ಉಡ್ತಾ ಪಂಜಾಬ್ ಉಡಾವಣೆಗೆ ಎನ್‌ಜಿಒ ಅಡ್ಡಿ

Written By:
Subscribe to Oneindia Kannada

ನವದೆಹಲಿ, ಜೂನ್ 15: ವಿವಾದಿತ ಉಡ್ತಾ ಪಂಜಾಬ್ ಚಿತ್ರ ಬಿಡುಗಡೆ ಅಂದುಕೊಂಡಂತೆ ಆಗುವ ಲಕ್ಷಣ ಕಾಣುತ್ತಿಲ್ಲ. ಚಿತ್ರ ಬಿಡುಗಡೆಗೆ ತಡೆ ಕೋರಿ ಪಂಜಾಬ್ ನ ಎನ್ ಜಿಒವೊಂದು ಸುಪ್ರೀಂಕೋರ್ಟ್ ಮೊರೆ ಹೋಗಿದೆ.

ಬಾಂಬೆ ಹೈ ಕೋರ್ಟ್ ವಿವಾದಿತ ಉಡ್ತಾ ಪಂಜಾಬ್ ಚಿತ್ರ ಬಿಡುಗಡೆಗೆ ಅನುಮತಿ ನೀಡುವಂತೆ ಸೆನ್ಸಾರ್ ಮಂಡಳಿಗೆ ತಿಳಿಸಿದ ನಂತರ ಇದೀಗ ಎನ್ ಜಿಒ ಚಿತ್ರದ ವಿರುದ್ಧ ನಿಂತುಕೊಂಡಿದೆ.[ಉಡ್ತಾ ಪಂಜಾಬ್‌ಗೆ ಒಂದೇ ಕತ್ತರಿ ಸಾಕೆಂದ ಬಾಂಬೆ ಹೈಕೋರ್ಟ್]

punjub
Photo Credit:

ಚಿತ್ರಕ್ಕೆ ಸಂಬಂಧಿಸಿದ ಒಂದೊಂದು ಕೇಸುಗಳು ಪಂಜಾಬ್ ಮತ್ತು ಹರಿಯಾಣದ ನ್ಯಾಯಾಲಯದಲ್ಲಿವೆ. ಅವುಗಳ ತೀರ್ಮಾನ ಹೊರ ಬರುವವರೆಗೆ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಎನ್ ಜಿಒ ಕೇಳಿಕೊಂಡಿದೆ.[ಉಡ್ತಾ ಪಂಜಾಬ್ ಚಿತ್ರಕ್ಕೆ 89 ಕಟ್, ಸೆನ್ಸಾರಿಗೆ ಟ್ವೀಟ್ ಪೆಟ್ಟು]

ಚಿತ್ರಕ್ಕೆ 89 ಕತ್ತರಿ ಪ್ರಯೋಗ ಮಾಡಿದ್ದ ಸೆನ್ಸಾರ್ ಮಂಡಳಿಗೆ ಬಾಂಬೆ ಹೈಕೋರ್ಟ್ ಮಂಗಳಾರತಿ ಮಾಡಿತ್ತು. ಉಡ್ತಾ ಪಂಜಾಬ್ ಚಿತ್ರದ ಕೇವಲ ಒಂದು ದೃಶ್ಯವನ್ನು ಕತ್ತರಿಸಿ ಸಿನಿಮಾ ಬಿಡುಗಡೆಗೆ ಅನುಮತಿ ನೀಡಬೇಕು ಎಂದು ಕೋರ್ಟ್ ತಿಳಿಸಿತ್ತು.[ಬೆಂಗ್ಳೂರು ಈಗ ಡ್ರಗ್ ಮಾಫಿಯಾ ಡೀಲ್ ಗೆ ತಂಗುದಾಣ!]

-
-
-
-
-

ಉಡ್ತಾ ಪಂಜಾಬ್ ಒಂದು ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, ಏಕ್ತಾಕಪೂರ್ ಅವರ ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಿಸಿದೆ. ಅನುರಾಗ್ ಕಶ್ಯಪ್, ಸಮೀರ್ ನಾಯರ್ ಸೇರಿದಂತೆ ಅನೇಕರು ಸಹ ನಿರ್ಮಾಪಕರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A day after the cast of the film Udta Punjab welcomed Bombay High Court's verdict to release the film as scheduled with just one cut, a Punjab based NGO has moved Supreme Court challenging the order. The petition filed by the NGO seeks a stay on the release of the film. There is one more case pending against the film-in Punjab and Haryana HC.
Please Wait while comments are loading...