ಮತ್ತೊಬ್ಬ ಶ್ರದ್ಧಾಳನ್ನು ಯಾವುದೇ ಅಫ್ತಾಬ್‌ಗಳಿಗೆ ಬಲಿಯಾಗಲು ಬಿಡುವುದಿಲ್ಲ ಎಂದ ಬಿಜೆಪಿ ಅಭ್ಯರ್ಥಿ
ದೆಹಲಿ, ನವೆಂಬರ್ 17: ಶ್ರದ್ಧಾ ವಾಕರ್ ಹತ್ಯೆ ಪ್ರಕರಣವು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಗೆ ಪ್ರವೇಶಿಸಿದೆ. ಛಾವಾಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿ ಯಾದವ್ ಗುರುವಾರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿ "ಇನ್ನು ಮುಂದೆ ಶ್ರದ್ಧಾ ಅವರಂತಹ ಸಹೋದರಿಯರು ಯಾವುದೇ ಅಫ್ತಾಬ್‌ಗಳಿಗೆ ಬಲಿಯಾಗಲು ನಾನು ಬಿಡುವುದಿಲ್ಲ" ಎಂದು ಭರವಸೆ ನೀಡಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಶಶಿ ಯಾದವ್ ಮಾತನಾಡಿ, 'ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಪ್ರತಿಯೊಬ್ಬ ಅಭ್ಯರ್ಥಿಯೂ ಪ್ರತಿಜ್ಞೆ ಮಾಡಬೇಕು. ಶ್ರದ್ಧಾ ಅವರಂತಹ ಪ್ರಕರಣಗಳು ನಡೆದಿರುವುದು ಇದು ಮೊದಲನೆಯದಲ್ಲ' ಎಂದರು. ಅವರ ಈ ಹೇಳಿಕೆಗೆ ನೆರೆದ ಜನ ಚಪ್ಪಾಳೆ ತಟ್ಟಿದರು. 250 ವಾರ್ಡ್‌ಗಳ ಎಂಸಿಡಿ ಡಿಸೆಂಬರ್ 4 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 7 ರಂದು ಮತ ಎಣಿಕೆ ನಡೆಯಲಿದೆ.
ये शपथ हर प्रत्याशी को लेनी चाहिए : किसी श्रद्धा को किसी आफ़ताब का शिकार नहीं बनने दूँगा : @ShashiYadavInd भाई
— Kapil Mishra (@KapilMishra_IND) November 17, 2022
pic.twitter.com/LQWzOfewGd
ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣ:
ಶ್ರದ್ಧಾ ವಾಲ್ಕರ್ ಅವರ ಹತ್ಯೆಯ ಆರೋಪದ ಮೇಲೆ ಪ್ರಿಯತಮ ಆಫ್ತಾಬ್ ಅಮೀನ್ ಪೂನಾವಾಲಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಾಸ್ತವವಾಗಿ ಆಫ್ತಾಬ್ ಹಾಗೂ ಶ್ರದ್ಧಾ ಲಿವಿಂಗ್ ಟುಗೆದರ್ ನಲ್ಲಿದ್ದರೆಂದು ವಿಚಾರಣೆ ಬಳಿಕ ತಿಳಿದು ಬಂದಿದೆ.

ಇವರಿಬ್ಬರ ನಡುವಿನ ವಾದದಿಂದಾಗಿ ಅಫ್ತಾಬ್ ಮೇ 18 ರಂದು ಶ್ರದ್ಧಾಳ ಕತ್ತು ಹಿಸುಕಿ ಕೊಂದಿದ್ದರು. ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಹಾಕಿದ್ದನು. ಮೃತ ದೇಹದ ತುಂಡುಗಳನ್ನು ಫ್ರಿಜ್‌ನಲ್ಲಿ ಇಟ್ಟಿದ್ದರು. ಬಳಿಕ ಅದನ್ನು 18 ದಿನಗಳ ಕಾಲ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಎಸೆದಿದ್ದರು.
ಇಬ್ಬರೂ 2019 ರಿಂದ ಒಟ್ಟಿಗೆ ವಾಸಿಸುತ್ತಿದ್ದರು. ಅವರ ಪೋಷಕರು ಒಟ್ಟಿಗೆ ಇರುವುದನ್ನು ವಿರೋಧಿಸಿದ ನಂತರ ಅವರು ದೆಹಲಿಗೆ ಓಡಿಹೋಗಿದ್ದರು. ಶ್ರದ್ಧಾ ಮದುವೆಗಾಗಿ ಆಫ್ತಾಬ್ ಅನ್ನು ಒತ್ತಾಯಿಸಲು ಪ್ರಾರಂಭಿಸಿದಾಗ ಇಬ್ಬರ ನಡುವೆ ವಾದ ಹುಟ್ಟಿಕೊಂಡಿದೆ. ಮೇ 18 ರಂದು ಮದುವೆಯ ಬಗ್ಗೆ ಇಬ್ಬರೂ ಜಗಳವಾಡಿದ್ದಾರೆ. ಇದರಿಂದ ಕೋಪಗೊಂಡ ಅಫ್ತಾಬ್ ಶ್ರದ್ಧಾ ಅವರನ್ನು ಕೊಂದಿದ್ದಾರೆ.

ಸುಮಾರು ಆರು ತಿಂಗಳ ನಂತರ ಶ್ರದ್ಧಾಳ ತಂದೆ ಶ್ರದ್ಧಾ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಆಕೆಯ ಸ್ನೇಹಿತರು ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದಾಗ ಕೊಲೆ ಬೆಳಕಿಗೆ ಬಂದಿದೆ.











Click it and Unblock the Notifications