Mass Hysteria: ವಿದ್ಯಾರ್ಥಿನಿಯರಿಗೆ ದೆವ್ವದ ಕಾಟ? ದಿಢೀರ್ ಕಿರುಚಾಡಿದ್ದೇಕೆ?

ಉತ್ತರಕಾಶಿ: ವಿದ್ಯಾರ್ಥಿನಿಯರು ಸಾಮೂಹಿಕವಾಗಿ ಕಿರುಚಾಡುತ್ತಾ, ವಿಚಿತ್ರವಾಗಿ ವರ್ತನೆ ತೋರಿದ ಘಟನೆ ಉತ್ತರಾಖಂಡ ರಾಜ್ಯದ ಶಾಲೆ ಒಂದರಲ್ಲಿ ನಡೆದಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಘಟನೆಗೆ ದೆವ್ವಗಳೇ ಕಾರಣ ಎಂಬ ಊಹಾಪೋಹ ಬಲು ಜೋರಾಗಿ ಹರಿದಾಡುತ್ತಿದೆ.

ಅಂದಹಾಗೆ ಉತ್ತರಾಖಂಡ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ಶಾಲೆ ಮತ್ತು ಕಾಲೇಜುಗಳಿಗೆ ಬೀಗ ಹಾಕಿ, ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿತ್ತು. ಆದ್ರೆ ಪ್ರವಾಹ ಇಳಿಕೆಯಾದ ಬಳಿಕ ವಿದ್ಯಾರ್ಥಿಗಳು ಎಂದಿನಂತೆ ಮತ್ತೆ ಶಾಲೆಗೆ ಮರಳಿದ್ದರು. ಹೀಗೆ ಶಾಲೆಗೆ ಮರಳಿದ ವಿದ್ಯಾರ್ಥಿನಿಯರು, ಶಾಲೆಯ ಕಟ್ಟಡವನ್ನ ಪ್ರವೇಶಿಸುತ್ತಿದ್ದಂತೆ ಹೆಂಗೆಂಗೋ ಆಡಿದ್ದಾರೆ. ಹತ್ತಾರು ವಿದ್ಯಾರ್ಥಿನಿಯರು ದಿಢೀರ್ ಹೀಗೆ ವಿಚಿತ್ರವಾಗಿ ವರ್ತಿಸುತ್ತಿರುವುದನ್ನ ನೋಡಿ, ಚಂಪಾವತಿ ಜಿಲ್ಲೆಯ ಬಾಗೇಶ್ವರ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

Another Mass Hysteria Incident reported in Uttarakhand

ಇಂತಹ ಘಟನೆಗೆ ಕಾರಣ ದೆವ್ವಗಳಾ?

ಮೇಲ್ನೋಟಕ್ಕೆ ಘಟನೆಗೆ ಮಾನಸಿಕ ರೋಗ ಕಾರಣ ಎಂಬ ಮಾತನ್ನ ತಜ್ಞರು ಹೇಳುತ್ತಿದ್ದು, ಆದ್ರೆ ಈ ಮಾತನ್ನ ನಂಬಲು ಬಾಗೇಶ್ವರ ಗ್ರಾಮಸ್ಥರು ಸಿದ್ಧವಾಗಿಲ್ಲ. ಹೀಗಾಗಿ ನಾನಾ ರೀತಿ ಊಹಾಪೋಹ ಹುಟ್ಟಿಕೊಂಡಿದೆ. ಅದರಲ್ಲೂ ದೇವರ ಶಾಪದಿಂದ ಹೀಗೆ ಆಗಿದೆ, ದೆವ್ವಗಳ ಕಾಟ ಇರಬಹುದು ಅನ್ನೋ ವಾದಗಳು ಹರಿದಾಡುತ್ತಿವೆ. ಸ್ಥಳೀಯ ಆಡಳಿತ ಮತ್ತು ಶಿಕ್ಷಣ ಇಲಾಖೆ ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿದೆ. ಹಲವು ವಿದ್ಯಾರ್ಥಿನಿಯರು ಹೀಗೆ ವಿಚಿತ್ರವಾಗಿ ವರ್ತಿಸಿದ್ದನ್ನು ನೋಡಿದ ಇತರ ವಿದ್ಯಾರ್ಥಿಗಳು ಕೂಡ ಬೆಚ್ಚಿಬಿದ್ದಿದ್ದಾರೆ. ಈ ಕಾರಣಕ್ಕೆ ಮಕ್ಕಳು ಶಾಲೆಗೆ ಚಕ್ಕರ್ ಹಾಕುವ ಭಯ ಕೂಡ ಶುರುವಾಗಿದೆ.

ಒಟ್ನಲ್ಲಿ ಪರ್ವತಗಳ ನಾಡು ಉತ್ತರಾಖಂಡ ರಾಜ್ಯದಲ್ಲಿ ಪದೇ ಪದೆ ಈ ರೀತಿ ಘಟನೆಗಳು ನಡೆಯುತ್ತಿರುವುದು ಭೀತಿ ಮೂಡಿಸಿದೆ. ಹೀಗಾಗಿ ಪರಿಸ್ಥಿತಿಯನ್ನ ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ. ಆದ್ರೆ ಈ ಸಮಸ್ಯೆ ಅದೆಷ್ಟು ಬೇಗ ಬಗೆಹರಿಯುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ತಮ್ಮ ಮಕ್ಕಳ ಪರಿಸ್ಥಿತಿಯನ್ನ ಕಂಡು ಪೋಷಕರು ಕೂಡ ಹೆದರಿದ್ದು, ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕೂಡ ಕುಸಿಯುವ ಭೀತಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+