ಸಲ್ಲುಗೆ ಬಂತು ಮತ್ತೊಂದು ಬೆದರಿಕೆ ಕರೆ: ಬುಲೆಟ್ ಫ್ರೂಫ್ ಕಾರು ಖರೀದಿಸಿದ್ರೂ ಭಯ ನಿಂತಿಲ್ಲ

ಬಾಲಿವುಡ್ ಮೆಗಾಸ್ಟಾರ್ ಸಲ್ಮಾನ್ ಖಾನ್‌ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಲಿವುಡ್ ಸೂಪರ್‌ಸ್ಟಾರ್‌ಗೆ ಇತ್ತೀಚೆಗೆ ಹಲವಾರು ಬೆದರಿಕೆಗಳು ಬಂದಿದ್ದವು. ಇದೀಗ ದಬಾಂಗ್ ನಟನಿಗೆ ಮತ್ತೊಂದು ಕೊಲೆ ಬೆದರಿಕೆ ಬಂದಿದೆ ಎಂದು ತಿಳಿದು ಬಂದಿದೆ. ಏಪ್ರಿಲ್ 10 ರಂದು ರಾತ್ರಿ 9 ಗಂಟೆಗೆ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಬೆದರಿಕೆ ಕರೆ ಬಂದಿದೆ. ಆರಂಭದಲ್ಲಿ ಕರೆ ಮಾಡಿದವರ ಗುರುತು ಪತ್ತೆಯಾಗಿರಲಿಲ್ಲ. ಸದ್ಯ ಪೊಲೀಸರು ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯ ಗುರುತು ಪತ್ತೆ ಮಾಡಿದ್ದಾರೆ.

ಸಲ್ಮಾನ್ ಖಾನ್ ಗೆ ಮತ್ತೊಂದು ಪ್ರಾಣ ಬೆದರಿಕೆ

ಕರೆ ಮಾಡಿದವರು ಇದೀಗ ಜೋಧಪುರದ ಗೌರಕ್ಷಕ್ ರಾಕಿ ಭಾಯ್ ಎಂದು ಗುರುತಿಸಲಾಗಿದೆ. ಈತ ಏಪ್ರಿಲ್ 30ರಂದು ಖಾನ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನಂತರ ಮುಂಬೈ ಪೊಲೀಸರು ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಅವರು ಕರೆ ಮಾಡಿದ ವ್ಯಕ್ತಿ ಇರುವ ಸ್ಥಳವನ್ನು ಪತ್ತೆ ಮಾಡಿದ್ದಾರೆ.

Another threat to Salman Khan: April 30 assassination plot

ಈ ಹಿಂದೆ ಕೊಲೆ ಬೆದರಿಕೆ

ಸಲ್ಮಾನ್ ಖಾನ್ರ ಆತ್ಮೀಯ ಗೆಳೆಯ ಹಾಗೂ ಮ್ಯಾನೇಜರ್ ಆಗಿರುವ ಪ್ರಶಾಂತ್ ಗುಂಜಲ್ಕರ್ ಅವರಿಗೆ ಈ ಹಿಂದೆ ಬೆದರಿಕೆ ಇ-ಮೇಲ್ ಬಂದಿತ್ತು. ಈ ಬೆದರಿಕೆ ಇ-ಮೇಲ್ ಅನ್ನು ಪಾತಕಿ ಗೋಲ್ಡಿ ಬ್ರಾರ್ನ ಆಪ್ತ ಮೋಹಿತ್ ಗರ್ಗ್ ಕಳಿಸಿದ್ದಾನೆ ಎನ್ನಲಾಗಿದೆ. ಮೋಹಿತ್ ಗಾರ್ಗ್ ಕಳುಹಿಸಿದ ಇಮೇಲ್ ನಲ್ಲಿ, "ಗೋಲ್ಡಿ ಬ್ರಾರ್ನ ನಿನ್ನ ಬಾಸ್ (ಸಲ್ಮಾನ್ ಖಾನ್) ಜೊತೆ ಮಾತನಾಡಬೇಕಂತೆ. ಲಾರೆನ್ಸ್ ನ ಸಂದರ್ಶನ ನೋಡಿಯೇ ಇರಬೇಕು ಅವನು. ಸಂದರ್ಶನ ನೋಡಿಲ್ಲ ಎಂದಾದರೆ ತೋರಿಸು ಅವನಿಗೆ. ಈ ವಿಷಯ ಇಲ್ಲಿಗೆ ಮುಗಿಸಬೇಕು ಎಂದರೆ ಗೋಲ್ಡಿ ಬ್ರಾರ್ನ ಜೊತೆ ಮಾತಾಡಲು ಹೇಳು.'' ಎಂದು ಹೇಳಿ ಬರೆಯಲಾಗಿದೆ.

