ಮಾಣದಿಂದ ಪರಿಸರ ನಾಶವಾಗಲಿದೆ.
5. ರಾಜಸ್ಥಾನದ ಮರಳುಗಾಡಿನ ತೀವ್ರತೆ ತಡೆ, ಭೂಮಿಯಲ್ಲಿ ನೀರಿನಾಂಶ ಉಳಿಯುವುದಕ್ಕೆ ಹಾಗೂ ಸುತ್ತಮುತ್ತಲಿನ ನದಿ, ಕೆರೆಗಳು ಹಾಗೂ ಸಸ್ಯ ಜೀವ ಸಂಕುಲಕ್ಕೆ ಅರಾವಳಿ ಆಸರೆಯಾಗಿದೆ.
6. ಈ ಭಾಗದಲ್ಲಿ ಗಣಿಗಾರಿಕೆಯಿಂದ ಪರಿಸರ ನಾಶವಾಗಲಿದೆ. ಮರುಭೂಮೀಕರಣ ವೇಗಗೊಳಿಸಬಹುದು, ಅಂತರ್ಜಲ ಮರುಪೂರಣವನ್ನು ದುರ್ಬಲಗೊಳಿಸಬಹುದು ಮತ್ತು ಈಗಾಗಲೇ ಮಾಲಿನ್ಯ ಮತ್ತು ನೀರಿನ ಕೊರತೆಯಿಂದ ಬಳಲುತ್ತಿರುವ ಪ್ರದೇಶದಲ್ಲಿ ಜೀವವೈವಿಧ್ಯತೆಯನ್ನು ನಾಶಪಡಿಸಬಹುದು ಎಂದು ಎಚ್ಚರಿಸುತ್ತಿದ್ದಾರೆ.
7. ಅರಾವಳಿ ಶ್ರೇಣಿಯು ಚಂಬಲ್, ಸಬರಮತಿ ಮತ್ತು ಲುನಿಯಂತಹ ಪ್ರಮುಖ ನದಿಗಳ ಮೂಲವಾಗಿದೆ. ಇದು ಮರುಭೂಮೀಕರಣದ ವಿರುದ್ಧ ಗುರಾಣಿಯಾಗಿ ಕೆಲಸ ಮಾಡುತ್ತಿದೆ.
8. ಪೂರ್ವ ರಾಜಸ್ಥಾನದ ಕಡೆಗೆ ಥಾರ್ ಮರುಭೂಮಿಯ ಹರಡುವಿಕೆಯನ್ನು ಗಂಗಾ ಬಯಲಿಗೆ ತಡೆಯುತ್ತದೆ. ಇದು ಮರಳುಗಲ್ಲು, ಸುಣ್ಣದ ಕಲ್ಲು, ಅಮೃತಶಿಲೆ, ಗ್ರಾನೈಟ್ ಮತ್ತು ಸೀಸ, ಸತು, ತಾಮ್ರ, ಚಿನ್ನ ಮತ್ತು ಟಂಗ್ಸ್ಟನ್ ನಂತಹ ಖನಿಜಗಳಿಂದ ಸಮೃದ್ಧವಾಗಿದೆ.
ಅರಾವಳಿಯ ಪರಿಸರದ ಮೇಲೆ ನಿಂತಿದೆ ಈ ರಾಜ್ಯಗಳ ಭವಿಷ್ಯ
ದೆಹಲಿಯಲ್ಲಿ ದಶಕಗಳಲ್ಲೇ ಗಾಳಿಯ ಗುಣಮಟ್ಟವು ಅತ್ಯಂತ ಕಳಪೆಯಾಗಿದೆ. ಈ ರೀತಿ ಇರುವಾಗ ದೆಹಲಿಯೂ ಸೇರಿದಂತೆ ವಿವಿಧ ರಾಜ್ಯಗಳಿಗೆ ಆಸರೆಯಾಗಿರುವ ಅರಾವಳಿಯನ್ನು ಉಳಿಸಬೇಕು ಎನ್ನುವ ಅಭಿಯಾನ ಜೋರಾಗಿದೆ. ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯಾದ್ಯಂತ 692 ಕಿ.ಮೀ. ವ್ಯಾಪಿಸಿರುವ ಅರಾವಳಿ ಪರ್ವತ ಶ್ರೇಣಿಯು ಅತಿಕ್ರಮಣಗೊಳ್ಳುತ್ತಿರುವ ಥಾರ್ ಮರುಭೂಮಿಯ ವಿರುದ್ಧ ಪ್ರಮುಖ ಹಸಿರು ತಡೆಗೋಡೆಯಾಗಿ ನಿಂತಿದೆ. ಇದು 2 ಶತಕೋಟಿ ವರ್ಷಗಳಷ್ಟು ಹಳೆಯದು. ಮರುಭೂಮಿೀಕರಣದ ವಿರುದ್ಧ ನೈಸರ್ಗಿಕ ತಡೆಗೋಡೆಯಾಗಿರುವುದು ಮಾತ್ರವಲ್ಲ ಲಕ್ಷಾಂತರ ಜನರಿಗೆ ನೀರು ಮತ್ತು ಶುದ್ಧ ಗಾಳಿಯ ಪ್ರಮುಖ ಮೂಲವಾಗಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications