ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಶ್ನೆಗಳಿಗೆ ಉತ್ತರಿಸಿ, ಆರೋಪಗಳು ಬೇಡ: ಪ್ರಧಾನಿಗೆ ರಾಹುಲ್ ತಿರುಗೇಟು

By Sachhidananda Acharya
|
Google Oneindia Kannada News

ನವದೆಹಲಿ, ಫೆಬ್ರವರಿ 7: "ಪ್ರಶ್ನೆಗಳಿಗೆ ಉತ್ತರ ನೀಡಿ. ನಿಮ್ಮ ಆರೋಪಗಳು ಬೇಕಾಗಿಲ್ಲ," ಎಂದು ಲೋಕಸಭೆಯಲ್ಲಿ ದೀರ್ಘ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಫೆಲ್ ಡೀಲ್, ರೈತರು ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ರಾಹುಲ್ ಆಗ್ರಹಿಸಿದರು.

ರಾಫೇಲ್ ಡೀಲ್ ನಲ್ಲಿ ಗೋಲ್ ಮಾಲ್: ರಾಹುಲ್ ಗಂಭೀರ ಆರೋಪರಾಫೇಲ್ ಡೀಲ್ ನಲ್ಲಿ ಗೋಲ್ ಮಾಲ್: ರಾಹುಲ್ ಗಂಭೀರ ಆರೋಪ

"ನಾನು ವಿರೋಧ ಪಕ್ಷದ ನಾಯಕ ಅಲ್ಲ, ಪ್ರಧಾನಿ ಎಂಬುದನ್ನು ಅವರು ಮರೆತಂತೆ ಕಾಣಿಸುತ್ತಿದೆ," ಎಂದು ವರದಿಗಾರರಿಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದರು.

Answer questions, don't make allegations in Parl: Rahul to PM

"ಪ್ರಧಾನಿಗೆ ದೇಶದ ಜನರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ ಅವರು ಉತ್ತರಿಸುತ್ತಿಲ್ಲ.. ಇಲ್ಲಿ (ಸಂಸತ್) ನೀವು ಉತ್ತರಿಸಬೇಕೇ ಹೊರತು ದೇಶದ ಜನರಿಗೆ ಪ್ರಶ್ನೆಗಳನ್ನು ಕೇಳುವುದಲ್ಲ," ಎಂದು ರಾಹುಲ್ ತಿರುಗೇಟು ನೀಡಿದರು.

ರಾಹುಲ್ ಗಾಂಧಿಯವರ ಪ್ರಕಾರ ಪ್ರಧಾನ ಮಂತ್ರಿಗಳು ಕಾಂಗ್ರೆಸ್ ಪಕ್ಷದ ಬಗ್ಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಾತನಾಡಲಿ. ಆದರೆ ಸಂಸತ್ ನಲ್ಲಿ ಅಲ್ಲ. ಬದಲಿಗೆ ದೇಶದ ಜನರು ಪ್ರಧಾನಿಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಹೇಳಿದರು.

ಸಂಸತ್ ನಲ್ಲಿ ಕಾಂಗ್ರೆಸ್ ನ ಕಂಡಾಪಟ್ಟೆ ತರಾಟೆಗೆ ತೆಗೆದುಕೊಂಡ ಮೋದಿಸಂಸತ್ ನಲ್ಲಿ ಕಾಂಗ್ರೆಸ್ ನ ಕಂಡಾಪಟ್ಟೆ ತರಾಟೆಗೆ ತೆಗೆದುಕೊಂಡ ಮೋದಿ

"ಅವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ಹಕ್ಕಿದೆ. ಆದರೆ ಇದು ನಿಮ್ಮ ಪ್ರಶ್ನೆಗಳನ್ನು ಎತ್ತಲು ಸರಿಯಾದ ಜಾಗವಲ್ಲ. ಈ ಪ್ರಶ್ನೆಗಳನ್ನು ನೀವು ಸಾರ್ವಜನಿಕ ಸಭೆಗಳಲ್ಲಿ ಎತ್ತಬಹುದು, ಇಲ್ಲಲ್ಲ," ಎಂದು ರಾಹುಲ್ ಪ್ರತ್ಯುತ್ತರ ನೀಡಿದರು.

"ಇಲ್ಲಿ ನೀವು ದೇಶಕ್ಕೆ ಉತ್ತರ ನೀಡಲೇಬೇಕು. ನೀವು ಇಲ್ಲಿ ಆರೋಪಗಳನ್ನು ಮಾಡುವುದಲ್ಲ..." ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.

English summary
Congress president Rahul Gandhi today said Prime Minister Narendra Modi needs to answer the country on questions posed to him on the Rafale deal, farmers and jobs instead of making allegations in Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X