ಸಲ್ಮಾನ್ ಖಾನ್ ಕೊಲ್ಲಲು ಪಾತಕಿ ಲಾರೆನ್ಸ್ ಬಿಷ್ಣೋಯಿ ಸಂಚು

ಬಾಲಿವುಡ್ ನಟ ಸ್ಮಾನ್ ಖಾನ್ ಅನ್ನು ಕೊಲ್ಲಲು ಉತ್ತರ ಭಾರತದ ನಟೋರಿಯಸ್ ಗ್ಯಾಂಗ್ ಒಂದು ಅಡಿಗಡಿಗೆ ಹೊಂಚು ಹಾಕುತ್ತಿದೆ. ಸಲ್ಮಾನ್ ಖಾನ್ ಅನ್ನು ಕೊಂದೇ ಕೊಲ್ಲುತ್ತೇನೆ ಎಂದು ಪಾತಕಿ ಲಾರೆನ್ಸ್ ಬಿಷ್ಣೋಯಿ ಹಲವು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಕೆಲವು ದಿನ ಹಿಂದಷ್ಟೇ ಸಲ್ಮಾನ್ ಖಾನ್ ಅನ್ನು ಕೊಲ್ಲವುದೇ ನನ್ನ ಜೀವನದ ಅಂತಿಮ ಗುರಿ ಎಂದು ಹೇಳಿದ್ದಾನೆ. ಅದರ ಬೆನ್ನಲ್ಲೇ ಸಲ್ಮಾನ್ ಖಾನ್​ಗೆ ಬೆದರಿಕೆ ಕರೆ ಹಾಗೂ ಸಂದೇಶಗಳು ಬರುತ್ತಲೇ ಇವೆ.

ಎಸ್‌ಯುವಿ ಖರೀದಿಸಿದ ಸಲ್ಮಾನ ಖಾನ್

ತನಗೆ ಬಂದ ಬೆದರಿಕೆಗಳ ನಡುವೆ ಸಲ್ಮಾನ್ ನಿಸ್ಸಾನ್ ಪೆಟ್ರೋಲ್ ಎಸ್‌ಯುವಿ ಖರೀದಿಸಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಇದುವರೆಗೆ ಲಭ್ಯವಿಲ್ಲದ ಕಾರಣ ಈ ಕಾರನ್ನು ಆಮದು ಮಾಡಿಕೊಳ್ಳಲಾಗಿದೆ. ಈ SUV ಯ ಯಾವುದೇ ಅಧಿಕೃತ ಬಿಡುಗಡೆ ಭಾರತದಲ್ಲಿ ನಡೆದಿಲ್ಲ. ಭದ್ರತೆಯ ದೃಷ್ಟಿಯಿಂದ ಈ ಕಾರನ್ನು ತನಗಾಗಿ ಪಡೆಯಲು ಸಲ್ಮಾನ್ ನಿರ್ಧರಿಸಿದ್ದಾರೆ.

'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಪ್ರಚಾರ

ಸಲ್ಮಾನ್ ಖಾನ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಮೊದಲ ಪ್ರಚಾರ ಕಾರ್ಯಕ್ರಮ, ಟ್ರೈಲರ್ ಬಿಡುಗಡೆ, ಏಪ್ರಿಲ್ 10 ರಂದು ಮುಂಬೈನಲ್ಲಿ ನಡೆಯಿತು. ಸೂಪರ್‌ಸ್ಟಾರ್ ಸ್ಟಾರ್-ಸ್ಟಡ್ಡ್ ಈವೆಂಟ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರು.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಖಾನ್ ಅವರ ಸಹ-ನಟರಾದ ಪೂಜಾ ಹೆಡ್ಗೆ, ಶೆಹನಾಜ್ ಗಿಲ್, ರಾಘವ್ ಜುಯಲ್, ಜಸ್ಸಿ ಗಿಲ್, ಸಿದ್ಧಾರ್ಥ್ ನಿಗಮ್, ಭೂಮಿಕಾ ಚಾವ್ಲಾ ಮತ್ತು ಹೆಚ್ಚಿನವರು ಭಾಗಿಯಾಗಿದ್ದರು.

ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಬಗ್ಗೆ

ಫರ್ಹಾದ್ ಸಾಮ್ಜಿ ನಿರ್ದೇಶನದ, ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಚಿತ್ರವು ಏಪ್ರಿಲ್ 21, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಭಾಗ್ಯಶ್ರೀ, ವೆಂಕಟೇಶ್ ದಗ್ಗುಬಾಟಿ ಮತ್ತು ವಿಜೇಂದರ್ ಸಿಂಗ್ ಸಹ ನಟಿಸಿದ್ದಾರೆ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಹಾಡಿನಲ್ಲಿ ರಾಮ್ ಚರಣ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+